ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


196 ಕಥಾಸಂಗ್ರಹ-೪ ನೆಯ ಭಾಗ ಸುತ್ತ ಇರುವುದು ಸ್ವಾಭಾವಿಕವು. ಇದಕ್ಕಾಗಿ ನಾವು ಮಾಡತಕ್ಕುದೇನು ಎಂದು ಯೋಚಿಸುವುದು ಯುಕ್ತವಾದರೂ `ಜಗತ್ತನ್ನೇ ಭವಯಂತ್ರ ದಲ್ಲಿ ಸಿಕ್ಕಿಸಿ ನರಳಿಸುವ ಮಮತಾಶಕ್ತಿಯು ಅಕುಂಠಿತವಾದುದು ಎಂದು ವಿವಿಧವಾಗಿ ಯೋಚಿಸುತ್ತ ಮರು ಗುತ್ತ ಶೀಘ್ರವಾಗಿ ವಿಮಾನದಿಂದ ಭೂಮಿಗಿಳಿಯಲು ಆಗ ಭರತನು ಬೇಗನೆ ಮುಂದೆ ಬಂದು ಶ್ರೀರಾಮನ ಅಡಿದಾವರೆಗಳಿಗೆ ನವರತ್ನ ಖಚಿತವಾದ ದಿವ್ಯ ಪಾದುಕೆಗಳನ್ನು ತೊಡಿಸಿ ಸಾಷ್ಟಾಂಗವಾಗಿ ಭೂಮಿಯಲ್ಲಿ ಬಿದ್ದು ನಮಸ್ಕರಿಸಿದನು. ಆ ಕೂಡಲೆ ರಿಪುಭಯ೦ಕರನಾದ ಶತ್ರುಘ್ನನು ಅತಿ ಸಂಭ್ರಮದಿಂದ ಮುಂದೆ ಬಂದು ಸೀತಾರಾ ಮಲಕ್ಷ ಣರಿಗೆ ನಮಸ್ಕರಿಸಿದನು. ಆಗ ಆನಂದಬಾಷ್ಪಸಂಯುಕ್ತನೇತ್ರನಾದ ಶ್ರೀರಾ ಮನು ಪ್ರಿಯರಾದ ಭರತಶತ್ರುಘ್ನ ರನ್ನು ತೆಗೆದಪ್ಪಿಕೊಂಡು ಮುದ್ದಿಸಿ ಮೈದಡವಿ ಮುಂದಲೆಯನ್ನು ಆಘ್ರಾಣಿಸಿ ಮುಂದೆ ಬಂದು ಕೌಸಲ್ಯಾದಿ ಮಾತೃ ಜನಗಳಿಗೆ ಸೀತಾಲಕ್ಷ್ಮಣರೊಡನೆ ಕೂಡಿ ನಮಸ್ಕರಿಸಲು ಕೌಸಲ್ಯಯು ಸೀತಾರಾಮಲಕ್ಷ್ಮ ಣರನ್ನು ಆಲಿಂಗಿಸಿಕೊಂಡು ಪರಮಾನಂದರಸದಿಂದ ಅಭಿಷೇಕಿಸುವಳೋ ಎಂಬಂತೆ ನಿರರ್ಗಳವಾಗಿ ಹೊರಟು ಹರಿಯುತ್ತಿರುವ ಆನಂದಬಾಷೋದಕಸೇಚನೆಯಿಂದ ಅವ ರನ್ನು ನೆನೆಸಿದಳು. ಆಮೇಲೆ ಸರ್ವಲೋಕಸುಖಾರಾಮನಾದ ಶ್ರೀರಾಮನು ವಸಿಷ್ಠಾ ದಿಮುನಿಜನಗಳಿಗೂ ಗುರು ಜನಗಳಿಗೂ ಭಯಭಕ್ತಿಪೂರ್ವಕವಾಗಿ ನಮಸ್ಕರಿಸಿ ಅಪ್ರತಿ ಹತಗಳಾದ ಅವರ ಶುಭಾಶೀರ್ವಾದಗಳನ್ನು