ಪುಟ:ಕಥಾಸಂಗ್ರಹ ಸಂಪುಟ ೨.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


13 ಸುಗ್ರೀವಸಖ್ಯದ ಕಥೆ ಕೂಡಿ ದಂಡಕವನದಲ್ಲಿ ವಾಸಮಾಡುತ್ತಿರುವವನಾಗಿ ಅಲ್ಲಿದ್ದ ಖರಾಬ ರಾಕ ಸರನ್ನು ಸಂಹರಿಸಿದನು. ಆ ಹಗೆತನದಿಂದ ದುಷ್ಟನಾದ ರಾವಣನೆಂಬ ರಾಕ್ಷಸನು ಈತನ ಪತ್ನಿಯಾದ ಸೀತೆಯನ್ನು ನಾವಿಲ್ಲದ ವೇಳೆಯಲ್ಲಿ ಅಪಹರಿಸಿಕೊಂಡು ಹೋದನು. ಆದುದರಿಂದ ಅವನನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಬಯಸಿ ಇಲ್ಲಿಗೆ ಬಂದೆವು ಎಂದು ಹೇಳಿದನು. ಹನುಮಂತನು ಆ ಮಾತುಗಳನ್ನು ಕೇಳಿ ಸಂತೋಷ ಪಟ್ಟು ಸನ್ಯಾಸಿರೂಪವನ್ನು ಬಿಟ್ಟು ಮೊದಲಿನ ರೂಪವನ್ನು ಧರಿಸಿ ರಾಮಲಕ್ಷ್ಮಣರನ್ನು ತನ್ನ ಹೆಗಲುಗಳ ಮೇಲೆ ಕುಳ್ಳಿರಿಸಿಕೊಂಡು ಅಲ್ಲಿಂದ ಲಂಘಿಸಿ ಋಷ್ಯಮಕಗಿರಿಗೆ ಬಂದು ಅಲ್ಲಿನ ನಳನಳಿಸುವ ಚಿಗುರುಗಳನ್ನು ತಂದು ರಾಮಲಕ್ಷ್ಮಣರಿಗೆ ಹಾಸಿಕೊಟ್ಟು ಕುಳ್ಳಿರಿಸಿ ಆ ಪರ್ವತದ ಗುಹೆಯಲ್ಲಿರುವ ಸುಗ್ರೀವನನ್ನು ಕಂಡು ವೃತ್ತಾಂತವನ್ನೆಲ್ಲಾ ತಿಳಿಸಿ ರ್ನನೀಲಾದಿ ಕಪಿ ಸೇನಾಪತಿಗಳೊಡನೆ ಅವನನ್ನು ಕರತರಲು ಆಗ ಸುಗ್ರೀವನು ರಾಮನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು. ರಾಮನು ಆತನನ್ನು ತನ್ನ ಬಾಹುಗಳಿಂದ ಬಿಗಿದಪ್ಪಿ ಸಂತೋಷಿಸಿದನು. ಆ ಮೇಲೆ ರಾಮಸುಗ್ರೀವರು ತಮ್ಮ ತಮ್ಮ ಕಷ್ಟಗಳನ್ನು ಒಬ್ಬರಿ ಗೊಬ್ಬರು ತಿಳಿಸಿಕೊಂಡ ಮೇಲೆ ರಾಮನು ಸುಗ್ರೀವನನ್ನು ನೋಡಿ ನಿನ್ನ ಹಗೆ ಯಾದ ವಾಲಿಯನ್ನು ಕೊಂದು ನಿನಗೆ ಕಪಿರಾಜ್ರಾಭೀಷೇಕವನ್ನು ಮಾಡಿಸುವೆನೆಂದು