ಪುಟ:ಕಥಾಸಂಗ್ರಹ ಸಂಪುಟ ೨.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕಥಾಸಂಗ್ರಹ-೪ ನೆಯ ಭಾಗ M ಗಳನ್ನು ಕೇಳಿದವನಾದಾಗ ಮನಸ್ಸಿನಲ್ಲಿ ಸ್ವಲ್ಪವಾದರೂ ಚಿಂತಿಸಿ ಭಯಪಡದೆ ಕೈಕೇಯಿಯನ್ನು ಕುರಿತು-ತಂದೆಯ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ನಾನು ಜಟಾಜಿನಗಳನ್ನು ಧರಿಸಿ ಈಗಲೇ ಅರಣ್ಯಕ್ಕೆ ಹೋಗುವೆನು. ಗುರುವಾಗಿ ಹಿತ ನಾಗಿಯ ತಂದೆಯಾಗಿಯ ಅರಸಾಗಿಯೂ ಇರುವವನ ಮಾತುಗಳನ್ನು ಲೋಕ ದಲ್ಲಿ ಯಾವ ಮಗನಾದರೂ ಕೇಳದೆ ಇರುವನೇ ? ನಾನು ನನ್ನ ತಮ್ಮನಾದ ಭರತನಿ ಗೋಸ್ಕರ ನನ್ನ ರಾಜ್ಯವನ್ನಾದರೂ ಧನವನ್ನಾದರೂ ಕಡೆಗೆ ಪ್ರಾಣಗಳನ್ನಾದರೂ ಸಂತೋಷದಿಂದ ಕೊಡುವುದಕ್ಕೆ ಸಿದ್ಧನಾಗಿರುವಲ್ಲಿ ಮಹಾತ್ಮರಾದ ತಾಯಿ ತಂದೆಗಳ ಪ್ರೇರಣೆಯುಂಟಾದರೆ ಕೊಡುವುದೊಂದತಿಶಯವೇನು ? ದೂತರು ಈಗಲೇ ಶೀಘ್ರ ವಾಗಿ ಕೇಕಯನಗರಕ್ಕೆ ಹೋಗಿ ಭರತನನ್ನು ಕರತರಲಿ. ಸಂತೋಷದಿಂದ ಕೂಡಿ ನನ್ನ ಕೈಯಿಂದಲೇ ಅವನಿಗೆ ಪಟ್ಟಾಭಿಷೇಕವನ್ನು ಮಾಡಿ ಆ ಮೇಲೆ ನಾನು ಉಲ್ಲಾಸದಿಂದ ದಂಡಕಾರಣ್ಯವನ್ನು ಕುರಿತು ಹೋಗುವೆನು ಎನಲು ಆಗ ಕೈಕೇಯಿಯು ಸಂತು ಪ್ಲಾಂತರಂಗಳಾಗಿ ನಾವು ಭರತನನ್ನು ಕರತರಿಸಿಕೊಂಡು ಆತನಿಗೆ ಪಟ್ಟಾಭಿಷೇಕ ವನ್ನು ಮಾಡುವೆವು, ಅದರ ಚಿಂತೆಯು ನಿನಗೆ ಬೇಡ. ಈಗ ನೀನು ವಿಳಂಬ ಮಾಡದೆ ಹೊರಟು ವನಕ್ಕೆ ಹೋದ ಹೊರತು ದೊರೆಯು ಸ್ವಸ್ಥ ಚಿತ್ತನಾಗುವುದಿಲ್ಲ ಎನ್ನಲು ಆಗ ಈ ಮಾತುಗಳನ್ನು ಕೇಳಿದ ದಶರಥನು ಸಿಡಿಲಪ್ಪಳಿಸಿದ ಕದಳೀ ತರುವಿನಂತೆ ಭೂಮಿಗುರುಳಿ ಮರ್ಲೆ ಹೊಂದಿದನು. ಆಗ ರಾಮನು ತತ್ಕಾಲೋಚಿತವಾದ ಉಪ ಚಾರಗಳಿಂದ ಉಪಚರಿಸಿ ತಂದೆಯನ್ನು ಲಬ್ದ ಸಂಜನನ್ನಾಗಿ ಮಾಡಿ ಆ ಮೇಲೆ ಕೈಕೇ ಯಿಯ ಮಾತುಗಳಿಂದ ಪ್ರೇರಿಸಲ್ಪಟ್ಟು ಚಾವಟಿಯಿಂದ ಹೊಡೆಯಲ್ಪಟ್ಟ ಕುದುರೆ ಯಂತೆ ತ್ವರಿತಗತಿಯಿಂದ ಕೂಡಿದವನಾಗಿ ಕೈಕೇಯಿಯನ್ನು ಕುರಿತು-ಎಲೆ ತಾಯೇ ! ನಾನು ಕೇವಲ ಧನಲೋಭವುಳ್ಳವನೆಂದು ಯೋಚಿಸಬೇಡ. ನನ್ನನ್ನು ಖುಷಿ ಗಳಿಗೆ ಸಮಾನನಾದ ಧರ್ಮಿಷ್ಠನೆಂದು ತಿಳಿಯುವಳಾಗು ಎಂದು ತಾಯಿತಂದೆಗಳನ್ನು ಬಲಗೊಂಡು ಭಕ್ತಿಯಿಂದ ವಂದಿಸಿ ಹೊರಗೆ ಬಂದು ಓಲಗದ ಚಾವಡಿಯಲ್ಲಿ ಸಿದ್ದಪ ಡಿಸಿಟ್ಟಿದ್ದ ಅಭಿಷೇಕಸಾಮಗ್ರಿಗಳನ್ನು ಪ್ರದಕ್ಷಿ ಣಮಾಡಿ ಕೈ ಮುಗಿದು ಛತ್ರಚಾಮರ ಧಾರಿಗಳೇ ಮೊದಲಾದ ಸಕಲವಿಧ ಪರಿಜನರನ್ನೂ ಬಿಟ್ಟು ತಾನೊಬ್ಬನೇ ಹೊರಟು ನಿಜಮಾತೃವಾದ ಕೌಸಲ್ಯಾದೇವಿಯ ಮನೆಗೆ ಬರುತ್ತಿರಲು ಆಗ ಲಕ್ಷ್ಮಣನು ಮಾತ್ರ ಧನುರ್ಬಾಣಗಳನ್ನು ತೆಗೆದು ಕೊಂಡು ರಾಮನ ಹಿಂದೆಯೇ ಹೋದನು. ಅನಂತರದಲ್ಲಿ ಶ್ರೀರಾಮನು ತನ್ನ ತಾಯಿಯ ಅಂತಃಪುರವನ್ನು ಪ್ರವೇಶಿಸಿ ಆಕೆಯ ಸನ್ನಿಧಾನಕ್ಕೆ ಹೋಗಿ ನಮಸ್ಕರಿಸಲು ಆಕೆಯು ಪರಮಸಾತ್ವಿಕನಾದ ರಾಮನನ್ನು ಬಾಚಿ ತಬ್ಬಿಕೊಂಡು ಮುಂಗುರುಗಳನ್ನು ತಿದ್ದಿ ಶಿರಸ್ಸನ್ನು ಆಘ್ರಾ ಣಿಸಿ ಮುದ್ದಾಡಿ ಅಪಾರವಾದ ಪುತ್ರವಾತ್ಸಲ್ಯದಿಂದ ಕೂಡಿದವಳಾಗಿ ರಾಮನನ್ನು ಕುರಿತು ಮಹಾರಾಜರಾದ ನಿನ್ನ ತಂದೆಯು ಈಗ ನಿನ್ನನ್ನು ರಾಜ್ಯಾಭಿಷಿಕ್ಕನ ನ್ನಾಗಿ ಮಾಡುವನು. ಇನ್ನು ಮೇಲೆ ನೀನು ಭಯಭಕ್ತಿಯಿಂದ ಪಿತೃಶುಕ್ರೂಷೆಯನ್ನು ಮಾಡುತ್ತ ನನಗಿಂತಲೂ ಚಿಕ್ಕವರಾಗಿದ್ದು ನಿನ್ನ ತಂದೆಯ ಪತ್ನಿಯರಾದ ನಿನ್ನ