ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಕಥಾಸಂಗ್ರಹ-೫ ನೆಯ ಭಾಗ ಈ ರೀತಿಯಾಗಿ ಬಹು ಕಾಲದವರೆಗೂ ನಡೆಯುತ್ತಿರುವಲ್ಲಿ ಭೂಮಿದೇವಿಯು ದುಷ್ಟ ಕ್ಷತ್ರಿಯರ ಭಾರವನ್ನು ತಾಳಲಾರದೆ ಮಹಾವಿಷ್ಣುವಿನ ಬಳಿಗೆ ಹೋಗಿ ಅಡ್ಡ ಬಿದ್ದು -ಎಲೈ ಸರ್ವಲೋಕೇಶ್ವರನಾದ ಸ್ವಾಮಿಯೇ ! ದುರ್ಜನರಾದ ಅರಸುಗಳು ಬಹಳವಾಗಿ ಹೆಚ್ಚಿರುವುದರಿಂದ ಪರಮಪಾಪಿಷ್ಠರಾದ ಅವರ ಭಾರವನ್ನು ನಾನು ತಡೆ ಯಲಾರೆನು, ಸರ್ವಶಕ್ತನೂ ಸರ್ವಪ್ರಾಣಿದಯಾಕರನೂ ಆದ ನೀನು ಅವರನ್ನೆಲ್ಲಾ ಸಂಹರಿಸಿ ನನ್ನ ಹೊರೆಯನ್ನಿಳಿಸಿ ಶರಣಾಗತಳಾದ ನನ್ನನ್ನು ಕಾಪಾಡಬೇಕು ಎಂದು ಬೇಡಿಕೊಳ್ಳಲು ಆಗ ವಿಷ್ಣು ವು ಆ ಮಾತುಗಳನ್ನು ಕೇಳಿ-ಒಳ್ಳೆಯದು, ಹಾಗೇ ಮಾಡುವೆನು ಭಯ ಪಡಬೇಡವೆಂದು ಹೇಳಿ ಭೂದೇವಿಗೆ ಅಭಯವನ್ನು ಕೊಟ್ಟು ಸಮಾಧಾನಪಡಿಸಿದನು. ಅನಂತರದಲ್ಲಿ ಭೂದೇವಿಯು ಮಹಾವಿಷ್ಣುವಿಗೆ ವಂದಿಸಿ ಆತನ ಅಪ್ಪಣೆಯನ್ನು ತೆಗೆದು ಕೊಂಡು ಯಥಾಸ್ಥಾನವನ್ನು ಕುರಿತು ಹೊರಟುಹೋ ದಳು. ಅಷ್ಟರಲ್ಲಿ ಭೂಲೋಕದಲ್ಲಿ ಬೃಗುಮಹಾಮುನಿಯ ವಂಶೀಯನಾದ ಜಮದಗ್ನಿ ಯೆಂಬ ಮಹರ್ಷಿಯು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳನ್ನು ಕುಶಿಕ ಕುಲಸಂಭೂತ ನಾದ ಗಾಧಿರಾಜನೆಂಬುವನಿಗೆ ಮದುವೆ ಮಾಡಿ ಕೊಟ್ಟು ಸಂತೋಷದಿಂದಿದ್ದನು. ಆ ಮಗಳು ಕೆಲದಿನಗಳವರೆಗೂ ತನ್ನ ಪತಿಯ ಮನೆಯಲ್ಲಿದ್ದು ತರುವಾಯ ತಾಯ್ತಂದೆ ಗಳನ್ನು ನೋಡುವ ಉದ್ದೇಶದಿಂದ ತವರುಮನೆಗೆ ಬಂದಳು. ಆ ಮೇಲೆ ಒಂದು ಸಮ ಯದಲ್ಲಿ ಜಮದಗ್ನಿ ಯ ಹೆಂಡತಿಯು ತನ್ನ ಗಂಡನ ಬಳಿಗೆ ಬಂದು