ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


182 ಕಥಾಸಂಗ್ರಹ-೪ ನೆಯ ಭಾಗ ಸಂತಾಪಸಮುತ್ಪಾದಕನೂ ಮಹಾ ದ್ರೋಹಿಯ ಆಗಿರುವ ನಿನ್ನ೦ಥವನಿಗೆ ವ್ಯರ್ಥಾ ಯಾಸವಲ್ಲ ದೆ ಎಂದಿಗೂ ಜಯ ವುಂಟಾಗಲಾರದು. ಆದರೂ ಮರ್ಖರಿಗೆಲ್ಲಾ ಕಲ್ಲಾ' ಯ್ತನಾದ ನೀನು ಹಿತಚಿಂತಕರಾದವರ ಹಿತೋಕ್ತಿಗಳನ್ನು ಕೇಳದೆ ಅನ್ಯಾಯವಾಗಿ ನಿನ್ನ ಪುತ್ರ ಮಿತ್ರ ಬಾಂಧವಾಶ್ರಿತರನ್ನು ಕಳೆದು ಕೊಂಡು ಏಕಾಂಗಿಯಾಗಿ ನಿಂತಿರುವಿ. ಈಗಲಾದರೂ ವಿವೇಕವನ್ನು ತಂದುಕೊಂಡು ನಿನ್ನ ತಮ್ಮನಾದ ವಿಭೀಷಣನಂತೆ ನಮಗೆ ಶರಣಾಗತನಾಗಿ ಸೀತೆಯನ್ನು ತಂದೊಪ್ಪಿಸಿ ವಿಭೀಷಣನೊಡನೆ ಕೂಡಿ ಲ೦ಕಾರಾಜ್ಯ ವನ್ನು ಎಂದಿನಂತೆ ಆಳಿಕೊಂಡಿರು. ಈ ನಮ್ಮ ಹಿತೋಕ್ತಿಗಳನ್ನು ಕೇಳದೆ ಬುದ್ಧಿ ಭ್ರಂಶ ತೆಯಿಂದ ಗರ್ವಿಸಿದಿಯಾದರೆ ನಿನ್ನ ತಲೆಗಳನ್ನು ತರಿದುರುಳಿಸಿ ನಿನ್ನ ಬಲೆಯನ್ನು ಹರಿದು ಹದ್ದು ಕಾಗೆ ನಾಯ್ಕರಿಗಳಿಗೆ ಆಹಾರಾರ್ಥವಾಗಿ ಪಾಲು ಮಾಡಿಕೊಡುವೆನು ಎಂದು ಹೇಳಿದನು. ಆಗ ಮೃತ್ಯದೇವತೆಯ ಮನೆಗುರಿಯಂತಿರುವ ರಾವಣನು ರಾಮ ನನ್ನು ನಿಂದಿಸಿ ನುಡಿದನು. ಆಹಾ ! ಶ್ರೀರಾಮನ ಬಲಾತಿಶಯವನ್ನು ಬಣ್ಣಿಸುವವ ರಾರು ? ತತ್‌ಕ ಣದಲ್ಲೆ ಅತಿ ತೀಕವಾದ ಬಾಣಗಳನ್ನು ಪ್ರಯೋಗಿಸಿ ರಾವಣನ ಹತ್ತು ತಲೆಗಳನ್ನೂ ಕತ್ತರಿಸಿ ಆಕಾಶಕ್ಕೆ ಹಾರಿಸಿದನು. ಮಹಾತ್ಮನಾದ ರಾವಣನ ತಪ ಶಕ್ತಿಯನ್ನು ವಿವರಿಸುವ ಬಗೆಯೆಂತು ? ಆ ಕೂಡಲೆ ಅವನ ದಶಶಿರಸ್ಸುಗಳೂ ಎಂದಿ ನಂತೆ ಹುಟ್ಟಿ ಬೆಳೆದು ಆರ್ಭಟಿಸಿದುವು. ಮತ್ತು ಅವನು ಅತ್ಯುಗ್ರ ಕೋಪದಿಂದ ಕೂಡಿ ದವನಾಗಿ ಅಸಂಖ್ಯಾತ ಮಹಾಸ್ತ್ರಗಳನ್ನು ರಾಮನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರಗಳು ಕೌಸಲ್ಯಾನಂದನನನ್ನು ಮೂರ್ಛಗೊಳಿಸಿದುದಲ್ಲದೆ ಬ್ರಹ್ಮಾಂಡಮಂಡಲಶ ನೈಲ್ದಾ ತುಂಬಿ ಜೀವಿಜಾಲವನ್ನು ಭಯಸಾಗರದಲ್ಲಿ ಮುಳುಗಿಸಿ ಕಡೆಗೆ ದೇವಲೋ ಕಕ್ಕೆ ಹೋಗಿ ಇಂದ್ರಾದಿ ದೇವತೆಗಳ ಒಡಲುಗಳಲ್ಲಿ ಹೊಕ್ಕು ನೋಯಿಸಿ ಮೈ ಮರೆ ಸಿದುವು. ಅನಂತರದಲ್ಲಿ ಶೈತ್ಯೋಪಚಾರಗಳಿಂದ ತಿಳಿವನ್ನು ಹೊಂದಿ ಮೇಲೆದ್ದ ಶ್ರೀರಾಮ ನನ್ನು ಕುರಿತು ಮಾತಲಿಯು-ಎಲೈ ಶ್ರೀರಾಮನೇ ! ಈ ಖಳನು ಬಲು ಬಲ್ಲಿದನು. ಕೂರರ ಕುಲನಾಯಕನು, ಮೂಢರ ಮನೆಯ ಗುರುವು, ದುಷ್ಟರ ಗರುಡಿಯ ಆಚಾ ರನು, ಪಾಪಿಷ್ಠರ ಪರಮಮಿತ್ರನು. ದ್ರೋಹ ಕರ್ಮದಿಕಿ ತನು. ಆದುದರಿಂದ ಇವನ ಮಹಾಸ್ಯಗಳ ಪೆಟ್ಟನ್ನು ತಾಳುವುದು ಅಸಾಧ್ಯವು. ಇನಕುಲದರಸರಿಗೆ ಯುದ್ದ ರಂಗ ದಲ್ಲಿ ಆಲಸ್ಯವು ಸಲ್ಲದು. ಅದಕಾರಣ ಶೀಘ್ರವಾಗಿ ಮಹಾಸ್ತ್ರಗಳನ್ನು ತೊಡು. ಪ್ರಯೋಗಿಸು, ಖಳನ ಮಸ್ತಕಗಳ ಸರಿಸದಲ್ಲಿ ಕೂರಲಗುಗಳಾಡುತ್ತಿರಲಿ. ಕೈಗುಂದ ಬೇಡವೆಂದು ಹೇಳಿ ತೇರಿನ ತೇಜೆಗಳನ್ನು ಮುಂದಕ್ಕೆ ನೂಕಿದನು. ಮಾತಲಿಯ ಮಾತು ಗಳು ಕಿವಿಗಳಿಗೆ ಬೀಳುವುದಕ್ಕೆ ಮುಂಚಿತವಾಗಿಯೇ ತೀವ್ರಗತಿಪ್ರಯುಕ್ತಗಳಾದ ರಾಮನ ಬಾಣಗಳು ರಾವಣನ ತಲೆಗಳನ್ನು ಕಡಿದು ಹಾರಿಸುತ್ತಿದ್ದುವು. ಆ ತಲೆಗಳು ರಣದೇವತೆಯು ಆಡುತ್ತಿರುವ ಚಂಡುಗಳೋ ಎಂಬಂತೆ ಪ್ರಕಾಶಿಸುತ್ತಿದ್ದುವು. ಹೀಗೆ ಶ್ರೀ ರಾಮನು ನೂರಾರು ಸಾರಿ ರಾವಣನ ತಲೆಗಳನ್ನು ತರಿದಿಕ್ಕುತ್ತಿದ್ದರೂ ಅವನ ತಲೆ ಗಳು ಮತ್ತೆ ಮತ್ತೆ ಬೆಳೆದು ಬೊಬ್ಬಿರಿಯುತ್ತಿದ್ದುವು ಆಗ ಶ್ರೀರಾಮನು ಆ ಆಶ್ಚರ್ಯ