ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಕಥಾಸಂಗ್ರಹ-೪ ನೆಯ ಭಾಗ ಹಲ್ಲಿ ರಿದು ಖೋ ಎಂದು ಕೂಗಿ ಬಾಲಗಳನ್ನು ಮುದುರಿಕೊಂಡು ತೋರಿದ ಕಡೆಗೆ ಓಡಿಹೋದುವು. ಕಾಡ್ಡಿ ಚು ಹೊತ್ತಿ ವ್ಯಾಪಿಸಿಕೊಂಡು ' ಉರಿಯುತ್ತಿ ರುವಲ್ಲಿ ಒಣಗಿದ ತೃಣಜಾಲವು ಅದನ್ನು ಅಡಗಿಸಿ ಬಿಡಬಲ್ಲುದೇ ? ಆಗ ಕಪಿ ಸವ್ರಜನಾದ ಸುಗ್ರೀವನು ತನ್ನ ಸವಿಾಪದಲ್ಲಿ ರಕ್ಕಸನ ವಿಚಿತ್ರ ಯುದ್ಧವನ್ನು ನೋಡಿ ಕೋಪಾಮೋಪದ ಉಬ್ಬಿನಿಂದ ಕೂಡಿ ಅವನೆದುರಿಗೆ ಬಂದು ನಿಂತು ಇದೇ, ರಾಕ್ಷಸರಾಜೇಂದ್ರನೇ ! ನೀನೇ ದಯಮಾಡಿಸೋಣವಾಯಿತು. ನಿನ್ನ ಪರಿವಾರದಲ್ಲಿ ಇತರ ಶೂರರಾರೂ ಇಲ್ಲವೇ ? ನಿನ್ನ ಬರುವಿಕೆಯು ಧೈರ್ಯದಿಂದ ಕಾದುವುದಕ್ಕೋ ? ಅಥವಾ ಭಯದಿಂದ ಮರೆಹೋಗುವುದಕ್ಕೋ ? ಈ ಸ೦ಗತಿ ಯನ್ನು ಸ್ವಲ್ಪವಾಗಿ ತಿಳಿಸು. ಚೆನ್ನಾಗಿ ತಿಳಿದು ಕೊಳ್ಳಬೇಕಾಗಿದೆ. ಏಕೆಂದರೆ ನೀನು ನಮ್ಮಣ್ಣನಾದ ವಾಲಿಗೆ ಪರಮಮಿತ್ರನು ಎಂದು ಹೇಳಲು ಆಗ ರಾವಣನು-ಎಲಾ ಮ೧ ಢಕಪಿಯೇ ! ಹೊಯಿ ಗಲ್ಲದೆ ಮರೆಹೊಗುವಿಕೆಯೆಂಬ ಭ್ರಮೆಯೇಕೆ ? ನಿಜಭುಜ ಬಲಾರ್ಜಿತವಾದ ತ್ರಿಲೋಕಾಧಿಪತ್ಯವುಳ್ಳ ನಮ್ಮೊಡನೆ ವ್ಯರ್ಥವಾದ ಕುಚೇಷ್ಟೆ ಯ ಹರ ಟೆಯು ಕಪಿಯಾದುದರಿಂದ ನಿನಗೆ ಸ್ವಭಾವವೇ, ಕೊಳುಗುಳದಲ್ಲಿ ಬ್ರಹ್ಮ ರುದ್ರೇ೦ದ್ರಾ ದಿಗಳನ್ನು ಬಡಿದಳಲಿಸಿದ ಈ ನಮ್ಮ ಭುಜವಿಕ್ರಮದೊಡನೆ ಅಲ್ಪರಾದ ನರಾಧಮರ ಬಲವು ಪಾಸಟಿಯೇ ? ನೀನು ನನ್ನ ಮಿತ್ರನ ತಮ್ಮ ನಾದುದರಿಂದ ದಾರಿಯನ್ನು ಬಿಟ್ಟು ಕೆಲಸಾರಿ ಬದುಕಿಕೋ ? ಹೋಗು ಎನ್ನುತ್ತ ಸುಗ್ರೀವನನ್ನು