ಪುಟ:ಕಥಾಸಂಗ್ರಹ ಸಂಪುಟ ೨.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


S0 ಕಥಾಸಂಗ್ರಹ-೪ನೆಯ ಭಾಗ ಆಗ ಕೌಸಲ್ಯಯು ತಂದೆಯ ಪ್ರತಿಜ್ಞೆಯನ್ನು ಕಾಪಾಡುವುದರಲ್ಲಿ ಬದ್ದಾ ದರ ನಾದ ರಾಮನನ್ನು ನೋಡಿ..ಅಯ್ಯೋ ದುರ್ವಿಧಿಯೇ ! ಹುಟ್ಟಿ ದಂದಿನಿಂದ ದುಃಖ ವನ್ನರಿಯದೆ ಧರ್ಮಾತ್ಮನೂ ಸರ್ವಪ್ರಾಣಿಪ್ರಿಯನೂ ದಶರಥನಿಂದ ನನ್ನಲ್ಲಿ ಜನಿಸಿದ ವನೂ ಆಗಿರುವ ರಾಮನಿಗೆ ಇಂಥ ಕಷ್ಟವನ್ನು ಕೊಡಬಹುದೇ ? ಯಾವ ಸುಕುಮಾರ ಶರೀರ ಧಾರಿಯಾದ ರಾಮನ ದಾಸಧೃತ್ಯರೂ ಕೂಡ ಮೃಷ್ಟಾನ್ನವನ್ನು ಂಡು ದಣಿದು ಅಮೂಲ್ಯವಾದ ಉಡಿಗೆ ತೊಡಿಗೆಗಳನ್ನು ಟ್ಟು ತೊಟ್ಟು ನಿರಂತರವೂ ಸುಖದಲ್ಲಿರುತ್ತಿ ದ್ದರೋ ಅಂಥ ಮಹಾತ್ಮನಾದ ರಾಮನಿಗೆ ಜಡೆಯನ್ನು ಧರಿಸಿ ನಾರಸೀರೆಯನ್ನು ಟ್ಟು ಜಿಂಕೆಯ ಚರ್ಮವನ್ನು ಹೊದೆದು ಭಯಂಕರವಾದ ಮಹಾರಣ್ಯ ಮಧ್ಯದಲ್ಲಿ ಕಲ್ಕು ಳ್ಳುಗಳಿಂದ ಕೂಡಿ ದುರ್ಗಮವಾದ ದಾರಿಗಳಲ್ಲಿ ಬರಿಗಾಲುಗಳಿಂದ ನಡೆಯುತ್ತ ತನ್ನ ಕೈಗುದ್ದಲಿಯಿಂದಗೆದು ಗಡ್ಡೆಗೆಣಸುಗಳನ್ನು ತಂದು ತಿಂದು ಬದುಕುವ ದುರವಸ್ಥೆ ಯನ್ನು ಕೊಡಬಹುದೇ ? ಕಷ್ಟವೆಂಬುದನ್ನು ಸ್ವಪ್ನದಲ್ಲಿಯಾದರೂ ಕಂಡರಿಯದವ ನಾದ ನನ್ನ ಪ್ರಿಯಕುಮಾರನಿಗೆ ಇಂಥ ಭಯಂಕರವಾದ ವಿಪತ್ತನ್ನು ತಂದೊದಗಿಸುವ ನಿನಗೆ ಲೇಶವಾದರೂ ಕುರುಣವಿಲ್ಲವಲ್ಲಾ ! ಅಯ್ಯೋ ಪಾಪಿಯಾದ ವಿಧಿಯೇ ! ನಿರಪ ರಾಧಿಯಾದ ರಾಮನಿಗೆ ಇಂಥ ದುರವಸ್ಥೆಯವುದಕ್ಕೆ ನಿನಗೆ ಮನಸ್ಸು ಹೇಗೆ ಬಂದಿತು ? ಆದರೂ ಚಿಂತೆಯಿಲ್ಲ. ನಿನ್ನನ್ನು ಕುರಿತು ಇದೊಂದು ಮಾತನ್ನು ಬೇಡಿ ಕೊಳ್ಳುವೆನು, ನೀನು ದೀನಳಾದ ನನ್ನಲ್ಲಿ ಕನಿಕರವಿಟ್ಟು ಈ ರಾಮನು ವನಕ್ಕೆ ಹೋಗುವುದಕ್ಕಿಂತಲೂ ಮೊದಲೇ ನನ್ನನ್ನು ಯಮನಪಟ್ಟಣಕ್ಕೆ ಕಳುಹಿಸು ಎನ್ನುತ್ತ ನಾನಾ ವಿಧವಾಗಿ ಹಂಬಲಿಸಿ ಮೊರೆಯಿಡುತ್ತಿರುವ ತಾಯಿಯಾದ ಕೌಸಲೈಯನ್ನು ನೋಡಿ ರಾಮನು ಆಕೆಯ ಕಾಲುಗಳನ್ನು ತನ್ನ ಕೈಗಳಿಂದ ಹಿಡಿದು ಕೊಂಡು ಅಮ್ಮ ತಾಯೇ ! ನೀನು ಈ ರೀತಿಯಾಗಿ ದುಃಖಿಸುತ್ತಿರುವುದನ್ನು ನೋಡುತ್ತಿರುವ ನನಗೂ ಬಹು ದುಃಖ ಉಂಟಾಗುವುದು. ಮತ್ತು ನೋಡುತ್ತಿರುವವರಾದ ಈ ಜನರೆ ಲ್ಲರೂ ಬಹು ದುಃಖವೆಂಬ ಕಡಲಿನಲ್ಲಿ ಮುಳುಗುವರು. ಕೋಸಲದೇಶಾಧೀಶ್ವರನಿಗೆ ಪುತ್ರಿಯ ದಶರಥ ಮಹಾರಾಜನ ಪತ್ನಿ ಯ ಸಕಲ ನ್ಯಾಯಮಾರ್ಗಗಳನ್ನು ತಿಳಿದ ವೃದ್ದ ಳೂ ಆಗಿರುವ ನೀನು ಆಪತ್ತು ಬಂದಾಗ ಧೈರವನ್ನು ಅವಲಂಬಿಸಬೇಕೆಂದು ದೊಡ್ಡವರು ಹೇಳುವ ಮಾತನ್ನು ಮೀರಿ ಉತ್ತಮವಾದ ನಿನ್ನ ಬುದ್ಧಿ ವಿವೇಕಗಳನ್ನು ಶೋಕಕ್ಕೆ ಮಾರಿಬಿಡಬಹುದೇ ? ಈ ಸಂಸಾರ ಮಾರ್ಗದಲ್ಲಿ ಸರ್ವರಿಗೂ ಸುಖದುಃಖ ಗಳು ದ್ವಂದ್ರವಾಗಿರುವುವು. ಇದೋ, ನೋಡು ! ನಾವು ಅಪೇಕಿ ಸದಿದ್ದರೂ ದುಃಖವು ಹೇಗೆ ಬಂದೊದಗಿತೋ ಹಾಗೆಯೇ ಸುಖವೂ ಕೂಡ ಅನಪೇಕ್ಷಿತವಾಗಿ ಬಂದೊದಗು ವುದು. ಹಿಂದೆ ನಮ್ಮ ವಂಶದಲ್ಲಿ ಮಹಾರಾಜನೂ ಸತ್ಯಸಂಧನೂ ಆಗಿದ್ದ ಹರಿಶ್ಚಂ ದ್ರನ ಪಟ್ಟಮಹಿಷಿಯ ಮಹಾ ಪತಿವ್ರತೆಯ ಆಗಿದ್ದ ಚಂದ್ರಮತೀದೇವಿಯು ಪತಿಯ ಆಜ್ಞಾನುಸಾರವಾಗಿದ್ದು ಮಹಾ ಕಷ್ಟವನ್ನೂ ಕೂಡ ಅನುಭವಿಸಿದುದನ್ನೂ ಪುನಃ ಪತಿಯೊಡನೆ ಸುಖಸಾಂಮ್ರಾಜ್ಯಗಳನ್ನನುಭವಿಸುತ್ತ ಲೋಕದಲ್ಲಿ ಅಪಾರವಾದ ಯಶಸ್ಸನ್ನು ಪಡೆದುದನ್ನೂ ನೀನು ಕೇಳಿಲ್ಲವೇ ? ಈಗ ದಶರಥಭೂಪಾಲನು ನನ್ನ 0