ಸಾಪ್ತಾ೦ಗವಾಗಿ ನಮಸ್ಕರಿಸಿ-ಸ್ವಾಮಿ ! ನಿನ್ನ ಪತ್ನಿ ಯಾದ ನನಗೂ ನನ್ನ ಮಗಳಾದ ಗಾಧಿರಾಜನ ಪತ್ನಿಗೂ ಸಮಸ್ಯೆ ಸುಗುಣ ಸಂಪನ್ನರಾದ ಗಂಡುಮಕ್ಕಳು ಆಗುವಂತೆ ಅನುಗ್ರಹಿಸ ಬೇಕೆಂದು ನಯವಿನಯೋಕ್ತಿಗಳಿಂದ ಬೇಡಿಕೊಂಡಳು. ಆಗ ಮಹರ್ಷಿಯಾದ ಜಮದಗ್ನಿ ಯು ಸತ್ತಿ ಯ ಮಾತುಗಳನ್ನು ಕೇಳಿ ಒಳ್ಳೆಯದೆಂದು ಹೇಳಿ ಎರಡು ಬಟ್ಟ ಲುಗಳಲ್ಲಿ ನೀರನ್ನು ತರಿಸಿ ಅದನ್ನು ಅಭಿಮಂತ್ರಿಸಿ ಹೆಂಡತಿಯ ಕೈಯಲ್ಲಿ ಕೊಟ್ಟು ಈ ಬಟ್ಟಲಿನ ನೀರನ್ನು ನನ್ನ ಮಗಳಿಗೆ ಕೊಡು. ಈ ಬಟ್ಟಲಿನ ಉದಕವನ್ನು ನೀನು ಕುಡಿ. ಈ ಮಂತ್ರೋದಕ ಪ್ರಭಾವದಿಂದ ನಿಮ್ಮಿಬ್ಬರಿಗೂ ಮಹಾತೇಜಸ್ವಿಗಳಾದ ಗಂಡು ಮಕ್ಕಳು ಆಗುವರೆಂದು ಹೇಳಿ ಕೊಟ್ಟು ಕಳುಹಿಸಿದನು. ಆ ಮೇಲೆ ಆಕೆಯು ಮಂತ್ರೋದಕಪೂರಿತಗಳಾದ ಆ ಎರಡು ಬಟ್ಟಲುಗಳನ್ನು ತೆಗೆದು ಕೊಂಡು ತನ್ನ ಮಗಳ ಬಳಿಗೆ ಬಂದು ಆಕೆಯನ್ನು ನೋಡಿ-ಇದೋ, ಅಮ್ಮಾ ! ಮಹಾತ್ಮನಾದ ನಿನ್ನ ತಂದೆಯು ಈ ಎರಡು ಬಟ್ಟಲುಗಳಲ್ಲಿರುವ ನೀರನ್ನು ಅಭಿಮಂತ್ರಿಸಿ ಆ ಪಾತ್ರೆಯ ನೀರನ್ನು ನಾನು ಕುಡಿಯುವಂತೆಯ ಈ ಪಾತ್ರೆಯ ನೀರನ್ನು ನೀನು ಕುಡಿಯು ವಂತೆಯ ಹೇಳಿ ಕೊಟ್ಟಿದ್ದಾನೆ. ಅದು ಕಾರಣ ಇದನ್ನು ನೀನು ತೆಗೆದುಕೋ ಎಂದು ಹೇಳಿ ಕೊಟ್ಟಳು. ಆಗ ಆ ಮಗಳು ತನ್ನ ತಂದೆಯು ಹೆಂಡತಿಗೆ ಏನೋ ವಿಶೇಷವಾಗಿ ಮಂತ್ರಿಸಿ ಕೊಟ್ಟಿರಬಹುದು ಎಂದು ಮನಸ್ಸಿನಲ್ಲಿ ಯೋಚಿಸಿ ತಾಯಿಯನ್ನು ಕುರಿತು ಅಮ್ಮಾ ! ತಂದೆಯು ಅಭಿಮಂತ್ರಿಸಿ ನಿನಗೆ ಕೊಟ್ಟಿರುವ ಪಾತ್ರೆಯ ಉದಕವನ್ನು ನನಗೆ ಕೊಡು. ನನಗೋಸ್ಕರವಾಗಿ ಕೊಟ್ಟಿರುವ ಮಂತ್ರೋದಕವನ್ನು ನೀನು ತೆಗೆ