ಪುಟ:ಕಥಾಸಂಗ್ರಹ ಸಂಪುಟ ೨.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


18 ಕಥಾಸಂಗ್ರಹ--೪ ನೆಯ ಭಾಗ ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ಆಗ ಪಾಪಿಗಳೆಲ್ಲಾ ಕೂಡಿ. ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಷಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತುಕೊಂಡು ನಾವೂ ನಿನ್ನೊಡನೆ ಸೇರಿ ಯಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದುಕೊಂಡು ಬರುತ್ತೆ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯ ಸಭೆಯಲ್ಲಿ ಹಸಿವು ಬಾಯಾರಿಕೆಗಳಿಲ್ಲದೆ ದಿವ್ಯದೇಹಗ ಇನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನು ಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ ವಾದ ಗಾನಗಳನ್ನು ಸಾವಧಾನದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮ ನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲ ದಂಡವೇ ಮೊದಲಾದ ಸಮಸ್ಕಾಯುಧಗಳನ್ನೂ ತೆಗೆದುಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದುಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾರ್ಗಣ ವೃಷ್ಟಿಯನ್ನು ಸುರಿಸಲು ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮರ್ಧೆಯನ್ನು ಹೊಂದಿದರು. ಲೋಕ ದಲ್ಲಿ ದೇವ ದಾನವ ಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವು ದರಲ್ಲಿ ಅಧಿಕರ್ತೃವಾದ ಯಮನು ಎದುರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯ ಧೈರ್ಯಗಳನ್ನು ಬಣ್ಣಿಸುವವರಾರು ? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರ ಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ಯಮನವುಗಳನ್ನೆಲ್ಲಾ ಕಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿ೦ದ ದಶಗಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತು ಬಾಣ ಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