ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 221 ನಾಯಿ ಎತ್ತಿ ಕೊಂಡು ಹೋಯಿತು ಎಂಬ ಗಾದೆಗೆ ಸರಿಯಾಗಿ ಈ ವರೆಗೂ ನಾವು ಅನುಭವಿಸಿದ ಶ್ರಮವೆಲ್ಲಾ ಕಣಕಾಲದಲ್ಲಿ ವ್ಯರ್ಥವಾಗಿ ಹೋಯಿತು ಎಂದು ಬಹಳ ವಾಗಿ ಚಿಂತೆಪಟ್ಟು-ಭಕ್ತ ಪರಾಧೀನನಾದ ಲಕ್ಷ್ಮೀಪತಿಯೇ ! ಮಹಾತ್ಮನಾದ ನೀನೇ ನಮ್ಮ ಕಷ್ಟವನ್ನು ಸಾಫಲ್ಯವುಳ್ಳುದನ್ನಾಗಿ ಮಾಡಿ ನಮ್ಮಲ್ಲಿ ಕನಿಕರವನ್ನಿಟ್ಟು ಈಗ ನಾವು ಆರಂಭಿಸಿರುವ ಕಾರ್ಯವು ನಿರ್ವಿಘ್ನವಾಗಿ ಕೈಗೂಡುವಂತೆ ಅನುಗ್ರಹಿಸಿ ಬೇಕೆಂದು ಬಹು ವಿಧವಾಗಿ ಪ್ರಾರ್ಥಿಸಿಕೊಂಡುದರಿಂದ ಆಗ ಮಹಾವಿಷ್ಣು ವು ಅವ ರಿಗೆ ಪ್ರತ್ಯಕ್ಷನಾಗಿ-ಎಲೈ ದೇವಾಸುರರುಗಳಿರಾ ! ನಾನು ನಿಮಗೋಸ್ಕರವಾಗಿ ಮಹಾ ಕೂರ್ಮಾವತಾರವನ್ನು ಮಾಡಿ ಈ ಕ್ಷೀರಸಾಗರದಲ್ಲಿ ಮುಳುಗಿಹೋಗಿರುವ ಮಂದರಪರ್ವತವನ್ನು ಮೇಲೆತ್ತಿ ಸಮುದ್ರದ ನಡುನೀರಿನಲ್ಲಿ ನನ್ನ ಬೆನ್ನಿನ ಮೇಲೆ ಧರಿ ಸಿಕೊಂಡು ನಿಲ್ಲುವೆನು. ಅನಂತರದಲ್ಲಿ ನಿಮ್ಮ ಸಂತೋಷವಿದ್ದ ಹಾಗೆ ನಡೆದು ಕೊ ಳ್ಳಿರಿ' ಎಂದು ಹೇಳಿ ಅದೃಶ್ಯನಾಗಿ ಸಮುದ್ರವನ್ನು ಹೊಕ್ಕು ಮಹಾಕೂರ್ಮರೂಪ ವನ್ನು ಧರಿಸಿ ತನ್ನ ಬೆನ್ನಿನಿಂದ ಮಂದರನಗವನ್ನು ಮೇಲೆತ್ತಿ ಧರಿಸಿಕೊಂಡು ನಿಂತನು. ಆಗ ದೇವಾಸುರರು ನೀರಿನ ಮೇಲೆ ನಿಂತಿರುವ ಮಂದರಗಿರಿಯನ್ನು ನೋಡಿ ಮಹಾವಿಷ್ಣುವಿನ ಮಹಿಮೆಗೆ ಬಹಳವಾಗಿ ಆಶ್ಚರ್ಯಪಟ್ಟು ಆತನನ್ನು ಬಹುವಿಧ ವಾಗಿ ಸ್ತುತಿಸಿ ವಾಸುಕಿ ಎಂಬ ಸರ್ಪರಾಜನನ್ನು ತಂದು ಆ ಪರ್ವತಕ್ಕೆ ಸುತ್ತಿ ದೇವಾಸುರರು ಒಂದೊಂದು ಕಡೆಗೆ ನಿಂತು ಸಮುದ್ರವನ್ನು ಕಡೆಯುತ್ತಿರಲು ಆಗ ತ್ರಿಲೋಕ ಭಯಂಕರವಾದ ವಿಷವು ಹುಟ್ಟಿತು. ಅದನ್ನು ನೋಡಿ ತ್ರಿಲೋಕಗಳೂ ತಲ್ಲಣಿಸಿದುವು. ಸುರಾಸುರರೆಲ್ಲರೂ ಕಂಗೆಟ್ಟು ಮುಂಗೆಟ್ಟರು. ಆಗ ಅವ್ಯಾಜಕರು ಣಾಸಮುದ್ರನಾದ ಶಿವನು ಬಂದು ಆ ವಿಷವನ್ನು ತೆಗೆದು ಕೊಂಡು ಪಾನಮಾಡಿ ಲೋಕ ಪ್ರಳಯವನ್ನು ತಪ್ಪಿಸಿ ಆ ಹಿಂದೆ ಸಮುದ್ವತವಾದ ಚಂದ್ರಕಳೆಯನ್ನು ಆಭ ರಣವಾಗಿ ಧರಿಸಿಕೊಂಡನು. ತರುವಾಯ ದೇವಾಸುರರು ಸಮುದ್ರವನ್ನು ಮಥಿಸು ತಿರಲು ಆಗ ಹುಟ್ಟಿದ ಲಕ್ಷ್ಮಿಯನ್ನೂ ಕೌಸ್ತುಭರತ್ನ ವನ್ನೂ ಮಹಾವಿಷ್ಣುವು ಅಂಗೀಕರಿಸಿದನು. ಆ ಬಳಿಕ ಹುಟ್ಟಿದ ಅಪ್ಪರಸ್ತ್ರೀಯರು ಕ್ಯವೃಕ್ಷ ಕಾಮಧೇನು ಚಿಂತಾಮಣಿ ವಾರುಣಿ ಎಂಬ ಮದ್ಯ ಉಚ್ಚೆ ವಸ್ಸೆಂಬ ಕುದುರೆ ಇವು ಮೊದ ಲಾದುವುಗಳನ್ನೆಲ್ಲಾ ದೇವೇಂದ್ರನು ತೆಗೆದುಕೊಂಡನು. ಅನಂತರದಲ್ಲಿ ಧನ್ವಂತ್ರಿಯೆಂಬ ಒಬ್ಬ ತೇಜಃಪುಂಜರಂಜಿತನಾದ ಪುರುಷನು ಅಕ್ಷಯವಾದ ಅಮೃತ ಕಲಶವನ್ನು ತೆಗೆ ದುಕೊಂಡು ಸಮುದ್ರದಿಂದ ಮೇಲಕ್ಕೆ ಬರಲು ಆತನನ್ನು ಕಂಡು ಬೃಹಸ್ಪತ್ಯಾಚಾ ರ್ಯನು ದೈತ್ಯರಿಗೆ ಕಣ್ಣನ್ನೆ ಮಾಡಲು ದೈತ್ಯರಾಜರೆಲ್ಲಾ ಆ ಸೂಚನೆಯನ್ನು ತಿಳಿದು ಶ್ರೀಘ್ರವಾಗಿ ಹೋಗಿ ಧನ್ವಂತ್ರಿಯ ಕೈಯಿ೦ದ ಅಮೃತಕಲಶವನ್ನು ಕಿತ್ತುಕೊಂಡರು. ಅದನ್ನು ಕಂಡು ದೇವತೆಗಳೆಲ್ಲಾ ಬಹಳವಾಗಿ ಭಯಪಟ್ಟವರಾಗಿ ದೈನ್ಯದಿಂದ ಮಹಾ ವಿಷ್ಣುವಿನ ಬಳಿಗೆ ಓಡಿಬಂದು ಆತನನ್ನು ಕುರಿತು- ಎಲೈ ಆಪದ್ರಕ್ಷಕನೇ ! ಕಿಂಚಿದಾ ಶೆಯಿಂದ ಪ್ರಾಣಧಾರಣೆಯನ್ನು ಮಾಡಿಕೊಂಡು ಸ್ಥಾನಭ್ರಷ್ಟರಾಗಿ ಅನಾಥಬಂಧು ವಾದ ನಿನ್ನನ್ನು ನಂಬಿಕೊಂಡಿದ್ದ ನಮಗಿನ್ನೇನು ಗತಿ ? ಈ ವೇಳೆಯಲ್ಲಿ ಆಪತ್ಸಮುದ್ರ