ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 181 ವೃದ್ದಿಯ ಸುದ್ದಿಯೆತ್ತಣದು ? ವೃಥಾಯಾಸಿಯು ನೀನಲ್ಲದೆ ಮತ್ತಾರಿರುವರು ? ಈ ವರೆಗೂ ನಿರಪರಾಧಿಗಳಾದ ನಿನ್ನ ಪುತ್ರಮಿತ್ರಬಾಂಧವಾದಿಗಳನ್ನೆಲ್ಲಾ ಪಾಪಿಷ್ಠ ನಾದ ನೀನು ಕೊಲೆಗೀಡುಮಾಡಿಸಿದಿ ! ವಜ್ರಶುಂಠನಾದ ನಿನ್ನ ಸಂಬಂಧವಿಲ್ಲದಿದ್ದರೆ ಅಪಜಯವೂ ಮರಣವೂ ಅವರನ್ನು ಮುಟ್ಟುತ್ತಿರಲಿಲ್ಲ. ಮಹಾ ವ್ಯಾಪಕರ್ಮಾಭು ದಯಿಯಾದ ನಿನ್ನ ಸಂಬಂಧಮಾತ್ರದಿಂದ ಅಪಾರ ಪ್ರಾಣಿನಾಶವುಂಟಾಗಿರಲು ಸಾಕ್ಷಾತ್ಕಾದ ನಿನಗೆ ಉಳಿಗಾಲವುಂಟಾದರೆ ಆಗ ಒಂದು ಸೊಳ್ಳೆಯು ಮಹಾ ಸಮು ದ್ರವನ್ನು ಕುಡಿದು ಬಿಡುವುದು. ಒಂದು ಗುಳ್ಳೆನರಿಯು ಅಸಂಖ್ಯಾತ ಸಿಂಹಸಮೂಹ ವನ್ನು ಹೊಡೆದು ಕೊಂದುಬಿಡುವುದು. ಎಲೈ ಮಥನೇ ! ಹರಕೆ ಕುರಿಯು ಹುಲೈ ಯುವುದಕ್ಕೆ ಆತುರಪಡುವಂತೆ ಬಾಳುವೆನೆಂಬ ಭ್ರಮೆಯಿಂದ ಕಂಗೆಡುತ್ತಿರುವಿ? ಇನ್ನಾದರೂ ನೀನು ಸೀತೆಯನ್ನು ತಂದೊಪ್ಪಿಸಿ ಅಳಿದುಳಿದ ರಕ್ಕಸರೊಡನೆ ಪ್ರಾಣಗಳಿ ರುವ ವರೆಗೂ ಲಂಕೆಯಲ್ಲಿ ಸುಖವಾಗಿರು ಎಂದು ಹೇಳಲು ಆಗ ರಾವಣನು ರಾಮ ನನ್ನು ನೋಡಿ- ಎಲೈ ರಾಮನೇ ! ನೀನು ಮಡನು. ಲೋಕದಲ್ಲಿ ರಾಕ್ಷಸಕುಲದ ವರು ಕ ಣಿಕವಾದ ಬಾಳಿಗೆ ಮನಸ್ಸನ್ನು ಮಾರಿ ವಿಪತ್ತಿಗೆ ಹೆದರಿ ಹೆಜ್ಜೆಯನ್ನು ಹಿಂದಕ್ಕೆ ತೆಗೆವುದುಂಟೇ ! ಹಾನಿವೃದ್ಧಿ ಗಳೆರಡರ ಸೃತಿಯೇ ನಮಗಿರುವುದಿಲ್ಲ. ಯಾರಿಗೂ ತಲೆವಾಗದೇ ಬಾಳಿ ಯುದ್ಧ ಮುಖದಲ್ಲಿ ಹೊಡೆದಾಡಿ ಮಡಿವುದೇ ನಮ್ಮ ಸನಾತನಧರ್ಮಸಾರವು. ಒಳ್ಳೆಯದಕ್ಕೆ ಮುಂದೆ ಹೋಗುವುದೂ ಕೆಟ್ಟು ದಕ್ಕೆ ಹಿಂದೆ ಗೆಯುವುದೂ ಮೈಗಳ್ಳರಾದ ನಿಮ್ಮ ಧರ್ಮವು. ಇಂಥ ದುರ್ಬಲನಾದ ನೀನು ನನಗೆ ನರನೀತಿಯನ್ನು ಬೋಧಿಸಿ ಕಪಟದಿಂದ ಜಯವನ್ನು ಅಪೇಕ್ಷಿಸುತ್ತಿರುವಿಯಾ ? ಛೇ ! ಭಯಭಾ೦ತಮಾನಸನೇ ! ಬೇಗ ಬಾಣವನ್ನು ತೊಡು, ಪ್ರಯೋಗಿಸು ಎಂದು ಹೇಳಿ ದನು. ಆಗ ರಾಮನು-ಎಲಾ ರಾವಣನೇ ! ನಾನು ಬ್ರಹ್ಮಾದಿ ದಿವಿಜರ ಸಹಾಯ ವನ್ನು ಬಯಸತಕ್ಕವನೇ ? ನನ್ನ ನ್ನು ಯಾರೆಂದು ತಿಳಿದಿರುವಿ? ಹಲವು ತಲೆಗಳನ್ನು ಹೊತ್ತಿರುವ ನಿನ್ನ ಕೊರಳ ಳಲ್ಲಿ ಕೂರಲಗುಗಳನ್ನು ಚಾಚಿ ಮೂಗುಗಳಿಂದ ಹೊರಡಿಸಿ ನಿನ್ನ ದೇಹವನ್ನು ಹದ್ದು ನಾಯ್ಕ ರಿಗಳಿಗೆ ಹಂಚಿ ಸೀತೆಯನ್ನು ಪಡೆಯದೆ ಬಿಡುವೆನೇ ಎಂದು ರಾವಣನ ಮೇಲೆ ಬಾಣಪ್ರಯೋಗವನ್ನು ಮಾಡಿದನು. ಅನಂತರ ಸ್ಥಿರವಿಕ್ರಮ ಯುಕ್ತನಾದ ನಿಶಾಚರ ಚಕ್ರವರ್ತಿಯು ಆ ಬಾಣಗ ಳನ್ನೆಲ್ಲಾ ತರಿದೊಟ್ಟಿ ಹೊಸತಾಗಿ ಸಾಣೆ ಹಿಡಿದಿದ್ದ ಕ್ರೂರ ವಿಷಮ ಬಾಣಗಳನ್ನು ಬತ್ತಳಿಕೆಯಿಂದ ತೆಗೆದು ಶರಾಸನದಲ್ಲಿ ಹೂಡಿ ಅಬ್ಬರಿಸಿ ರಾಮನನ್ನು ಹೊಡೆಯಲು ಆಗ ಧನುರಾಗಮ ಪಂಡಿತನಾದ ಶ್ರೀರಾಮನು ಪ್ರತಿ ಬಾಣಗಳನ್ನು ಪ್ರಯೋಗಿಸಿ ಅವುಗಳನ್ನು ನಡುದಾರಿಯಲ್ಲೇ ಕಡಿದುದುರಿಸಿ ರಾವಣನನ್ನು ಕುರಿತು-ಎಲೈ ವೀರ ನಾದ ರಾವಣನೇ ! ಲೋಕದಲ್ಲಿ ಪರಭಾಗ್ಯಕ್ಕೆ ಕೈ ಹಾಕದೆ ಪರಸ್ತ್ರೀಯರನ್ನು ಕಾಮಿ ಸದೆ ಪರಹಿತವನ್ನೇ ಮಾಡುತ್ತಿರುವಂಥ ಪುರುಷನಿಗೆ ಒಂದು ವೇಳೆ ದೈವಯೋಗದಿಂದ ಕಷ್ಟ ಕಾರ್ಪಣ್ಯಗಳು ಬಂದಾಗ ಅವುಗಳು ಪರಿಹಾರವಾಗುವುದರಲ್ಲಿ ಸಂದೇಹವಿಲ್ಲ. ಅದು ಕಾರಣ ಅಂಥವನಿಗೆ ಜಯವು ಸಿದ್ಧಿಸುವುದು. ಪರಭಾಗ್ಯಾಪಹಾರಕನೂ ಪರ