ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕಥಾಸಂಗ್ರಹ-೪ ನೆಯ ಭಾಗೆ ಯಾರು ನೋಡು. ನಿನ್ನ ಅಭಿಮುಖವಾಗಿ ನಿಂತಿದ್ದರೂ ನೋಡಿ ಭಯ ಪಡದೆ ಹುಚ್ಚ ನಂತೆ ಹೋಗುತ್ತಿರುವಿ. ನಾನು ನಿನಗೆ ಕಾಲಮೃತ್ಯು ಪ್ರಾಯನಾದ ನೀಲನಲ್ಲವೋ ? ಸುಮ್ಮನೆ ನಿಂತು ನನ್ನೊಡನೆ ಯುದ್ಧವನ್ನು ಮಾಡು. ಹಾಗೆ ಮಾಡದೆ ಮುಂದೆ ಸಾಗು ವುದಕ್ಕೆ ಯತ್ನಿಸಿದಿಯಾದರೆ ನಿನ್ನ ತಲೆಗಳೆಲ್ಲಾ ಉದುರುವಂತೆ ಹೊಯ್ಯನು ಅಂದನು.

  • ಆ ಮಾತುಗಳನ್ನು ಕೇಳಿ ರಾವಣನು-ಅಹುದಹುದು ! ನಾವು ಬಲ್ಲೆವು. ನೀನು ಕೋತಿಗಳ ದಂಡಿನಲ್ಲಿ ಘೋರಪರಾಕ್ರಮಿಯು, ನಾನು ನಿನಗೆ ಹೆದರುವೆನು. ನೀನು ನನಗೆ ಉಬ್ಬಸವನ್ನುಂಟು ಮಾಡದೆ ಬಿಡುವ ಭಟನಲ್ಲ. ಎಲಾ, ಬಡ ಮುದಿ ಗೋಡಗನೇ ! ಮದಿಸಿರುವ ಮಹಾಜಗದ ಕುಂಭಸ್ಥಳವನ್ನು ಭೇದಿಸುತ್ತಿರುವ ಮೃಗ ರಾಜನನ್ನು ಗುಳ್ಳೆನರಿಯು ಹೆದರಿಸಿ ಜೀವಿಸಿದುದುಂಟೇ ? ವಿಷಗ್ರಿವನಿಗೆ ಸಮಬಲ ನಾದ ಸುಗ್ರೀವನನ್ನು ತಿಂದು ಮುಂದೆ ಬರುತ್ತಿರುವ ನನಗೆ ಅಲ್ಪನಾದ ನೀನೆದುರೇ ? ದೇವಾಸುರನರೋರಗರಲ್ಲಿ ನನ್ನ ಸಂಗಡ ವಿರೋಧಭಾವದಿಂದ ನಿಂತು ಬದುಕಿದವರು ಈ ವರೆಗೂ ಯಾರೂ ಇಲ್ಲ. ಮಿಕ್ಕ ಹುಲ್ಕಿ ಗಮಾನಿಸರು ನನಗೆ ಗಣ್ಯವೇ ? ದಾರಿ ಯನ್ನು ಬಿಟ್ಟು ಉರುಳಿಸಿಕೋ ಎಂದನು.

