ಪುಟ:ಕಥಾಸಂಗ್ರಹ ಸಂಪುಟ ೨.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 41 ಲಿನಿಂದ ಒಪ್ಪುತ್ತಿರುವುದೂ ಆದ ಬಿಳಿಯ ಗೂಳಿಯ ನಾಲ್ಕು ಕೋರೆದಾಡೆಗಳುಳ್ಳ ಸಿಂಹವೂ ಮಂಗಳಕರವಾದ ಸಿಂಹಾಸನವೂ ಸಂಪೂರ್ಣವಾದ ಶಾರ್ದೂಲಚರ್ಮ ವೂ ಮುತ್ತುಗದ ಸಮಿತ್ತುಗಳೂ ಬನ್ನಿ ಯ ಮರವನ್ನು ಕಡಿದು ಉಂಟುಮಾಡಿದ ಬೆಂಕಿಯ ಭೇರಿ ಮೃದಂಗಾದಿ ವಿವಿಧ ವಾದ್ಯಗಳೂ ಕಮನೀಯವನ್ನಾಭರಣಾ ಲಂಕೃತರಾದ ವೇಶ್ಯಾಸ್ತ್ರೀಯರೂ ಪೂಜ್ಯರಾದ ಗುರುಗಳೂ ಕ್ಷೇಮದಾಯಕವಾದ ಆಕಳುಗಳೂ ಶ್ರೇಷ್ಠ ವಾದ ಮೃಗಪಕ್ಷಿಗಳೂ ಇವೇ ಮೊದಲಾದುವುಗಳನ್ನೆಲ್ಲಾ ಸಿದ್ದ ಮಾಡಿಕೊಂಡು ನಾವು ಬಂದಿರುವುದಾಗಿಯೂ ದೋಷರಹಿತವಾದ ತಿಥಿ ವಾರ ನಕ್ಷತ್ರ ಯೋಗ ಕರಣಗಳಿಂದ ಕೂಡಿದ ಶುಭಲಗ್ನದಲ್ಲಿ ಲೋಕಾಭಿರಾಮನಾದ ಶ್ರೀರಾಮ ನಿಗೆ ಪಟ್ಟಾಭಿಷೇಕವನ್ನು ಮಾಡುವುದಕ್ಕಾಗಿ ರೆಪಡಿಸೆಂದು ಹೇಳಿದರೆಂಬುದಾಗಿಯೂ ತಿಳಿಸೆಂದನು. ಸುಮಂತ್ರನು ಆ ಮಾತುಗಳನ್ನು ಕೇಳಿ ಅಂತಃಪುರವನ್ನು ಪ್ರವೇಶಿಸಿ ರಾಜನ ಶಯ್ಯಾಗೃಹದ ಬಾಗಿಲಲ್ಲಿ ಕೈ ಮುಗಿದು ನಿಂತು-ಎಲೈ ಮಹಾರಾಜನೇ ! ಸಕಲ ಲೋಕಗಳನ್ನೂ ಆಹ್ವಾ ದಪಡಿಸುತ್ತ ಸೂರ್ಯನು ಹೇಗೆ ಉದಯಿಸುತ್ತಿರುವ ಹಾಗೆಯೇ ನೀನು ಶಯಾತಲದಿಂದೆದ್ದು ನಮ್ಮೆಲ್ಲರನ್ನೂ ಸಂತೋಷಪಡಿಸು, ಮಾತಲಿ ಯೆಂಬ ಸಾರಥಿಯು ದೇವೇಂದ್ರನನ್ನು ಎಬ್ಬಿಸುವಂತೆಯ ಉದಯಾದಿತ್ಯನು ಸಮಸ್ತ ಪ್ರಾಣಿಗಳನ್ನೂ ಎಬ್ಬಿಸುವಂತೆಯೂ ಅಪರರಾತ್ರಿಯಲ್ಲಿ ಶಿಷ್ಯರ ವೇದಾಧ್ಯಯನಘೋ ಷವು ಗುರುಗಳನ್ನು ಎಬ್ಬಿಸುವಂತೆಯ ಈ ವೇಳೆಯಲ್ಲಿ ನಾನು