ಪುಟ:ಕಥಾಸಂಗ್ರಹ ಸಂಪುಟ ೨.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


38 ಕಥಾಸಂಗ್ರಹ-೪ ನೆಯ ಭಾಗ ನೀತಿಸಂಪನ್ನೆ ಯಾದ ನೀನು ನನಗೆ ಇಂಥ ಅಪ್ರಿಯವಾದ ಮಾತುಗಳನ್ನು ಒಂದು ದಿನ ಸವಾದರೂ ಹೇಳಿದವಳಲ್ಲವಲ್ಲಾ ! ಈಗ ನಿನಗೆ ಪಿಶಾಚಿಯೇನಾದರೂ ಹಿಡಿದಿದೆಯೋ ? ಅದರಿಂದ ನಿನಗೆ ಇಂಥ ಬುದ್ಧಿವಿಕೃತಿಯುಂಟಾಗಿರಬಹುದೇ ? ನೀನು ನನ್ನೊಡನೆ ಏಕಾಂತದಲ್ಲಿರುವಾಗ್ಗೆ ಅನೇಕಾವೃತಿ ಲೋಕಾಭಿರಾಮನಾದ ರಾಮನು ನನಗೆ ಭರತ ನಗಿಂತಲೂ ಹೆಚ್ಚೆಂದು ಹೇಳುತ್ತಿದ್ದೆಯಲ್ಲಾ! ಇ೦ಥ ನೀನು ಧರ್ಮಿಷ ನಾಗಿಯೂ ಕೀರ್ತಿವಂತನಾಗಿಯೂ ಇರುವ ರಾಮನಿಗೆ ಚತುರ್ದಶ ಸಂವತ್ಸರಗಳ ವರೆಗೂ ವನವಾ ಸವನ್ನು ಕೋರಿದೆಯಲ್ಲಾ ! ಹೆತ್ತ ತಾಯಿಗಿಂತಲೂ ನೀನೇ ಹೆಜ್ಜೆ೦ದು ತಿಳಿದು ಯಾವಾಗಲೂ ನಿನ್ನ ಶುಶೂಷೆಯನ್ನು ಮಾಡುತ್ತಿರುವ ರಾಮನ ವಿಷಯದಲ್ಲಿ ಸ್ವಪ್ನ ದಲ್ಲಿಯಾದರೂ ಇಂಥ ಕೂರಕಾರ್ಯವನ್ನು ಎಣಿಸಬಹುದೇ ? ನನಗೆ ಬಹು ಪತ್ನಿಯ ರಿರುವರು. ಅವರಲ್ಲಿ ಒಬ್ಬಳಾದರೂ ಒಂದು ದಿವಸವಾದರೂ ರಾಮನ ವಿಷಯದಲ್ಲಿ ಸ್ವಲ್ಲಾಪವಾದವನ್ನೂ ಹೇಳಲಿಲ್ಲ. ಸತ್ಯದಿಂದ ಲೋಕಗಳೂ ದಾನದಿಂದ ದೀನರನ್ನೂ ಶುಕ್ರೂಷೆಯಿಂದ ವೃದ್ದರನ್ನೂ ತೃಪ್ತಿ ಪಡಿಸುತ್ತ ಬಿಲ್ಲಿನಿಂದ ಹಗೆಗಳನ್ನು ಜಯಿಸುವ ಸಕಲ ಗುಣಸಂಪನ್ನನಾದ ರಾಮನನ್ನು ನಿನ್ನ ನಿಮಿತ್ತವಾಗಿ ಹೇಗೆ ಕಾಡಿಗಟ್ಟಲಿ ? ಯಾವ ರಾಮನಲ್ಲಿ ಸಹನಗುಣವೂ ಇಂದ್ರಿಯನಿಗ್ರಹವೂ ಸತ್ಯವೂ ಧರ್ಮವೂ ಕೃತಜ್ಞ ತೆಯ ಅಹಿಂಸಾಗುಣವೂ ಇರುವುವೋ ಅಂಥ ರಾಮನನ್ನು ಬಿಟ್ಟರೆ ನನಗೆ ಗತಿಯಾರು? ದೀನನಾಗಿ ಬೇಡಿಕೊಳ್ಳುವ ಮುದುಕನ ಪತಿಯ ಆದ ನನ್ನಲ್ಲಿ ನೀನು