ಆಗ ನೀಲನು-ಎಲಾ, ಶುಂಠನೇ ! ಕಳ್ಳರ ಮಾತು ತಳವಾರರ ಕೇರಿಯಲ್ಲಿ ನಡೆವುದಲ್ಲದೆ ಪ್ರಸಿದ್ದ ಸಭಾಮಧ್ಯದಲ್ಲಿ ಮೆರೆಯಬಲ್ಲುದೇ ? ಇಲ್ಲವಷ್ಟೆ. ಹಾಗೆ ವೀರರಾದ ನಮ್ಮಲ್ಲಿ ಈ ನಿನ್ನ ಆತ್ಮಸ್ತುತಿಯು ಶೋಭಿಸುವುದೇ ? ಏಕೆ ಸುಮ್ಮನೆ ಜಳ್ಳು ನುಡಿಗಳನ್ನು ಹರಟುತ್ತಿರುವಿ ? ಶ್ರೀರಾಮನ ದೂತರಿಗೆ ಲೋಕತ್ರಯ ದಲ್ಲೂ ಎಲ್ಲಾ ದರೂ ಎಂದಿಗಾದರೂ ಭಯವುಂಟಾಗುವುದೇ ? ನಿನ್ನ ಬಾಯಿಬಡುಕತನದ ಮಾತು ಗಳನ್ನು ನಿನ್ನೂರಿನ ಬಡ ರಕ್ಕಸರೊಡನೆ ಹರಟು. ವೀರರಾದ ನಮ್ಮೊಡನೆ ಹರಟಿದರೆ ನಿನ್ನ ಹತ್ತು ತಲೆಗಳನ್ನೂ ಕಿತ್ತು ಚೆಂಡಾಡಿಬಿಡುವೆನು. ನಮ್ಮ ಯಜಮಾನನಾದ ರಾಘವನಿಂದ ನಿನ್ನ ಪ್ರಾಣಗಳ ಮೇಲಣ ಅಧಿಕಾರವನ್ನು ಹೊಂದಿ ಬಂದಿದ್ದೇನೆ. ನಿನ್ನಂಥ ನೂರು ಜನ ರಾವಣರು ಬಂದಾಗ್ಯೂ ನಾನು ಲಕ್ಷ್ಯ ಮಾಡುವುದಿಲ್ಲ. ಲೋಕ ದಲ್ಲಿ ಕೆಲವು ಕಳ್ಳತನಗಳು ದಕ್ಕಿದರೂ ದಕ್ಕಬಹುದು. ಕಡೆಯಲ್ಲಿ ಕಳ್ಳರಿಗೆ ಕಳ್ಳತನ ಗಳೇ ಮೃತ್ಯುವಾಗಿ ಪರಿಣಮಿಸುತ್ತವೆ. ಹಾಗೆ ದೈವಬಲಹೀನನಾದ ನೀನು ಒಂದು ವೇಳೆ ಮಾಯೆಯಿಂದ ಕೆಲವರನ್ನು ಜಯಿಸಿದ ಮಾತ್ರಕ್ಕೆ ಈಗಲೂ ಅಂಥ ಜಯವು ಉಂಟಾಗುವುದೆಂದು ಬಗೆದು ಬಂದಿಯಾ ? ಇದರಿಂದ ನಿನ್ನಂಥ ಉನ್ನತನು ಭೂಮಂ ಡಲದಲ್ಲಿ ಎಲ್ಲೂ ಇಲ್ಲ ಎಂದು ಯೋಚಿಸಬೇಕಾಗುತ್ತಿದೆ. ನಾನು ನಿನ್ನನ್ನು ವಿಧ್ವಂಸ ಮಾಡಿಬಿಡುವುದಕ್ಕೆ ಸಿದ್ಧನಾಗಿ ನಿಂತಿದ್ದೇನೆ ನೋಡು ಎಂದು ಹೇಳಿದನು. ಆಗ ರಾವಣನು ನಸುನಗುತ್ತ-ಎಲೈ ಮುದಿಗೋಡಗವೇ ! ನೀನು ಕಪಿಯು. ನಿನ್ನ ಸ್ವಭಾವವು ಚಪಲವುಳ್ಳುದು. ಕಪಿಗಳು ಸ್ವಭಾವವಾಗಿ ಮಡುವ ಚೇಷ್ಟೆ ಗಳೆಲ್ಲಾ ಹಾಸ್ಯಕ್ಕೆ ಗುರಿಯಾಗುವವು. ಈಗ ಪ್ರಯತ್ನ ಪೂರ್ವಕವಾಗಿ ಮಾಡುತ್ತಿರುವ ನಿನ್ನ ಚೇಷ್ಟೆಯನ್ನು ಕುರಿತು ಹೇಳತಕ್ಕುದೇನು ? ಬರಿಯ ಎದೆಗೆಚ್ಚಿನ ಜಳ್ಳಾತುಗಳಿಂದ ನಮ್ಮನ್ನು ತಿರಸ್ಕರಿಸಿ ನುಡಿಯುತ್ತಿರುವಿ ? ಆಗಲಿ. ಹಾಗಾದರೆ ನಾವು ನಿನ್ನ ಪರಾಕ್ರ