ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಕಥಾಸಂಗ್ರಹ-೪ ನೆಯ ಭಾಗ ಕೊಂದು ತಾನೊಬ್ಬನೇ ಬದುಕಬೇಕೆಂಬ ವ್ಯರ್ಥವಾದ ದುರಾಶೆಯಿಂದ ಓಡಿಬಂದು ನಿಮ್ಮನ್ನು ಮರೆಹೊಕ್ಕಿರುವ ಭಾತೃದ್ರೋಹಿಯ ಕುದ್ರೋಹಿಯ ಆದ ಈ ದುರಾತ್ಯನಾದ ವಿಭೀಷಣನನ್ನು ಶೀಘ್ರವಾಗಿ ದೇಶಾಂತರಕ್ಕೆ ಓಡಿಸು. ನಿನಗೆ ಪರ ಲೋಕದಲ್ಲಿ ಸದ್ಧತಿಯು ದೊರೆಯುವುದಕ್ಕಾಗಿ ಚಿತ್ತೈಕಾಗ್ರತೆಯಿಂದ ನಿನ್ನ ಇಷ್ಟ ದೇವತೆಯನ್ನು ನೆನೆ. ಧೈರ್ಯಹೀನನಾಗಬೇಡ. ಎಚ್ಚರಿಕೆಯಿಂದಿರು ಎಂದು ಸಿಂಹ ನಾದವನ್ನು ಮಾಡುತ್ತ ಅಸಂಖ್ಯಾತ ಬಾಣಗಳಿಂದ ಲಕ್ಷಣನನ್ನು ಹೊಡೆದನು. ಆಗ ಲಕ್ಷಣನು ಪ್ರತಿ ಶರ ಪ್ರಯೋಗದಿಂದ ಅವನ ಬಾಣಗಳನ್ನೆಲ್ಲಾ ಕಡಿದು ಭೂಮಿಯಲ್ಲಿ ಕೆಡಹಿ ಧನುಸ್ಸನ್ನು ಎಡದ ಹಸ್ತದಲ್ಲಿ ಹಿಡಿದು ತೂಗುತ್ತ ವೀರಮಣಿಯಾದ ಲಕ್ಷ್ಮಣನು-ಎಲಾ ಬರಿಗೊಬ್ಬಿನ ಖಳ ರಕ್ಕಸನೇ ! ಕೇಳು. ಇನ್ನ ರೆಗಳಿಗೆಯಲ್ಲಿ ನಿನ್ನ ನಾಮವು ನಿರ್ನಾಮವಾಗುವುದು. ಅದಿರಲಿ. ಹತ್ತು ತಲೆಯ ದುಷ್ಟ ಕ್ರಿಮಿಯಂತೆ ಲೋಕಕಂಟಕನಾದ ನಿನ್ನ ತಂದೆಯನ್ನು ಕೊಲ್ಲಿಸುವು ದಕ್ಕಾಗಿ ನಮ್ಮಣ್ಣನನ್ನು ಕರಿಸುವೆನು. ನಮ್ಮ ವಿಜಯವಾರ್ತೆಯನ್ನು ತಿಳಿಸುವು ದಕ್ಕಾಗಿ ಅಯೋಧ್ಯೆಗೆ ಓಲೆಯನ್ನು ಬರಿಸುವೆನು. ನಮ್ಮ ಮನೆ ಹೊಕ್ಕ ವಿಭೀಷಣನನ್ನು ಲಂಕಾನಗರದ ಶಾಶ್ವತವಾದ ಅರಸುತನಕ್ಕೆ ಕಳುಹಿಸುವೆನು. ಎಲಾ ಖಳನೇ ! ಬರಿಯ ಬಾಯೊ ಬ್ಬಿನ ಜಳು ನುಡಿಗಳನ್ನಾಡುತ್ತಿರುವ ನಿನ್ನ ನಾಲಿಗೆಯನ್ನು ಛೇದಿಸುವೆನೆಂದು ಹೇಳಿ ಗರ್ಜಿಸಿ ಅಗಣ್ಯಶರಪರಂಪರೆಯನ್ನು ಪ್ರಯೋಗಿಸಿ ನಿಮೇಷಮಾತ್ರದಲ್ಲಿ ಸುರವಿ ರೋಧಿಯ ರಥರಥಾಶ್ವಸಾರಥಿಗಳನ್ನು ಕಡಿದುರುಳಿಸಿ ಭೂಗತಮಾಡಿದನು. ಆ ಕ ಣದಲ್ಲಿಯೇ ಇಂದ್ರಜಿತ್ತಿನ ಮಾತಾಮಹನಾದ ಮಯನು ದಿವ್ಯ ರಥ ವನ್ನೂ ಕುಶಲನಾದ ಸಾರಥಿಯನ್ನೂ ತ್ವರಿತಗತಿಪ್ರಯುಕ್ತಗಳಾದ ಕುದುರೆಗಳನ್ನೂ ಅಕ್ಷಯವಾದ ಬಾಣಸಮೂಹದಿಂದ ತುಂಬಲ್ಪಟ್ಟ ಬತ್ತಳಿಕೆಗಳನ್ನೂ ಭಯಂಕರವಾದ ಬಿಲ್ಲ ನ್ಯೂ' ಕಳುಹಿಸಿಕೊಟ್ಟನು. ಇ6ದ್ರಜಿತ್ತು ಶೀಘ್ರವಾಗಿ ಅವುಗಳನ್ನು ಅಂಗೀಕರಿಸಿ ಲಕ್ಷಣನನ್ನು ಕುರಿತು-ಇದು ಕೊ ! ಮಹಾ ಬಾಣವು ಬರುತ್ತಿದೆ. ಇದನ್ನು ಮಧ್ಯದಲ್ಲಿ ಸಡಿಲಿಸುವ ಶಕ್ತಿಯಿದ್ದರೆ ಬೇಗ ಧನುಸ್ಸಿನಲ್ಲಿ ಶ್ರೇಷ್ಟವಾದ ಬಾಣವನ್ನು ಹೂಡು ಎಂದು ಹೊಡೆಯಲು ಲಕ್ಷ್ಮಣನು ಅದನ್ನು ವಜ್ರಾಸ್ತ್ರದಿಂದ ಕತ್ತರಿಸಿ ಇಂದ್ರ ಜಿನ ಮಹಾ ರಥವು ಹದಿನಾರು ಯೋಜನಗಳಷ್ಟು ದೂರ ಹಿಂದಕ್ಕೆ ಹೋಗುವಂತೆ ಬಾಣವನ್ನು ಪ್ರಯೋಗಿಸಿದನು. ಇಂದ್ರಜಿತ್ತು ಆ ಮಹಾ ಘಾತವನ್ನು ಸುಧಾರಿಸಿ ಕೊಂಡು ಸಾರಥಿಯನ್ನು ಮೈದಡವಿ ಕುದುರೆಗಳ ಬೆನ್ನು ಗಳನ್ನು ತಟ್ಟಿ ಮೈ ಸವರಿ ಲಕ್ಷ್ಮಣನನ್ನು ಹೊಗಳುತ್ತ ಸಮೀಪಕ್ಕೆ ಬಂದು ಮತ್ತೆ ಲಕ್ಷ್ಮಣನ ಮೇಲೆ ಬಾಣ ಗಳನ್ನು ಪ್ರಯೋಗಿಸುತ್ತಿದ್ದನು. ಹೀಗೆ ಉಭಯ ಪಕ್ಷದ ವೀರಾಗ್ರಗಣ್ಯರಿಗೂ ನಾಲ್ಕು ಅಹೋರಾತ್ರಿಗಳ ವರೆಗೂ ಲೋಕಭಯಂಕರವಾದ ಯುದ್ಧವು ನಡೆದಿತ್ತು. ಐದನೆಯ ದಿನದಲ್ಲಿ ಲಕ್ಷ್ಮಣನು ಮನಸ್ಸಿನಲ್ಲಿ ತ್ರಿಮೂರ್ತಿಗಳನ್ನು ಧ್ಯಾನಿಸಿ ಅಣ್ಣನಾದ ಶ್ರೀರಾಮನ ಅಡಿದಾವರೆಗಳನ್ನು ಸ್ತುತಿಸಿ ಶಸ್ತ್ರವಿದ್ಯಾ ಚಾರ್ಯರಾದ ವಿಶ್ವಾಮಿತ್ರರಿಗೆ ವಂದಿಸಿ ಮಹಾಚೆಲಸದೃಶ ಧೈರ್ಯಸಂಪನ್ನನಾಗಿ ಕೋದಂಡದಲ್ಲಿ ಬ್ರಹ್ಮಾಸ್ತ್ರವನ್ನು ಹೂಡಿ