ಪುಟ:ಕಥಾಸಂಗ್ರಹ ಸಂಪುಟ ೨.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಕಥಾಸಂಗ್ರಹ-೪ ನೆಯ ಭಾಗ ಇತ್ಯ ಮಿಥಿಲಾನಗರಾಧಿಪತಿಯಾದ ಜನಕರಾಜನು ತಾನು ಮಾಡುವ ಯಜ್ಞ ಕ್ರೋಸ್ಕರ ಭೂಮಿಯನ್ನು ಉಳಿಸುತ್ತಿರಲು ಆಗ ಲಾಂಗಲಪದ್ದತಿಯಲ್ಲಿ ಸಿಕ್ಕಿದುದರಿಂದ ಅನ್ವರ್ಥವಾಗಿ ಸೀತೆ ಎಂಬ ನಾಮಧೇಯವನ್ನು ಹೊಂದಿದ್ದ ಕನ್ಯಾರತ್ನ ಕೈ ಸ್ವಯಂವ ರವನ್ನು ನಿಶ್ಚಯಿಸಿ ಆ ಸ್ವಯಂವರಮಂಟಪದಲ್ಲಿ ಈಶ್ವರನಿಂದ ಕೊಡಲ್ಪಟ್ಟಿದ್ದ ಬಿಲ್ಲ ನ್ನಿಟ್ಟು ಈ ಧನುಸ್ಸಿಗೆ ಹೆದೆಯನ್ನು ಏರಿಸಿದಂಥ ಶೂರಾಗ್ರೇಸರನಿಗೆ ಸೀತಾದೇವಿಯನ್ನು ಕೊಡುವುದಾಗಿ ಪಣಬಂಧವನ್ನು ಮಾಡಿ ಈ ವಿಷಯವನ್ನು ಎಲ್ಲಾ ದೇಶಗಳಲ್ಲಿಯ ಪ್ರಸಿದ್ಧ ಪಡಿಸಿದನು. ಆಗ ವಿಶ್ವಾಮಿತ್ರ ಯೋಗಿಯ ಸಂತುಷ್ಟಾ೦ತರ೦ಗನಾಗಿ ರಾಮ ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲಾನಗರಕ್ಕೆ ಬಂದು ಜನಕನಿಂದ ಸತ್ಕೃತನಾಗಿ ವಿಸ್ತಾರವಾಗಿಯ ಶೋಭಾಯಮಾನವಾಗಿಯೂ ಅನೇಕ ದೇಶಗಳ ರಾಜಕುಮಾರ ರಿಂದ ಕೂಡಿದುದಾಗಿಯ ಇರುವ ಸ್ವಯಂವರಮಂಟಪಕ್ಕೆ ಬಂದನು. ಅನಂತರದಲ್ಲಿ ನಿಯಮಿತಕಾಲದಲ್ಲಿ ರಾಜಕುಮಾರರೆಲ್ಲರೂ ಕ್ರಮವಾಗಿ ಬಂದು ಕೋದಂಡವನ್ನೆತ್ತಿ ಅದಕ್ಕೆ ಶಿಂಜಿನಿಯನ್ನು ಸೇರಿಸಲಾರದೆ ಹೋಗಲು ಶ್ರೀ ರಾಮನು ಮುನ್ನುಜ್ಞೆಯನ್ನು ಹೊಂದಿ ಧನುಸ್ಸನ್ನು ಎತ್ತಿ ಮೌರ್ವಿಯನ್ನು ಕಟ್ಟಿ ದುದಲ್ಲದೆ ಅದನ್ನು ಮುರಿದು ಬಿಟ್ಟನು. ಆಗ ಅವನ ಶೌರ್ಯಾತಿಶಯವನ್ನು ಸರ್ವರೂ ಹೊಗಳಿದರು. ಕೂಡಲೆ ಕೋಮಲಾಂಗಿಯಾದ ಸೀತೆಯು ಪುಷ್ಪಮಾಲಿಕೆಯನ್ನು ತಂದು ಶ್ರೀ ರಾಮನ ಕಂಠ ದಲ್ಲಿ ಹಾಕಿದಳು. ಆಗ ದೇವತೆಗಳು ಭೂಮಳೆಗರೆದರು. ಸುರದುಂದುಭಿಗಳು ಮೊಳ ಗಿದುವು. ಅನಂತರದಲ್ಲಿ ಜನಕನು ಅಯೋಧ್ಯೆಯಿಂದ ದಶರಥಾದಿಗಳನ್ನು ಕರಿಸಿಕೊಂಡು ಅತ್ಯಂತ ವೈಭವದೊಡನೆ ಸೀತೆಯನ್ನು ರಾಮನಿಗೂ ಜನಕನ ಪುತ್ರಿಯಾದ ಊರ್ಮಿಳೆ ಯನ್ನು ಲಕ್ಷ್ಮಣನಿಗೂ ಜನಕನ ತಮ್ಮನಾದ ಕುಶಧ್ವಜನ ಕುಮಾರಿಯರಾದ ಮಾಂ ಡವಿ ಶ್ರುತಕೀರ್ತಿ ಎಂಬವರನ್ನು ಭರತ ಶತ್ರುಘ್ರರಿಗೂ ಕೊಟ್ಟು ಶಾಸ್ರಕ ವಿಧಾನ ದಿಂದ ಮದುವೆಮಾಡಿದನು ಸರ್ವರೂ ಸನ್ಮಾನಿತರಾಗಿ ತಮ್ಮ ತಮ್ಮ ಪತ್ನಿ ಯರೊಡನೆ ಪರಿವಾರಸಮೇತರಾಗಿ ಹೊರಟು ಅಯೋಧ್ಯಾನಗರವನ್ನು ಸೇರಿ ಸಕಲ ಸುಖವನ್ನೂ ಅನುಭವಿಸುತ್ತ ಇರುವಾಗ ಭರತನ ಸೋದರಮಾವನಾದ ಯುಧಾಜಿತ್ತೆ೦ಬ ಕೇಕಯ ದೇಶದ ಯುವರಾಜನು ಅಯೋಧ್ಯೆಗೆ ಬಂದು ದಶರಥರಾಜನ ಒಪ್ಪಿಕೆಯಿಂದ ತನ್ನ ಸೋದರಳಿಯನಾದ ಭರತನನ್ನು ಕರೆದುಕೊಂಡು ಕೇಕಯ ಪಟ್ಟಣಕ್ಕೆ ಹೋದನು. ಆಗ ಸುಮಿತ್ರೆಯ ಕುಮಾರನಾದ ಶತ್ರುಘ್ನ ನೂ ಭರತನೊಡನೆಯೇ ಹೋದನು. ಇತ್ತ ಅಯೋಧ್ಯಾನಗರದಲ್ಲಿ ರಾಮಲಕ್ಷ್ಮಣರು ತಾಯಿ ತಂದೆಗಳ ಸೇವೆ ಯನ್ನು ಮಾಡುತ್ತ ದೇಶದ ಜನಗಳಿಗೂ ಪಟ್ಟಣದ ಜನಗಳಿಗೂ ಮಂತ್ರಿ ಸೇನಾಪತಿ ಗಳೇ ಮೊದಲಾದ ಪರಿವಾರದ ಜನಗಳಿಗೂ ತಮ್ಮ ಸದ್ಗುಣಗಳಿ೦ದ ಹಿತವನ್ನುಂಟು ಮಾಡುವವರಾಗಿ ಮೆರೆಯುತ್ತಿದ್ದರು. ಹೀಗಿರಲು ದಶರಥರಾಜನು ತನ್ನ ಜೇಷ್ಠ ಕುಮಾರನಾದ ರಾಮನ ದಯಾಧರ್ಮಾದಿ ಮಹಾ ಗುಣಗಳಿಗಾಗಿ ಬಹು ಸಂತೋಷ ಪಟ್ಟು ನನ್ನ ಸಿಂಹಾಸನವನ್ನೇರುವುದಕ್ಕೂ ಈ ಕೋಸರಾಜ್ಯವನ್ನು ನೀತಿಯಿಂದ ಪರಿ ಪಾಲಿಸುವುದಕ್ಕೂ ಪೂರ್ಣಚಂದ್ರನು ಸಮುದ್ರವನ್ನು ಹೆಚ್ಚಿಸುವಂತೆ ರಘುವಂಶವನ್ನು