ಪುಟ:ಕಥಾಸಂಗ್ರಹ ಸಂಪುಟ ೨.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 31 ಕಿಂಧಾಪಟ್ಟಣವನ್ನು ಸೇರಿ ಆತನ ಮಂತ್ರಿಯಾದ ತಾರನೆಂಬ ಕಪಿಶ್ರೇಷ್ಠನನ್ನು ಕಂಡು ಎಲೈ ಕಪಿಯೇ ! ನಿನ್ನ ಅರಸಾದ ದೊಡ್ಡ ಕೋತಿಯು ಎಲ್ಲಿ ? ನಾನು ಶೂರ ದಶಾನನನು. ನಿಮ್ಮರಸನೊಡನೆ ದ್ವಂದ್ವಯುದ್ಧವನ್ನು ಮಾಡುವುದಕ್ಕಾಗಿ ಬಂದಿ ದೇನೆ. ಈ ವರ್ತಮಾನವನ್ನು ಅವನಿಗೆ ತಿಳಿಸೆಂದು ಹೇಳಲು ಅದಕ್ಕೆ ಆ ತಾರನು-ಪರಾಕ್ರಮಶಾಲಿಯಾದ ನಮ್ಮ ವಾಲಿಯು ಸ್ವಾನಾರ್ಥವಾಗಿ ಪೂರ್ವ ಸಮುದ್ರವನ್ನು ಕುರಿತು ಹೋಗಿದ್ದಾನೆ. ಒಂದು ಮುಹೂರ್ತಮಾತ್ರ ಇಲ್ಲಿರು. ಆತನು ಬರುವನು ಎಂದು ಹೇಳಲು ಆಗ ರಾವಣನು ಅಲ್ಲಿಗೇ ಹೋಗುವೆನೆಂದು ಹೇಳಿ ಕಿಪ್ರಿಂ ಧೆಯಿಂದ ಹೊರಟು ಪರ್ವಸಮುದ್ರತೀರಕ್ಕೆ ಬಂದು ನೋಡಲು ಅಷ್ಟರೊಳಗೆ ವಾಲಿಯು ಸ್ನಾನ ಮಾಡಿ ಸಮುದ್ರತೀರದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಂಡು ಮಂತ್ರಜಪವನ್ನು ಮಾಡುತ್ತಿದ್ದನು. ಇದೇ ಸಮಯದಲ್ಲಿ ಇವನನ್ನು ನನ್ನ ಇಪ್ಪತ್ತು ತೋಳುಗಳಿ೦ದಲೂ ಬಿಗಿದು ಹಿಡಿದು ಜಯಿಸಬೇಕೆಂದು ಅವನ ಹಿಂದು ಗಡೆಯಲ್ಲಿ ಅವನಿಗೆ ತಿಳಿಯದಂತೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ ಬಂದು ತಾನು ಬರುವು ದನ್ನು ಕಂಡೂ ಕಾಣದವನಂತೆ ಕುಳಿತಿರುವ ವಾಲಿಯ ಎರಡು ಕಂಕುಳುಗಳ ಸಂದು ಗಳಲ್ಲಿಯೂ ತನ್ನಿ ಪ್ಪತ್ತು ತೋಳುಗಳನ್ನೂ ಚಾಚಲು ಆಗ ವಾಲಿಯು ತನ್ನ ಎರಡು ಕಂಕ ಳುಗಳಿಂದ ಅವನ ಇಪ್ಪತ್ತು ತೋಳುಗಳನ್ನೂ ಅಲುಗದಂತೆ ಜಪವು ಮುಗಿವ ವರೆಗೂ ಅಮುಕಿಕೊಂಡಿದ್ದು ಆ ಮೇಲೆ ಗರುಡನು