ಕನಿಕರವನ್ನು ಮಾಡು. ನಿನಗೆ ಕೋಪವು ಬೇಡ. ಸಮುದ್ರಗಳಿಂದ ಸುತ್ತಲ್ಪಟ್ಟಿರುವ ಈ ಭೂಮಂಡ ಲದಲ್ಲಿ ನೀನು ಅಪೇಕ್ಷಿಸಿದ ಪದಾರ್ಥವನ್ನು ಆ ಕ್ಷಣದಲ್ಲಿಯೇ ತಂದು ಕೊಡುವೆನು. ಎಲೈ ಪ್ರಿಯೆಯೇ ! ನಿನಗೆ ಕೈಮುಗಿಯುವೆನು. ನಿನ್ನ ಕಾಲುಗಳಿಗೆ ನಮಸ್ಕರಿಸುವೆನು. ನನಗೂ ರಾಮನಿಗೂ ರಕ ಕಳಾಗೆಂದು ಬಹುವಿಧವಾಗಿ ಪ್ರಲಾಪಿಸುತ್ತ ದುಃಖಿಸುತ್ತ ಬಿಸುಸುಯ್ಯುತ್ತ ಕಣ್ಣೀರುಗಳನ್ನು ಸುರಿಸುತ್ತ ಬಾರಿಬಾರಿಗೂ ಬೇಡಿಕೊಳ್ಳುತ್ತಿರುವ ದಶರಥನನ್ನು ನೋಡಿ ಕೂರಳಾದ ಕೈಕೇಯಿಯು-ಎಲೈ ತಿರಸೇ ! ಮೊದಲು ಪ್ರತಿ ಜ್ಞೆಯನ್ನು ಮಾಡಿ ಎರಡು ವರಗಳನ್ನು ಕೊಟ್ಟು ಈಗ ಮಗನ ಮೇಲಣ ಮೋಹದಿಂದ ಹೀಗೆ ಸಂಕಟಪಟ್ಟರೆ ಈ ಲೋಕದಲ್ಲಿ ನಿನ್ನನ್ನು ಭಾಷಾಪ್ರತಿಪಾಲಕನೆಂದು ಹೇಳು ವರೇ ? ಈ ನಮ್ಮ ಇಕ್ಷಾಕುವಂಶದಲ್ಲಿ ಹುಟ್ಟಿದಇಂಥಗಳಲ್ಲಿ ಇಂದಿನ ವರೆಗೂ ಒಬ್ಬ ರಾದರೂ ಕೊಟ್ಟ ಮಾತಿಗೆ ತಪ್ಪಿದವರಿಲ್ಲ. ನೀನು ಅರಸು ಪ್ರಸಿದ್ದ ವಂಶದಲ್ಲಿ ಹುಟ್ಟಿ ಹೀಗೆ ಮಾತಿಗೆ ತಪ್ಪಬಹುದೇ ? ಪೂರ್ವದಲ್ಲಿ ಸಿಬಿಚಕ್ರವರ್ತಿಯ ಪಾರಿವಾಳದ ಹಕ್ಕಿಗೆ ಕೊಟ್ಟ ಮಾತಿಗಾಗಿ ಗಿಡಗನಿಗೆ ತನ್ನ ಮಾಂಸವನ್ನು ಕೊಯ್ದು ಕೊಡುವುದ ರಿಂದಲೂ ಅಲರ್ಕನು ತನ್ನ ಕಣ್ಣುಗಳನ್ನು ಕಿತ್ತು ಕೊಡುವುದರಿಂದಲೂ ಉತ್ತಮವಾದ ಗತಿಯನ್ನು ಹೊಂದಲಿಲ್ಲ ವೇ ? ಒಳ್ಳೆಯದಾಯಿತು. ಧರ್ಮವನ್ನು ಪರಿತ್ಯಜಿಸಿ ನಿನ್ನ ಮೋಹದ ಮಗನಾದ ರಾಮನನ್ನು ರಾಜ್ಯದಲ್ಲಿ ಅಭಿಷೇಕಿಸಿ ಕೌಸಲೈಯೊಡನೆ ಸುಖ ವಾಗಿರು. ನಾನು ಈಗಲೇ ನಿನ್ನ ಮುಂದೆಯೇ ವಿಷಪಾನವನ್ನು ಮಾಡಿ ಪ್ರಾಣವನ್ನು ಬಿಡುವೆನು. ಪಟ್ಟಾಭಿಷಿಕ್ತನಾದ ರಾಮನನ್ನೂ ಆತನ ತಾಯಿಯಾದ ಕೌಸಿಯನ್ನೂ