ಕೈಕೊಂಡು ಮುಂದೆ ಬಂದು ಬಂದು ಗುಂಪಾಗಿ ನೆರೆದಿರುವ ಮಂತ್ರಿ ಸೇನಾಪತಿ ಪೌರಪರಿಜನಾದಿಗಳನ್ನು ಅವರವರ ತಾರತ ಮ್ಯಾನುಸಾರವಾಗಿ ಹಸ್ತಲಾಘವಾಲಿಂಗನಾವಲೋಕನಪ್ರಿಯವಚನಗಳಿಂದ ಮನ್ನಿಸಿ ಸಂತೋಷದಿಂದಿರುತ್ತಿದ್ದನು. ಅನಂತರದಲ್ಲಿ ಸತ್ಯಸಂಧನಾದ ಭರತನು ಶ್ರೀರಾಮಚಂದ್ರನಿಗೆ ನಮಸ್ಕರಿಸಿ ಎದ್ದು ಕೈಮುಗಿದು ನಿಂತು ಕೊಂಡು- ಎಲೈ ಸುಜನಸೇವನಾದ ಶ್ರೀರಾಮಚಂದ್ರನೇ ! ಸರ್ವಜ್ಞ ನಾದ ನೀನು ಮೊದಲು ನನ್ನ ತಾಯಿಯಾದ ಕೈ ಕೆಯಿಯ ಮಾತುಗಳನ್ನು ಮನ್ನಿಸಿ ತಂದೆಯಾದ ದಶರಥ ಭೂಪಾಲನನ್ನು ಸತ್ಯ ಪ್ರತಿಜ್ಜನನ್ನಾಗಿ ಮಾಡುವುದ ಕೊಸ್ಕರ ವನವಾಸೋದ್ಯುಕ್ತನಾಗಿ ನನ್ನ ಅಧೀನಕ್ಕೆ ಕೊಟ್ಟಿದ್ದ ಈ ಕೋಸಲ ರಾಜ್ಯವನ್ನು ಈಗ ತಿರಿಗಿ ನಿನ್ನ ವಶಕ್ಕೆ ಒಪ್ಪಿಸಿ ಕೃತಾರ್ಥನಾಗಿದ್ದೇನೆ. ದೊಡ್ಡ ಗೂಳಿ ಯಿಂದ ಹೊತ್ತು ನಿರ್ವಹಿಸುವುದಕ್ಕೆ ಯೋಗ್ಯವಾದ ಮಹಾಭಾರವಸ್ತುವನ್ನು ಎಳೆಗ. ರುವು ಹೇಗೆ ಹೊರಲಾರದೋ ಹಾಗೆ ಮೂರು ಲೋಕಗಳ ಭಾರವನ್ನಾದರೂ ವಹಿಸಿ ಕೊಂಡು ಪರಿಪಾಲಿಸುವುದಕ್ಕೆ ಯೋಗ್ಯನಾದ ನಿನ್ನಿಂದ ಧರಿಸಲ್ಪಡತಕ್ಕ ಈ ಕೋಸಲ ರಾಜ್ಯಭಾರವನ್ನು ಅಲ್ಪನಾದ ನಾನು ಧರಿಸಬಲ್ಲೆನೇ ? ಲೋಕದಲ್ಲಿ ಸೂರ್ಯನಂತೆ ಮಿಂಚು ಹುಳುವಿಗೂ ಮಹಾ ಗಜದಂತೆ ಅದರ ಮರಿಗೂ ಪರಾಕ್ರಮಶಾಲಿಯಾದ ಅರಸನಂತೆ ಬಾಲಕನಾದ ಅವನ ಮಗನಿಗೂ ಹೇಗೆ ಸಾಮರ್ಥ್ಯವಿರುವುದಿಲ್ಲವೋ ಹಾಗೆ ನಾನು ಕೋಸಲರಾಜ್ಯ ಪರಿಪಾಲನೆ ಮೂಡುವುದರಲ್ಲಿ ಮಹಾತ್ಮನಾದ ನಿನಗೆ ಸಮಾನ ವಾದ ಶಕ್ತಿವಂತನಲ್ಲದವನಾಗಿದ್ದೇನೆ. ಸರ್ವಪ್ರಾಣಿಹಿತಚಿಂತಕನೂ ಧರ್ಮಸಂಸ್ಥಾಪ