ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾಹಾವತಾರದ ಕಥೆ 223 ಮರಣವು ಸಂಭವಿಸದಂತೆ ಜಾಗರೂಕತೆಯಿಂದ ಕಾದುಕೊಂಡಿರುತ್ತಿದ್ದನು. ಆದಕಾ ರಣ ಅವರ ರಾಜ್ಯದಲ್ಲಿ ದಾರಿದ್ರ ಕಷ್ಟ ಅಕಾಲಮರಣ ಇತ್ಯಾದಿಗಳನ್ನು ಸ್ವಪ್ನದಲ್ಲಿ ಯಾದರೂ ಕಂಡು ಕೇಳಿದ ಪ್ರಜೆಯೇ ಇರಲಿಲ್ಲ ವು. ಈ ರೀತಿಯಾಗಿ ಹಿರಣ್ಯಕಶಿಪು ಹಿರಣ್ಯಾಕ್ಷರು ಏಕಛತಾ ಧೀಶ್ವರರಾಗಿ ನಿರ್ಭ ಯದಿಂದ ರಾಜ್ಯಭಾರವನ್ನು ಮಾಡುತ್ತ ಇರಲು ಒಂದಾನೊಂದು ದಿವಸ ಲೋಕ ಸಂಚಾರ ಶೀಲನಾದ ನಾರದ ಮುನೀರ್ಶ್ವನು ಇ ರ ಮಹದೈಶ್ವರ್ಯವನ್ನು ನೋಡ ಬೇಕೆಂದು ಶೋಣಿತಪುರಕ್ಕೆ ಬರಲು ಆಗ ಹಿರಣ್ಯಕಶಿಪು ಹಿರಣ್ಯಾಕ್ಷರು ಒಂದ ನಾರದ ನನ್ನು ಎದುರುಗೊಂಡು ಕರೆದು ತಂದು ತಮ್ಮ ಸಮೀಪದಲ್ಲಿ ಸುವರ್ಣ ಪೀಠಾಗ್ರದಲ್ಲಿ ಕುಳ್ಳಿರಿಸಿ ಯಥಾಮರಾದೆಯಿಂದ ಸನ್ಮಾನಿಸಿ ಎಲೈ ಮುನಿಕುಲತಿಲಕನೇ ! ನೀನು ಮರುಲೋಕಗಳನ್ನೂ ಸಂಚರಿಸುತ್ತಿರುವಿಯಲ್ಲ ? ಪೂರ್ವದಲ್ಲಿಯಾಗಲಿ ಈಗಾಗಲಿ ನಮ್ಮ ಹಾಗೆ ಸಕಲಸಂಪತ್ತಿನಿಂದ ಕೂಡಿ ರಾಜ್ಯಭಾರವನ್ನು ಮಾಡಿದವರೂ ಮಾಡು ತಿರುವವರೂ ಉಂಟೇ ಎಂದು ಕೇಳಲು ಆಗೆ ನಾರದಮುನಿಯು ನಿಮ್ಮ ಹಾಗೆ ರಾಜ ಭಾರವನ್ನು ಮಾಡಿದವರೂ ಮಾಡುತ್ತಿರುವವರೂ ಮೂರು ಲೋಕಗಳಲ್ಲಿ ಯ ಒಬ್ಬರೂ ಇಲ್ಲ ಎಂದು ಹೇಳಿದನು ಆ ಮಾತಿಗೆ ದ್ವಿಚಕ್ರೇಶ್ವರರು-ಹಾಗಾದರೆ ಮುಂದೆಯಾದರೂ ನಮ್ಮ ಹಾಗೆ ಏಕಛತ್ರಾಧೀಶ್ವರತ್ವದಿಂದ ರಾಜ್ಯಭಾರ ಮಾಡುವ ವರು ಯಾರಾದರೂ ಹುಟ್ಟುವರೋ ಎಂದು ಕೇಳಲು ಆ ಮಾತಿಗೆ ಮುನಿಯು ಮುಂದೆ ನಿಮ್ಮ ವಂಶದಲ್ಲಿ ಬಲಿಚಕ್ರವರ್ತಿಯೆಂಬವನು ಹುಟ್ಟಿ ನಿಮಗಿಂತಲೂ ಅತಿ ಶಯವಾಗಿ ಸಾರ್ವಭೌಮತ್ವದಿಂದ ಈ ಭೂಮಂಡಲವನ್ನು ಆಳುವನು. ಆದರೆ ವಿಷವು ಮೋಸಮಾಡಿ ಅವನ ಅಧಿಕಾರವನ್ನು ತಪ್ಪಿಸಿ ಭೂಮಿಯನ್ನು ಕಿತ್ತುಕೊಳ್ಳುವನು ಎಂದು ಹೇಳಿದನು ಆ ಮಾತನ್ನು ಕೇಳಿದ ಕ್ಷಣದಲ್ಲಿಯೇ ಕಿರಿಯವನಾದ ಹಿರಣ್ಯಾ, ಕ್ಷನೆಂಬವನು ಮಹಾ ಕೋಪದಿಂದ ಕಣ್ಣುಗಳಲ್ಲಿ ಕಿಡಿಗಳನ್ನು ದುರಿಸುತ್ತ ತ್ರಿಲೋಕ ಭೀಕರ ಪರಾಕ್ರಮಶೀಲರಾದ ನಾವೂ ನಮ್ಮ ವಂಶದವರೂ ಆಳುವ ಈ ಧರಣೀ ಮಂಡಲವನ್ನು ನಮ್ಮ ಕಡೆಯಿಂದ ಕಿತ್ತು ಕೊಳ್ಳುವುದಕ್ಕೆ ವಿಷ್ಣುವ ಎಷ್ಟರವನು ? ಈ ಭೂಮಂಡಲವು ಅವನ ಕೈಗೆ ಸಿಕ್ಕದಂತೆ ಮಾಡಬೇಕೆಂದು ಯೋಚಿಸಿ ಆ ಕ್ಷಣದ ಲ್ಲಿಯೇ ಎದ್ದು ಭೂಮಂಡಲವನ್ನು ಚಾಪೆಯ ಹಾಗೆ ಸುತ್ತಿ ಕಂಕುಳಲ್ಲಿಟ್ಟು ಕೊಂಡು ಸಮುದ್ರವನ್ನು ಪ್ರವೇಶಿಸಿ ರಸಾತಲಕ್ಕೆ ಹೋಗಿ ಭೂಮಿಯನ್ನಲ್ಲಿಟ್ಟು ತನ್ನ ಮೈ ಗೊಬ್ಬಿ ನಿಂದ ದೇವತೆಗಳನ್ನು ಜಯಿಸಬೇಕೆಂದು ಭ ಮ೦ಕರಗದಾದಂಡವನ್ನು ತೆಗೆದು ಕೊಂಡು ಆರ್ಭಟಿಸುತ್ತ ಸುರಲೋಕಕ್ಕೆ ಹೊರಟುಹೋದನು ಅಷ್ಟರಲ್ಲಿಯೇ ಸಕಲದೇವತೆಗಳೂ ಮುಸಿಜನೆಗಳೂ ಕೂಡಿ ಒ ದೇವನ ಬಳಿಗೆ ಹೋಗಿ ಆತನನ್ನು ಕರೆದುಕೊಂಡು ಕ್ಷೀರಸಮುದ್ರಕ್ಕೆ ಹೋಗಿ ಶ್ರೀಮಹಾವಿ ಷ್ಣುವನ್ನು ಕಂಡು ನಮಸ್ಕರಿಸಿ ಸ್ತೋತ್ರವನ್ನು ಮಾಡಿ... ಎಲೈ ಜಗನ್ನಾಥನೇ ! ಸರ್ವ ಜಗದ್ರಕ್ಷಕನೇ ! ದುಷ್ಟ ನಾದ ಹಿರಣ್ಯಾಕ್ಷನೆಂಬ ದೈತ್ಯನು ಭೂಮಿಯನ್ನು ತೆಗೆದು ಕೊಂಡು ಹೋಗಿ ರಸಾತಲದಲ್ಲಿ ಹಾಕಿರುವುದರಿಂದ ದೇವಯಜ್ಞ ಪಿತೃಯಜ್ಞ ಮೊದ M