ಬಾಣದಿಂದೆ ಚೆನು. ಆಗ ಅರಿವೀರಭೀಕರ ಪರಾಕ್ರಮಯುಕ್ತನಾದ ಸುಗ್ರೀವನು ಅವನೆಸೆದ ಬಾಣ ಗಳಿಗೆದುರಾಗಿ ತನ್ನ ಬಾಹುದಂಡವನ್ನೊಡ್ಡಿ ತಡೆದು ಕೆಡಹಿ ಬಿಡುಗಣ್ಣರು ಬೆಚ್ಚುವಂತೆ ಬೊಬ್ಬಿರಿದು ಒಂದು ಮಹಾ ಭೂಧರದ ಶಿಖರವನ್ನೆತ್ತಿ ರಾವಣನ ಮೇಲೆ ಹಾಕಲು ಅವನ ತೇರಿನಚು ಮುರಿದು ಹೋಯಿತು. ಕೂಡಲೆ ರಾವಣನು ಮತ್ತೊಂದು ರಥಕ್ಕೆ ಹಾರಿ ಕೋಪದಿಂದ ಬೊಬ್ಬಿರಿದು ಸುಗ್ರೀವನ ಮೇಲೆ ವಿಷಮಬಾಣವೃಷ್ಟಿಯನ್ನು ಕರೆ ಯಲು ಆಗ ಧೀರೋತ್ತಮನಾದ ಸುಗ್ರೀವನು ತನ್ನ ತೋಳಿನ ಬಲ್ಲಾಳಿಯಿಂದ ಆ ಬಾಣಸಮೂಹವನ್ನೆಲ್ಲಾ ಹಾರಿಸಿ ಕಡುಹಿನಿಂದ ಮುಂದೆ ನುಗ್ಗಿ ಬಂದು ಮೊರೆದು ಮೇಲೆ ಬಿದ್ದು ರಾವಣನ ಕಿರೀಟಗಳಿಗೆರಗಲು ಆ ಕಿರೀಟಖಚಿತದಿವ್ಯರತ್ನ ಗಳು ದೆಸೆ ದೆಸೆಗಳಲ್ಲಿದ್ದಾಡಿದುವು. ತಿರಿಗಿ ಸುಗ್ರೀವನು ಎಲಾ ಖಳನೇ ! ಮೊದಲು ನಾನು ನಿನಗೆ ಮಾಡಿದ ಕಿರೀಟಭಂಗವನ್ನು ಮರೆತುಹೋದಿಯಾ ? ನೀನು ನಿರ್ಲಜ್ಜ ನಾದ ಮೈ ಹರು ಕನು. ನಾವು ಕಾಡಿನ ಕಪಿಗಳಂತೆ ಸಾಧಾರಣ ಕಪಿಗಳೆಂದು ಬಗೆದೆಯಾ ? ದೈವ ಬಲಹೀನನಾದ ನಿನ್ನ ಮಡತ್ವವು ಬಲಿತುಹೋಗಿರುವುದು. ಅವಿಚಾರದಿಂದ ಹುಚ್ಚ ನಂತೆ ಗಳಹುತ್ತಿರುವಿಯಲ್ಲಾ ಎಂದು ಮಹಾ ಕೋಪದಿಂದ ಮೈಯುಬ್ಬಿ ನೆಗೆದು ಹಲ್ಲುಗಳು ಕಳಚಿ ಬೀಳುವಂತೆ ರಾವಣನ ಕಪೋಲಗಳನ್ನು ಹೊಯ್ದ ಬ್ಬರಿಸಿದನು. ರಾವಣನು ವಬ್ರಹತಿಗೆ ಸಮಾನವಾದ ಸುಗ್ರೀವನ ಮಹಾ ಮುಷ್ಟಿ ಘಾತ ವನ್ನು ತಡೆಯಲಾರದೆ ಬಲಹೀನನಾಗಿ ಕಿವಿ ಮೂಗು ಬಾಯಿಗಳಲ್ಲಿ ಸುರಿಯುತ್ತಿರುವ ರಕ್ತಧಾರೆಗಳುಳ್ಳವನಾಗಿ ರಥದಿಂದ ಕೆಳಗೆ ಬಿದ್ದು ಮೂರ್ಛಾಗತನಾಗಲು ಆಗ