ನಿನ್ನನ್ನು ಎಬ್ಬಿಸುತ್ತಿ ರುವೆನು. ಎಲೈ ಮಹಾರಾಜನೇ ! ನಮ್ಮೆಲ್ಲರ ಭಾಗ್ಯ ದೇವತೆಯು ಉದಯಿಸುವಂತೆ ಹಾಸಿಗೆಯ ದೆಸೆಯಿಂದ ಶೀಘ್ರವಾಗಿ ಏಳುವವನಾಗು. ಚ೦ದ್ರ ಸೂರ್ಯರೂ ವರುಣ ವೈಶ್ರವಣರೂ ಇಂದ್ರಾಗ್ನಿಗಳೂ ನಿನಗೆ ಮಂಗಳವನ್ನು ೦ಟುಮಾಡಲಿ. ರಾತ್ರಿಯು ಕಳೆದುಹೋಯಿತು. ಮಂಗಳಕರವಾದ ಪ್ರಾತಃಕಾಲವುಂಟಾಯಿತು. ರಾಮನ ಪಟ್ಟಾ ಭಿಷೇಕಕ್ಕೆ ಬೇಕಾದ ಸಕಲಸಾಮಗ್ರಿಗಳನ್ನು ಸಿದ್ದ ಮಾಡಿಕೊಂಡು ಪುರೋಹಿತರಾದ ವಸಿಷ್ಠರು ಬಂದು ಕಾದಿದ್ದಾರೆ. ನೀನು ಶೀಘ್ರವಾಗಿ ಬಂದು ರಾಮನ ಪಟ್ಟಾಭಿಷೇಕ ಕಾರ್ಯವನ್ನು ನೆರವೇರಿಸುವವನಾಗು. ಸೇನಾಪತಿಗಳಿಂದೊಡಗೂಡಿದ ಸೇನೆಯಂ ತೆಯ ಚಂದ್ರನಿಂದೊಡಗೂಡಿದ ರಾತ್ರಿಯಂತೆಯ ಪ್ರಭುಸಹಿತವಾದ ರಾಷ್ಟ್ರ ವು ಪರಿಶೋಭಿಸುವುದು ಎಂದು ಹೇಳುತ್ತಿರಲು ಆಗ ಸ್ವಲ್ಪ ಚೇತರಿಸಿಕೊಂಡಿದ್ದ ದಶರಥ ನಿಗೆ ಈ ಮಾತುಗಳೆಲ್ಲಾ ಕೇಳಿಸಿದ ಕೂಡಲೆ ಕರ್ಣಕಠೋರವಾಗಿ ದೊಡ್ಡ ಗಾಯಗ ಳಲ್ಲಿ ಹೊಸ ಸುಣ್ಣವನ್ನು ಹಾಕಿ ನೀರನ್ನು ಹೊಯ್ದಂತಾಗಿ ಸಂಕಟಪಡಿಸಲು ಆಗ ರಾಜನು ನಿದ್ರಾಭಾವದಿಂದ ಕೆಂಪಾಗಿರುವ ಕಣ್ಣುಗಳಿಂದ ಸುಮಂತ್ರನನ್ನು ನೋಡಿ ಎಲೈ ಸುಮಂತ್ರನೇ ! ನೀನು ಈ ವಿಧವಾದ ದುಸ್ಸಹವಾಕ್ಯಗಳೆಂಬ ಕತ್ತಿಗಳಿಂದ ಬಾರಿ ಬಾರಿಗೂ ನನ್ನ ಮರ್ಮಸ್ಥಳಗಳನ್ನು ಏಕೆ ಕತ್ತರಿಸುತ್ತಿರುವೆ ? ಎಂದು ಇಷ್ಟು ಮಾತ್ರ ಹೇಳಿ ಮತ್ತೆ ಮೂರ್ಛಾಗತನಾದನು. ಆಗ ಕೈಕೇಯಿಯು. ಎಲೈ ಸುಮಂತ್ರನೇ ! ಅರಸನು ರಾಮನ ಪಟ್ಟಾಭಿಷೇ ಕೋತ್ಸವದ ಸಂಭ್ರಮದಿಂದ ರಾತ್ರಿಯೆಲ್ಲಾ ಎಚ್ಚತ್ತಿದ್ದನು. ಅದು ಕಾರಣ ಈಗತಾನೆ