ನಾಗರಹಾವನ್ನು ಕಚ್ಚಿ ಕೊಂಡು ಗಗನಾಂ ತರಾಳಕ್ಕೆ ಹಾರುವಂತೆ ಹಾರಿ ತೆಂಕಣಕಡಲಿಗೆ ಹೋಗಿ ಅಲ್ಲಿ ತನ್ನ ಹಿಂದುಗಡೆ ನೇತಾಡುತ್ತಿರುವ ರಾವಣನನ್ನು ಅದ್ದಿ ಅಲ್ಲಿಂದ ಪಡುವಣ ಕಡಲೆಡೆಗೈದಿ ಅವನನ್ನು ಅದರ ನೀರಿನಲ್ಲೂ ಅದ್ದಿ ತೆಗೆದುಕೊಂಡು ಬಂದು ಕಿಪ್ರಿಂಧಾಪಟ್ಟಣದ ಹೊರ ಗಿರುವ ಪೂದೋಟದ ಮೇಲ್ಕಡೆಯ ಆಕಾಶದಲ್ಲಿ ನಿಂತು ಆ ವರೆಗೂ ತನ್ನ ವೇಗ ವನ್ನು ಸಹಿಸಲಾರದೆ ತಲೆ ತಿರುಗಿ ಕಂಗೆಟ್ಟಿರುವ ರಾವಣನನ್ನು ಕಂಕುಳೆತ್ತಿ ಕೆಡ ವಿಬಿಟ್ಟು ತನ್ನ ಅಂತಃಪುರಕ್ಕೆ ಹೋಗಿ ಭೋಜನಾದಿಗಳನ್ನು ಮುಗಿಸಿಕೊಂಡು ತನ್ನ ಸಕಲಪರಿವಾರ ಸಮೇತನಾಗಿ ರಾವಣನು ಬಿದ್ದಿರುವ ಸ್ಥಳಕ್ಕೆ ಬರಲು ಬಹು ದೂರ ಪತನದಿಂದುಂಟಾದ ಮಹಾಘಾತದಿಂದ ಬಹು ಮರ್ಧೆಯನ್ನು ಹೊಂದಿದ್ದು ಆಗತಾನೆ ಸ್ವಲ್ಪ ಚೇತರಿಸಿಕೊಂಡಿದ್ದ ರಾವಣನನ್ನು ನೋಡಿ ಕಾಣದವನಂತೆ. ಇದೇ ನೈಯಾ ರಾಕ್ಷಸರಾಜನೇ ! ಪರಿವಾರಜನರೊಬ್ಬರೂ ಇಲ್ಲದೆ ಈ ತೋಟದಲ್ಲಿ ಈ ರೀತಿಯಾಗಿ ಕಂಗೆಟ್ಟು ಬಿದ್ದಿದ್ದೀಯೆ ? ನಿನಗೆ ಇಂಥ ಪರಿಭವವು ಯಾರಿಂದುಂಟಾ ಯಿತು ? ನೀನು ದಿಕ್ಷಾಲಕರನ್ನೂ ತ್ರಿಲೋಕವನ್ನೂ ಜಯಿಸಿದ ಮಹಾವೀರನಲ್ಲಾ ! ಈ ವರ್ತನವು ನನಗೆ ಸ್ವಲ್ಪ ಮಾತ್ರ ಸೂಚಿತವಾಗಿದ್ದರೆ ನಾನು ಕೂಡಲೆ ಬಂದು ನನ್ನಿಂದ ಆದಮಟ್ಟಿಗೆ ನಿನಗೆ ಸಹಾಯವನ್ನು ಕೊಡುತ್ತಿದ್ದೆನಲ್ಲಾ! ನೀನು ಹಾಗೆ ತಿಳಿ ಸದೇ ಹೋದುದು ತಪ್ಪಲ್ಲವೇ ? ಎಂದು ಹಾಸ್ಯಗರ್ಭಿತವಾಗಿ ಮಾತಾಡಲು ರಾವ ಣನು ಈ ಮಾತುಗಳನ್ನು ಕೇಳಿ ನಾಚಿ ತಲೆವಾಗಿ-ಎಲೈ ಮಹಾಶೂರನೇ ! ಲೋಕ ದಲ್ಲಿ ಪರಾಕ್ರಮದಲ್ಲೂ ವೇಗದಲ್ಲೂ ಶಕ್ತಿಯಲ್ಲೂ ನಿನಗೆ ಸಮಾನರಾದವರನ್ನು