ವಾಗ್ದಾನಮಾಡಿದನು. ಸುಗ್ರೀವನು ರಾಮನನ್ನು ನೋಡಿ.. ಪಾಪಿಯಾದ ರಾವ ಣನೂ ನಿನ್ನ ಪತ್ನಿ ಯಾದ ಸೀತೆಯ ಸ್ವರ್ಗಮರ್ತ್ಯಪಾತಾಳಗಳೆಂಬ ಮೂರು ಲೋಕ ಗಳೊಳಗೆ ಎಲ್ಲಿದ್ದರೂ ಹುಡುಕಿ ಗೊತ್ತು ಮಾಡಿ ಆ ರಾವಣನ ಸಂಹಾರಕ್ಕೋಸ್ಕರ ಕಪಿಸೇನಾಸಮೇತನಾದ ನಾನು ನಿನಗೆ ಸಹಾಯಿಯಾಗಿರುವೆನೆಂದು ಭಾಷೆ ಕೊಟ್ಟನು. ತರುವಾಯ ಅಗ್ನಿಯನ್ನು ಪ್ರತಿಷ್ಠಿಸಿ ಅವರಿಬ್ಬರೂ ಅಗ್ನಿಸಾಕಿ ಯಾಗಿ ಸಖ್ಯವನ್ನು ಮಾಡಿಕೊಂಡು ಒಬ್ಬರ ಕೈಯನ್ನೊಬ್ಬರು ಹಿಡಿದು ಪರಸ್ಪರವಾಗಿ ಆಲಿಂಗನಾದಿಗ ಳಿಂದ ಆನಂದಿಸಿದರು. ಆ ಬಳಿಕ ಸುಗ್ರೀವನು ವಿವಿಧವಾದ ಫಲಗಳಿಂದಲೂ ಗಡ್ಡೆಗೆಣಸುಗಳಿಂದಲೂ ಅಕ್ಷಣಸಹಿತನಾಗಿ ರಾಮನಿಗೆ ಆತಿಥ್ಯವನ್ನು ಮಾಡಿ ತೃಪ್ತಿ ಪಡಿಸಿದನು. ಆ ಮೇಲೆ ಮೊದಲು ಸೀತೆಯು ತಮ್ಮ ಬಳಿಗೆ ಹಾಕಿದ್ದ ಒಡವೆಗಳನ್ನು ಅವನಿಗೆ ಒಪ್ಪಿಸಿದನು. ಆಗ ರಾಮನು ಪತ್ನಿಯನ್ನು ನೆನಸಿಕೊಂಡು ವಿಶೇಷವಾಗಿ ದುಃಖಿಸಿ ವ್ಯಸನಪಡುತ್ತಿ ರಲು ಸುಗ್ರೀವಲಕ್ಷ್ಮಣರು ಆತನನ್ನು ಸಮಾಧಾನಪಡಿಸಿದರು. ತರುವಾಯ ಸುಗ್ರೀ ವನು ವಾಲಿಯ ಅಮೋಘವಾದ ಪರಾಕ್ರಮವನ್ನು ನೆನೆದು ರಾಮನಿಗೆ ಆತನನ್ನು ಕೊಲ್ಲುವ ಶಕ್ತಿಯುಂಟೋ ? ಇಲ್ಲ ವೋ ? ಪರೀಕ್ಷಿಸಿ ತಿಳಿಯಬೇಕೆಂದು ಮನಸ್ಸಿ ನಲ್ಲಿ ಯೋಚಿಸಿ ರಾಮನನ್ನು ಕುರಿತು-ಎಲೈ ರಾಜೇಂದ್ರನೇ ! ಇದೋ ಇಲ್ಲಿ ಬಿದ್ದಿ ರುವ ಈ ಮಳೆಯು ದುಂದುಭಿಯೆಂಬ ರಾಕ್ಷಸನ ಶರೀರಸಂಬಂಧವಾದುದು. ಕಿಕ್ಕಿಂ ಧೆಯಲ್ಲಿ ವಾಲಿಯು ಅವನನ್ನು ಕೊಂದು ಇಲ್ಲಿಗೆ ಎಡಗೈಯಿಂದ ಬಿಸುಟನು. ಇದೇ ನೋಡು. ಇಲ್ಲಿ ಕಾಣುವ ಏಳು ಓಲೆಯ ಮರಗಳು ಪಾತಾಳದಿಂದ ಆರಂಭಿಸಿ ಮೇಘ A &