ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಮನ ಪಟ್ಟಾಭಿಷೇಕವು 201 ವನ್ನು ಕೃಪೆಯಿಂದ ನನಗೊಪ್ಪಿಸಿಕೊಟ್ಟು ಧರ್ಮಸಂಸ್ಥಾಪನಾರ್ಥವಾಗಿ ಅರಣ್ಯಕ್ಕೆ ತೆರಳಿದಾಗ ಇದ್ದ ಆದಾಯಕ್ಕಿಂತ ಈಗಿರುವ ಆದಾಯವು ಹತ್ತು ಮಡಿ ಹೆಚ್ಚಾಗಿದೆ. ಇದೋ, ಬೊಕ್ಕಸ ಉಗ್ರಾಣ ಚತುರಂಗಬಲ ರಾಜ್ಯ ಈ ಮೊದಲಾದ ಸರ್ವಶಾಖೆ ಗಳ ಕರಣಿಕರುಗಳೆಲ್ಲಾ ಆದಾಯಗಳಲ್ಲಿ ವ್ಯಯಗಳನ್ನು ಕಳೆದು ನಿಲುವುಗಳನ್ನು ತೋರಿಸುತ್ತಿರುವ ಲೆಕ್ಕಗಳನ್ನು ತೆಗೆದುಕೊಂಡು ಬಂದು ಅರಿಕೆ ಮಾಡಿಕೊಳ್ಳುವುದಕ್ಕೆ ಸಿದ್ದರಾಗಿ ಸಮಯವನ್ನು ನೋಡುತ್ತ ಕಾದಿದ್ದಾರೆ. ಪರಿಶೀಲನೆ ಮಾಡಓಹುದು ಎಂದು ಬಿನ್ನವಿಸಲು ಆಗ ಶ್ರೀರಾಮನು ಅವರೆಲ್ಲರನ್ನೂ ಕ್ರಮವಾಗಿ ಕರಿಸಿ ವಿಚಾರಿ ಸುವುದಕ್ಕೆ ಆರಂಭಿಸಿ ತಾನು ಮೊದಲು ವನಕ್ಕೆ ಹೋಗುವಾಗ ಇದ್ದ ನಿಲುವು ಇಷ್ಟು, ಈಚೆಗೆ ಭರತನು ಮಾಡಿಸಿದ ಆದಾಯ ವಿಷ್ಟು. ಅಂತು ಮೊತ್ತದಲ್ಲಿ ಆ ದಿನದವರೆಗೂ ಆದ ವ್ಯಯವನ್ನು ಕಳೆದು ಉಳಿವನ್ನು ಚೆನ್ನಾಗಿ ಪರೀಕ್ಷಿಸಿ ನೋಡಲಾಗಿ ಭರತನು ಹೇಳಿದಂತೆ ಸಕಲಭಾಗಗಳಲ್ಲಿಯ ದಶಭಾಗಾಧಿಕ್ಯವುಂಟಾಗಿರಲು ಆಗ ಸಂತೋಷ ಸಮುದ್ರದಲ್ಲಿ ಮುಳುಗಿದವನಾದ ಶ್ರೀರಾಮಚಂದ್ರನು ತನ್ನ ಮುದ್ದು ತಮ್ಮನಾದ ಭರತನನ್ನು ಬಾಚಿ ತಬ್ಬಿಕೊಂಡು ಆತನ ಅನ್ಯಾದೃಶ ರಾಜ್ಯಭಾರ ನೈಪುಣ್ಯಕ್ಕೆ ಮೆಚ್ಚಿ ತಲೆದೂಗಿ ಬಹಳವಾಗಿ ಕೊಂಡಾಡಿದನು. ಆಗ ಸಾರಥಿಶ್ರೇಷ್ಠನಾದ ಸುಮಂತ್ರನು ದಿವ್ಯಾಶ್ರನಿಬದ್ದವಾಗಿ ಸರ್ವಾಲಂಕಾರ ವಿರಾಜಮಾನವಾದ ರಾಜರಥವನ್ನು ಶೀಘ್ರ ವಾಗಿ ತಂದು ನಿಲ್ಲಿಸಲು ಆ ಕೂಡಲೆ ಶ್ರೀರಾಮಚಂದ್ರನು ಕಪಿಕುಲೇಶ್ವರನಾದ ಸುಗ್ರೀ ವನನ್ನು ಮಹಾ ಗಜದ ಮೇಲಣ ಅಂಬಾರಿಯಲ್ಲಿ ಕುಳ್ಳಿರಿಸಿದನು. ಆ ಮೇಲೆ ಕಪಿಸೇ ನೆಗಳು ಏರುವುದಕ್ಕಾಗಿ ಅಸಂಖ್ಯಾತಗಳಾದ ಗಜಸಮೂಹಗಳು ಬಂದು ನಿಲ್ಲಲು ಆಗ ಕಪಿವೀರರೆಲ್ಲಾ ಆ ಗಜಗಳ ಕುಂಭಸ್ಥಳಗಳಲ್ಲಿಯೂ ಕೊಂಬುಗಳ ಮೇಲೂ ಬೆನ್ನು ಗಳ ಮೇಲೂ ಸಂತೋಷದಿಂದ ಕುಳಿತು ಕೊಂಡು ಚಪ್ಪರಿಸುತ್ತ ಹೊರಟರು. ಆ ಕೂಡಲೆ ಲಂಕಾರಾಜನಾದ ವಿಭೀಷಣನೊಡನೆ ಬಂದಿದ್ದ ರಾಕ್ಷಸ ಸಮೂಹವು ಯಥೋಚಿತ ವಾಹನಾರೂಢವಾಗಿ ಹೊರಟಿತು. ಶ್ರೀರಾಮಚಂದ್ರನು ಅದನ್ನು ನೋಡಿ ಪರಮೋ ಲ್ಲಾಸದಿಂದ ತಾನು ಸೀತಾಸಮೇತನಾಗಿ ರಥಾರೂಢನಾಗಲು ಭರತನು ಕುದುರೆಗಳ ಕಡಿವಾಣಗಳನ್ನು ಹಿಡಿದುಕೊಂಡು ರಥವನ್ನು ನಡೆಸುತ್ತ ಸಾರಥಿಯ ಕೆಲಸವನ್ನು ಮಾಡುತ್ತ ನಡೆದನು. ಲಕ್ಷ್ಮಣ ಶತ್ರುಘ್ನರು ಧವಳ ಚಾಮರಗಳನ್ನು ಬೀಸುತ್ತ ಹೊರಟರು. ಶರಣಾಗತನಾದ ವಿಭೀಷಣನು ಬೆಳ್ಕೊಡೆಯನ್ನು ಹಿಡಿದು ನಡೆದನು. ಕೌಸಲ್ಯಾದಿ ಅಂತಃಪುರ ಪರಿವಾರಗಳ ಅ೦ದಣಗಳು ಅವೀರೆಯರೊಡನೆ ಸಾಲು ಸಾಲಾಗಿ ಹೊರಟವು. ಆಗ ಚತುರಂಗಒಲವೂ ವಿವಿಧವಾದ ಊಳಿಗದವರೂ ಇವರೇ ಮೊದಲಾದ ಸಮಸ್ತ ಜನರೂ ತಮ್ಮ ತಮಾನುಸಾರವಾಗಿ ಹೊರಟು ಬರುತ್ತಿದ್ದರು. ಅತ್ತ ಮೊದಲೇ ಮಾರ್ಗಸಮಿಾಕರಣಾರ್ಥವಾಗಿ ನಿಯಮಿತರಾಗಿ ಹೋಗಿದ್ದ ಶಿಲ್ಪಕಾರರು ಆ ನಂದಿಗ್ರಾಮದಿಂದ ರಾಜಧಾನಿಯಾದ ಅಯೋಧ್ಯಾನಗರದ ಪರ್ಯಂತ ರವೂ ಹಳ್ಳತಿಟ್ಟು ಗಳನ್ನು ಸಮಮಾಡಿ ದೊಡ್ಡ ದೊಡ್ಡ ಹಳ್ಳಗಳಿಗೂ ತೊರೆಗಳಿಗೂ ಬಲವಾದ ಸೇತುವೆಗಳನ್ನು ಕಟ್ಟಿ ಮಾರ್ಗದಲ್ಲೆಲ್ಲಾ ಸಣ್ಣ ಸಣ್ಣ ಕಲ್ಲುಗಳನ್ನೂ W