ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


242 ಕಥಾಸಂಗ್ರಹ-೫ ನೆಯ ಭಾ? ಸಂತುಷ್ಟನಾಗಿ ಚತುರ್ಮುಖಾದಿ ದೇವತೆಗಳೊಡನೆ ಕೂಡಿ ಭಕ್ತನಾದ ಪ್ರಹ್ಲಾದನಿಗೆ ದೈತ್ಯರಾಜ್ಯಾಭಿಷೇಕವನ್ನು ಮಾಡಿ ಸ್ಥಿರಜೀವಿಯಾಗಿರು ಎಂದು ಹರಿಸಿ ತಾನು ಲಕ್ಷ್ಮೀ ಸಮೇತನಾಗಿ ವೈಕು೦ಠಲೋಕಕ್ಕೆ ತೆರಳಿದನು. ಬ್ರಹ್ಮಾದಿ ದೇವತೆಗಳೂ ಕೂಡ ತಮ್ಮ ತಮ್ಮ ನಿವಾಸಸ್ಥಾನಗಳಿಗೆ ತೆರಳಿದರು. ಆ ಮೇಲೆ ಪ್ರಹ್ಲಾದನು ನಿರಂತರವೂ ಪರಮಭಕ್ತಿಯಿಂದ ಹರಿಧ್ಯಾನವನ್ನು ಮಾಡುತ್ತ ಧರ್ಮದಿಂದ ರಾಜ್ಯ ಪರಿ ಪಾಲನೆಯನ್ನು ಮಾಡಿಕೊಂಡು ಸುಖದಿಂದಿದ್ದನು. 5. THE FIFTH OR DWARF INCARNATION. ೫. ವಾಮನಾವತಾರದ ಕಥೆ. ಅನಂತರವಲ್ಲಿ ಭಾಗವತಶಿರೋಮಣಿಯಾದ ಪ್ರಹ್ಲಾದನು ಶೋಣಿತಪುರದಲ್ಲಿ ಧರ್ಮದಿಂದ ರಾಜ್ಯ ಪರಿಪಾಲನೆಯನ್ನು ಮಾಡುತ್ತ ಹರಿಯೇ ಪರಮೋಷ ದೇವತೆ ಯೆಂದೂ ಹರಿಯೇ ಸರ್ವಪಾಪನಿವಾರಕನೆಂದೂ ಹರಿಯೇ ಶರಣಾಗತ ರಕ್ಷಕನೂ ಸರ್ವಜಗದ್ಯಾಪಕನೂ ಎಂದು ಚೆನ್ನಾಗಿ ತಿಳಿದು ಅದೇ ಪ್ರಕಾರವಾಗಿ ಸಕಲ ಜನ ರಿಗೂ ಸಮಾಧಾನದಿಂದ ಉಪದೇಶಮಾಡುತ್ತ ಇದ್ದನು. ಹೀಗೆ ಬಹು ಕಾಲವು ಗತಿಸಿ ಹೋದ ಮೇಲೆ ರಾಜ್ಯದಲ್ಲಿ ವಿರಕ್ತತೆಯನ್ನು ಹೊಂದಿ ಒಂದಾನೊಂದು ದಿವಸ ತನ್ನ ಮೊಮ್ಮಗನಾದ ಬಲಿಯು ರಾಜ್ಯ ಭಾರಕ್ಕೆ ಯೋಗ್ಯವಾದ ಪ್ರಾಯವುಳ್ಳವನಾಗಿರುವು ದನ್ನು ತಿಳಿದು ಆತನನ್ನು ಕರೆದು ಏಕಾಂತದಲ್ಲಿ ಕುಳ್ಳಿರಿಸಿಕೊಂಡು ಎಲೈ ಬುದ್ದಿ ಶಾಲಿಯಾದ ಮೊಮ್ಮಗನೇ ! ನಿನ್ನ ತಂದೆಯಾದ ವಿರೋಚನನು ಬುದ್ದಿ ಹೀನತೆಯಿಂದ ಸಕಲ ದೇವತೆಗಳ ಗಂಡನೂ ಸರ್ವಲೋಕೈಕನಾಥನೂ ಆದ ಮಹಾವಿಷ್ಣು ವಿಗೆ ದೊಹವನ್ನು ಮಾಡಿ ಕಾಲಗತಿಯನ್ನು ಹೊಂದಿದನು. ಬುದ್ದಿ ಶಾಲಿಯಾದ ನೀನು ಒಂದು ಕಾಲದಲ್ಲಿಯಾದರೂ ಆ ರೀತಿಯಾಗಿಮಾಡದೆ ಮಹಾವಿಷ್ಣುವಿನಲ್ಲಿ ಪರಮ ಭಕ್ತಿಯುಳ್ಳವನಾಗಿ ಸದಾ ಕಾಲದಲ್ಲೂ ಏಕಚಿತ್ತದಿಂದ ಆತನ ಧ್ಯಾನವನ್ನು ಮಾಡುತ್ತ ಧರ್ಮದಿಂದ ರಾಜ್ಯ ಪರಿಪಾಲನೆಯನ್ನು ಮಾಡಿಕೊಂಡು ಸಕಲ ಪ್ರಾಣಿಗಳಲ್ಲೂ ದಯೆಯುಳ್ಳವನಾಗಿ ಸುಖದಿಂದಿರು. ನಾನು ನಿನಗೆ ರಾಜ್ಯಾಭಿಷೇಕವನ್ನು ಮಾಡಿ ತಪಸ್ಸಿಗೆ ಹೋಗುವೆನು. ಆದರೆ ದೈತ್ಯರಲ್ಲಿ ದೇವತೆಗಳಿಗೆ ಆಜನ್ಮ ಸಿದ್ದವಾದ ಜಾತಿವೆ. ರವಿರುವುದರಿಂದ ವಿವೇಕಶಾಲಿಯಾದ ನೀನು ಎಷ್ಟು ಭಕ್ತಿಯಿಂದಲೂ ಧರ್ಮದಿಂದಲೂ ವರಬಲದಿಂದಲೂ ದೇವತೆಗಳನ್ನು ತಲೆಯೆತ್ತದಂತೆ ಅಡಗಿಸಿಕೊಂಡು ಬಾಳು ಎಂದು ಬುದ್ದಿಯನ್ನು ಹೇಳಿ ಸುಲಗ್ನದಲ್ಲಿ ಆತನಿಗೆ ಸಂಭ್ರಮದಿಂದ ರಾಜ್ಯಾಭಿಷೇಕವನ್ನು ಮಾಡಿ ತಾನು ಪಾರಮಾರ್ಥಿಕ ಬುದ್ದಿ ಯಿ೦ದ ಪುಣ್ಯಾರಣ್ಯವನ್ನು ಕುರಿತು ತಪಸ್ಸಿಗೆ ಹೊರಟುಹೋದನು. ಅನಂತರದಲ್ಲಿ ಬಲಿಯು ತನ್ನ ಅಧೀನವಾದ ರಾಜ್ಯಭಾರವನ್ನು ತನ್ನ ಬುದ್ಧಿ ವಂತರಾದ ಮಂತ್ರಿಗಳಲ್ಲಿಟ್ಟು ಎಳ್ಳಷ್ಟಾ ದರೂ ಧರ್ಮಕ್ಕೆ ಲೋಪಬಾರದಂತೆಯ