ಪುಟ:ಕಥಾಸಂಗ್ರಹ ಸಂಪುಟ ೨.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ಅಲ್ಲಿ ಹಾಗಿರಲು ಇತ್ತ ರಾವಣನು ರಾಕ್ಷಸಕುಲದೇವತೆಯಾದ ಕಾಳಿಕಾ ದೇವಿಯಿರುವ ನಿಕುಂಭಿಳೆಯೆಂಬ ಉದ್ಯಾನವನಕ್ಕೆ ಬಂದು ನೋಡಲು ಅಲ್ಲಿ ಶತಯ ಪಸ್ತಂಭಗಳನ್ನು ನೆಟ್ಟು ಅಸುರಮಂತ್ರಪಠನ ಧ್ವನಿಯಿಂದ ಕೂಡಿ ಆಶ್ಚರ್ಯವಾಗಿ ಶೋಭಿಸುತ್ತಿರುವ ಯಾಗಮಂಟಪದಲ್ಲಿ ಕೃಷ್ಣಾಜಿನ ಜಟಾಭಸ್ಮ ರುದ್ರಾಕ್ಷಿಗಳನ್ನು ಧರಿಸಿಕೊಂಡು ಯಜ್ಞ ದೀಕ್ಷಬದ್ದನಾಗಿ ಕುಳಿತು ತದುಚಿತ ಕರ್ಮಗಳನ್ನು ಮಾಡುತ್ತ ಲಿರುವ ತನ್ನ ಕುಮಾರನಾದ* ಮೇಘನಾದನನ್ನು ನೋಡಿ ಹರ್ಷದಿಂದ ಬಿಗಿದಪ್ಪಿ ಮುದ್ದಿಸಿ-ಇದೇನು ನಿನ್ನ ಮಹೋದ್ಯೋಗವು ? ಶೀಘ್ರವಾಗಿ ತಿಳಿಸೆನಲು ಆಗ ಕುಲಗುರುವಾದ ಶುಕ್ರಾಚಾರ್ಯನು ರಾವಣನನ್ನು ಕುರಿತು- ಎಲೈ ರಾಕ್ಷ ಸರಾ ಜನೇ ! ನಿನ್ನ ಕುಮಾರನಾದ ಮೇಘನಾದನು ಅಶ್ವಮೇಧ ಅಗ್ನಿ ಷೋಮ ಅಪ್ಲೋ ರ್ಯಾಮ ಗೋಮೇಧ ವೈಷ್ಣವ ರಾಜಸೂಯ ವಾಜಪೇಯಗಳೆಂಬ ಸಪ್ತಯ ಜಗ ಳನ್ನು ಮಾಡಿ ಮುಗಿಸಿ ಆ ಮೇಲೆ ಮಾಹೇಶ್ವರ ಯಜ್ಞವನ್ನು ಆರಂಭಿಸಿದನು. ವಿಧ್ಯ ನುಸಾರವಾಗಿ ಅದೂ ಮುಗಿಯುವ ಕಾಲದಲ್ಲಿ ತುಷ್ಟನಾದ ಪರಮೇಶ್ವರನು ಪ್ರತ್ಯಕ ನಾಗಿ ಬಂದು ಧನುರ್ಬಾಣ ಶಕ್ತಿ ಗದಾ ಖಡ್ಡ ಕುಠಾರಾದ್ಯಾಯುಧಗಳನ್ನೂ ರಣ ದಲ್ಲಿ ಅರಿದುರ್ಜಯವಾದ ರಥವನ್ನೂ ಯುದ್ಧ ಕಾಲದಲ್ಲಿ ತಾನು ವೈರಿಗಳಿಗೆ ಗೋಚ ರನಾಗದೆ ಇದ್ದು ಕೊಂಡು ಅವರ ಮೇಲೆ ಬಾಣಪ್ರಯೋಗವನ್ನು ಮಾಡುತ್ತ ಅವರನ್ನು ಜಯಿಸುವುದಕ್ಕೆ ಸಹಾಯಭೂತವಾದ ತಾಮಸಿಯೆಂಬ ಮಾಯಾವಿದ್ಯೆಯನ್ನೂ ನಿನ್ನ ಮಗನಿಗೆ ಕರುಣಿಸಿದನು. ವಂಶರತ್ನ ಪ್ರಾಯನಾದ ಈ ಮೇಘನಾದನಿಂದ ಮು೦ದೆ ನಿನಗೆ ಸಕಲಕಾರ್ಯಸಿದ್ದಿ ಯು ಉಂಟಾಗುವುದು ಎಂದನು. ರಾವಣನು ಆ ಮಾತನ್ನು ಕೇಳಿ ನಸುನಗುತ್ತ ಎಲೈ ಪುತ್ರನೇ ! ನಮಗೆ ವಿರೋಧಿಸಕ್ಷದಲ್ಲಿರುವ ಇಂದ್ರಾದಿ ದೇವತೆಗಳನ್ನು ಸೇವಿಸಬಹುದೇ ? ನೀನು ಬುದ್ಧಿಯಿಲ್ಲದವನೆಂದು ಹೇಳಿ ಮಗನ ಕೈಯನ್ನು ಹಿಡಿದು ಕರೆದು ಕೊಂಡು ವಿಭೀಷಣಾದಿಗಳೊಡನೆ ತನ್ನರಮನೆಗೆ ಬಂದು ಅವರವರ ಮನೆಗಳಿಗೆ ಹೋಗುವಂತೆ ಸರ್ವರಿಗೂ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಏಕಾಂತಸ್ಥಳದಲ್ಲಿ ರಾವಣನನ್ನು ಕುರಿತು ಎಲೈ ಅಣ್ಣನೇ ! ನೀನು ದಿಗ್ವಿಜಯವನ್ನು ಮಾಡಿದುದು ಸರಿಯಾದ ಕಾರ್ಯವೇ. ಆದರೆ ನೀನು ಪರಪತ್ನಿ ಯರನ್ನು ಬಲಾತ್ಕಾರದಿಂದ ಹಿಡಿದು ತಂದುದು ಮಾತ್ರ ಬಲು ಕೆಟ್ಟ ಕೆಲಸವು. ಆ ಸ್ತ್ರೀಯರ ದುಃಖಾತಿರೇಕವು ನಿನ್ನ ಪರಾಕ್ರಮಾತಿಶಯಕ್ಕೆ ಅಮಂಗಲಕರವಾಗಿಯೂ ಹಾನಿಕರವಾಗಿಯೂ ಸಂಭವಿಸಿದ ವರ್ತಮಾನವನ್ನು ಹೇಳು ವೆನು ಕೇಳು, ಮಧುವೆಂಬ ದನುಜನು ಬಂದು ನಿನ್ನ ಸೇನೆಯನ್ನು ಕೊಂದು ಉಳಿದು ದನ್ನು ಹಿಂದಟ್ಟಿ ಅಂತಃಪುರದೊಳಹೊಕ್ಕು ನಮ್ಮ ತಾಯಿಯ ತಂಗಿಯಾದ ಕುಂಭೀ ನಸಿಯನ್ನು ಹಿಡಿದುಕೊಂಡು ಹೋದನು. ಮಾಡಿದವರಿಗೆ ಮಾಡಿದಷ್ಟೆ೦ಬ ಗಾದೆಯು ನಿನ್ನಲ್ಲೇ ನಿದರ್ಶನಕ್ಕೆ ಬಂದಿತೆಂದು ಹೇಳಲು ರಾವಣನು ಇದೇನು ಮಹಾಶ ರ್ಯವು ? ನೀನೂ ಮೇಘನಾದನೂ ಕುಂಭಕರ್ಣನೂ ಏನು ಮಾಡುತ್ತಿದ್ದಿರಿ ? ಎಲ್ಲಿ ದ್ದಿರಿ ? ಎಂದು ಕೇಳಲು ವಿಭೀಷಣನು-ನಾನು ಅಘಮರ್ಷಣಮಂತ್ರವನ್ನು ಜಪಿ ಸುತ್ತ ನೀರಿನಲ್ಲಿ ಮುಳುಗಿದ್ದೆನು. ಮೇಘನಾದನು ನಿಕುಂಭಿಳೆಯಲ್ಲಿ ಯಾಗಮಾಡು