ಪುಟ:ಕಥಾಸಂಗ್ರಹ ಸಂಪುಟ ೨.djvu/೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 55 ಅರಣ್ಯಕ್ಕೆ ಕರೆದುಕೊಂಡು ಹೋಗುವುದಕ್ಕಾಗಿ ಒಪ್ಪಿ ಸ್ವಕೀಯವಾದ ಸಕಲಪದಾರ್ಥ ಗಳನ್ನೂ ದುರ್ಗತರಿಗೆ ದಾನಮಾಡಿ ಧನುರ್ಬಾಣಗಳನ್ನು ಧರಿಸಿ ಸೀತಾಲಕ್ಷ್ಮಣರೊಡನೆ ಕೂಡಿ ತಿರಿಗಿ ಪಿತೃ ದರ್ಶನವನ್ನು ಮಾಡಿ ಹೋಗಬೇಕೆಂಬ ಉದ್ದೇಶದಿಂದ ಬೀದಿಯಲ್ಲಿ ಬರುತ್ತಿರಲು ಪುರಜನರೆಲ್ಲ ರೂ ಗುಂಪುಗುಂಪಾಗಿ ನಿಂತು ಅವರನ್ನು ನೋಡುತ್ತ ರೋದಿ ಸುತ್ತ ಅಕಟಕಟಾ ! ಭೂಲೋಕದಲ್ಲಿ ಇಂಥ ಭಯಂಕರವಾದ ಅನ್ಯಾಯವೂ ಉo ಟೇ ? ಮೊದಲು ಈ ರಾಮನು ಉತ್ತಮಾಶಗಳನ್ನು ಕಟ್ಟಿ ಶೋಭಿಸುತ್ತಿರುವ ದೇವಯೋ ಗ್ಯವಾದ ರಥದ ಮೇಲೆ ಕುಳಿತು ಉಭಯ ಪಾರ್ಶ್ವಗಳಲ್ಲೂ ಸೇವಿಸುತ್ತಿರುವ ಛತ್ರಚಾ ಮರಾದಿಗಳನ್ನು ಧರಿಸಿದವರಿಂದಲೂ ಅನನ್ಯ ಸಾಧಾರಣವಾದ ಬಿರುದುಗಳನ್ನು ಧರಿಸಿ ಇಕ್ಕೆಲದಲ್ಲೂ ಬರುತ್ತಿರುವವರಿಂದಲೂ ಇನ್ನೂ ವಿವಿಧವಾದ ಪರಿವಾರದವರಿಂದಲೂ ಹಿಂದೆಯ ಮುಂದೆಯೂ ಒಪ್ಪುತ್ತಿರುವ ಚತುರಂಗಬಲದಿಂದಲೂ ಕೂಡಿ ರಾಜವೀಧಿ ಯಲ್ಲಿ ಬಲುಸೊಬಗಿನಿಂದ ಬರುತ್ತಿದ್ದುದನ್ನು ಸಂತೋಷದಿಂದ ನೋಡುತ್ತಿದ್ದ ಈ ನಮ್ಮ ನೇತ್ರಗಳು ಈಗ ತನ್ನ೦ತೆ ಪಾದಚಾರಿಗಳಾಗಿರುವ ಸೀತಾಲಕಣರೊಡನೆ ಬರುತ್ತಿರು ವುದನ್ನು ನೋಡುತ್ತಿವೆಯಲ್ಲಾ! ಆಹಾ ! ಇಂಥ ಕಣ್ಣುಗಳು ಒಡೆದುಹೋಗಬಾ ರದೇ ? ಅಯ್ಯೋ ! ಸರ್ವಾಂಗ ಸುಂದರಿಯ ಸುಕುಮಾರಿಯ ಮಹಾಪತಿವ್ರತೆಯ ಆದ ಈ ಸೀತೆಯು ನಿರಂತರವೂ ಅಂತಃಪುರದಲ್ಲಿ ಇದ್ದುಕೊಂಡು ಅಪರಿಮಿತರಾದ ಸೇವಕರಿಂದ ರಾಜೋಪಚಾರವನ್ನು ಹೊಂದುತ್ತಿದ್ದಳು. ಈಗ ಸೂರ್ಯನ ಬಲುಬಿಸಿಲು ಹೊಯ್ಲಿಂದ ಬಾಡಿದ ಮುಖವುಳ್ಳವಳಾಗಿ ರಾಜವೀಧಿಯಲ್ಲಿ ಬರಿಗಾಲಿಂದಲೇ ನಡೆದು ಬರುತ್ತಿರುವಳಲ್ಲಾ ! ಮಹಾತಳಾದ ಈಕೆಗೆ ಒದಗಿದ ಇಂಥ ದುರ್ಗತಿಯನ್ನು ನೋಡುತ್ತಿರುವವರಾದ ನಾವೇ ಪಾಪಿಗಳಲ್ಲವೇ ! ಲೋಕದಲ್ಲಿ ತಂದೆಯಾದವನು ತನ್ನ ಮಗನು ಗುಣಹೀನನಾಗಿ ಎಂಥ ಕೆಟ್ಟವನಾದರೂ ಅವನನ್ನು ಅರಣ್ಯಕ್ಕೆ ಅಟ್ಟುವನೇ ? ಈ ರಾಮನಾದ ಶೌರ್ಯ ಧೈರ್ಯ ಪರಾಕ್ರಮಗಳಲ್ಲಿ ಅದ್ವಿತೀಯನೂ ಸರ್ವ ಲೋಕಮಾನನೂ ಸುಗುಣಾಭರಣಭೂಷಿತನೂ ಆಗಿರುವನು. ಇಂಥಾವನನ್ನು ಅಡವಿಗ ಟ್ಟುವ ಮಢನಾದ ದಶರಥನ ಬಾಳನ್ನು ಸುಡಬೇಕು. ನಾವು ಮಹಾಪುರುಷನಾದ ಇಂಥ ರಾಮನನ್ನು ಬಿಟ್ಟು ಈ ಪಟ್ಟಣದಲ್ಲಿರುವುದರಿಂದ ನಮಗೂ ಭಯಂಕರವಾದ ಕಷ್ಟವು ಪ್ರಾಪ್ತವಾದೀತು. ಅದು ಕಾರಣ ನಾವೆಲ್ಲರೂ ನಮ್ಮ ನಮ್ಮ ಸಂಸಾರಗಳೊ ಡನೆ ಕೂಡಿ ಈತನೊಡನೆಯೇ ಹೋದರೆ ಶೂರರಾದ ಈ ರಾಮಲಕ್ಷ್ಮಣರೂ ಸರ್ವ ಗುಣಸಂಪನ್ನೆ ಯಾದ ಈ ಸೀತೆಯ ನಮ್ಮೆಲ್ಲರನ್ನೂ ಕಾಪಾಡುವರು. ಕೂರಳಾದ ಕೈಕೇಯಿಯ ಅಧೀನನಾಗಿ ಯು ಕಾಯುಕ್ತವಿಚಾರಶೂನ್ಯನಾದ ಈ ದಶರಥನ ರಾಜ್ಯದಲ್ಲಿ ನಾವಿರಬಾರದು. ಅದು ಕಾರಣ ನಾವೆಲ್ಲರೂ ಅರಣ್ಯಕ್ಕೆ ಹೊರಡುವಣ. ದಶರಥನೂ ಕೈಕೇಯಿಯ ರಾಜಾಧಿರಾಜನಾಗುವ ಭರತನನ್ನು ನೋಡಿ ಸಂತೋಪಿ ಸುತ್ತ ಇರಲಿ ಎಂದು ನಾನಾವಿಧವಾಗಿ ಹೇಳಿಕೊಂಡು ದುಃಖಿಸುತ್ತಿದ್ದರು. ರಾಮನು ಪುರಜನರ ಈ ವಿಧವಾದ ಮಾತುಗಳನ್ನು ಕೇಳುತ್ತ ಮನಸ್ಸಿನಲ್ಲಿ ದುಸ್ಸಹ ದುಃಖಾನುಭವಿಯಾಗಿ ದಶರಥನ ಅರಮನೆಯ ಬಾಗಿಲ ಬಳಿಗೆ ಬಂದು ಅಲ್ಲಿದ್ದ ಟ