ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಕಥಾಸಂಗ್ರಹ-೫ ನೆಯ ಭಾಗ ದಿಂದ ಅವನು ಆಳಿದನು. ನೀನು ಈ ವಿಷಯವನ್ನು ಚೆನ್ನಾಗಿ ಯೋಚಿಸಿ ನೋಡು. ಯುಕ್ಯಾ ಯುಕ್ಕಗಳನ್ನು ವಿಚಾರಿಸದೆ ಸುಮ್ಮನೆ ತೀರ್ಮಾನಿಸುವ ಯೋಚನೆಗಳಿಂದ ಅನ ರ್ಥವಲ್ಲದೆ ಫಲವೇನೂ ದೊರೆಯಲಾರದು ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಹಿರಣ್ಯಕಶಿಪುವು ಕೋಪಿಷ್ಟನಾಗಿ-ಇವನಿಗೆ ಯಾವ ವಿಧದಿಂದ ಹೇಳಿದಾಗ ನನ್ನ ಹಗೆಯಾದ ವಿಷ್ಣುವಿನ ನೆನಪನ್ನು ಬಿಡುವುದಿಲ್ಲ. ಇಂಥ ಕುಲದ್ವೇಷಿಯ ಪಿತ್ತ ದ್ವೇಷಿಯ ಆದ ಕೆಟ್ಟ ಮಗನು ಇರುವುದರಿಂದ ಪ್ರಯೋಜನವೇನು ? ಇಂಥ ಪಾಪಿಯ ಶಿರಸ್ಸನ್ನು ಈಗಲೇ ಕಡಿದುಬಿಡುವೆನೆಂದು ಗರ್ಜಿಸಿ ಒರೆಯಿಂದ ಖಡ್ಗವನ್ನು ಹಿರಿದು ಕಡಿಯುವದಕ್ಕೆ ಹೋಗಲು ಆಗ ಗುರುವಾದ ಶುಕ್ರಾಚಾರ್ಯನು ಶೀಘ್ರ ವಾಗಿ ಬಂದು ನಿಲ್ಲು ನಿಲ್ಲೆಂದು ಹಿರಣ್ಯಕಶಿಪುವಿನ ಕೈಯನ್ನು ಹಿಡಿದುಕೊಂಡು ಬೇಡ ಈ ಕಾರ್ಯವನ್ನು ಮಾಡಬೇಡ. ಶಿಶುವನ್ನು ಕೊಂದುದರಿಂದೇನು ಪ್ರಯೋ ಜನ ? ಹಾಲು ಕುಡಿಯುವ ಬಾಲಕನೊಡನೆ ನಿನಗೆ ವಿರೋಧವೇ ? ಈ ಪ್ರಯತ್ನವನ್ನು ನಿಲ್ಲಿಸು, ಪ್ರಿಯ ಪುತ್ರನನ್ನು ಮುದ್ದಿಸಿ ಸಂತೋಷಿಸು. ನಾನು ಇವನಿಗೆ ಲೋಕವು ಮೆಚು ವಂತ ವಿದ್ಯಾಬುದ್ದಿಗಳನ್ನು ಕಲಿಸುವೆನು, ನೀನು ಈ ಶಿಶುವಿನ ವಿಷಯದಲ್ಲಿ ಅನ ಥಾ ಯೋಚಿಸಬೇಡ ಎಂದು ಹೇಳಿ ಹಿರಣ್ಯಕಶಿಪುವನ್ನು ಸಮಾಧಾನಪಡಿಸಿದನು. ಆಗ ರೈತರಾಜನ ಶಾಂತಕೋಪನಾಗಿ ಪ್ರಹ್ಲಾದನನ್ನು ಗುರುವಿನ ವಶಕ್ಕೆ ಕೊಟ್ಟು ನೀಚನಾದ ಹರಿಯನ್ನು ನೆನೆಯುತ್ತಿರುವ ಇವನ ಹುಚ್ಚು ತನವನ್ನು ಬಿಡಿಸಿ ವಿದ್ಯಾ ಬುದ್ದಿ ಗಳನ್ನು ಕಲಿಸು ಎಂದು ನೇಮಿಸಿ ಕಳುಹಿಸಿದನು. ಶುಕ್ರಾಚಾರ್ಯನು ಯಥಾಪ್ರಕಾರವಾಗಿ ಪ್ರಹ್ಲಾದನನ್ನು ಮಠಕ್ಕೆ ಕರೆದು ಕೊಂಡು ಬಂದು ಎಷ್ಟೆಷ್ಟು ಉಪಾಯಗಳಿಂದ ಒಡಂಬಡಿಸಿ ಹರಿಯ ನೆನಪನ್ನು ಬಿಡು ಎಂದು ತಿಳಿಸಿ ಹೇಳಿದರೂ ಕೇಳದೆ ಪ್ರಹ್ಲಾದನು ಹರಿಧಾನಪರಾಯಣನಾಗಿಯೇ ಇರುತ್ತಿದ್ದನು ಅನಂತರದಲ್ಲಿ ಗುರುವು ಕೋಪಿಸಿಕೊಂಡು ಹರಿಸ್ಕೃತಿಯನ್ನು ಬಿಡು ಎಂದು ಹೇಳಲು ಅವನು ಅನ್ಯಾದೃಶವಾದ ವಾಗ್ವಾಲದಿಂದ ಗುರುವಿಗೇ ವೇದಾಂತವನ್ನು ಉಪದೇಶಿಸುತ್ತಾ ಬುದ್ದಿಯನ್ನು ಹೇಳುವುದಕ್ಕೆ ಬಂದುದರಿಂದ ಆತನು ಸಾಕಾಗಿ ಬೇಸ ರಿಕೆಯನ್ನು ಹೊಂದಿ ಆ ಪ್ರಹ್ಲಾದನನ್ನು ಕರೆದುಕೊಂಡು ಹಿರಣ್ಯಕಶಿಪುವಿನ ಬಳಿಗೆ ಬಂದು-ಅಯ್ಯಾ, ಹಿರಣ್ಯಕಶಿಪುವೇ ! ನಾನು ಎಷ್ಟು ವಿಧದಿಂದ ಒಳ್ಳೆಯ ಮಾತು ಗಳನ್ನು ಉಪಯೋಗಿಸಿ ಬೋಧಿಸುವುದಕ್ಕೆ ತೊಡಗಿದರೂ ನಾನಾವಿಧದಿಂದ ಬೈದು ಹೊಡೆದು ಶಿಕ್ಷಿಸಿ ಹೇಳಿದಾಗ ಮರ್ಖನಾದ ನಿನ್ನ ಮಗನು ಒಂದು ಕ್ಷಣಕಾಲ ವಾದರೂ ಹಧ್ಯಾನವನ್ನು ಬಿಡದೆ ನಾನು ಹೇಳಿಕೊಟ್ಟುದನ್ನಾದರೂ ಓದಿ ಬರೆಯು ವುದಿಲ್ಲ ಇವನಿಗೆ ತಿಳಿವಳಿಕೆಯನ್ನು ಕಲಿಸುವುದಕ್ಕೆ ನನ್ನಿಂದಾಗುವುದಿಲ್ಲ. ಈತನನ್ನು ತಿದ್ದು ಇದು ಸಾಧ್ಯವಾಗಿ ತೋರುತ್ತಿದೆ ಎಂದು ಖಂಡಿತವಾಗಿ ಹೇಳಿಬಿಟ್ಟನು. ಈ ಮಾತುಗಳನ್ನು ಕೇಳಿ ಪ್ರಹ್ಲಾದನು-ಎಲೈ, ತಂದೆಯೇ ! ಪರಾತ್ಪರನೂ ಸರ್ವಾಂತ ರ್ಯಾಮಿಯ ಸಮಸ್ತ ದೇವತೋತ್ತಮನೂ ಆದ ಮಹಾವಿಷ್ಣುವು ನಿರಂತರದಲ್ಲೂ ನನ್ನ ಹೃದಯಾರವಿಂದದ ಕರ್ಣಿಕಾಮಧ್ಯದಲ್ಲಿ ನೆಲೆಗೊಂಡಿರುವಲ್ಲಿ ಈ ಮರ್ಖನಾದ