ಪುಟ:ಕಥಾಸಂಗ್ರಹ ಸಂಪುಟ ೨.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 | ಕಥಾಸಂಗ್ರಹ-೪ ನೆಯ ಭಾಗ ಳ್ಳುತ್ತಿರಲು ಅವರ ಸಮೀಪದಲ್ಲಿ ಗರಿಗಳೆಲ್ಲಾ ಸೀಯು ಹೋಗಿ ಬಿದ್ದಿದ್ದ ಸಂಪಾತಿ ಯೆಂಬ ಗೃಧ್ರರಾಜನು ಈ ಕಪಿವೀರರನ್ನು ಕುರಿತು ನೀವು ಯಾರಪ್ಪಾ ? ನನ್ನ ತಮ್ಮ ನಾದ ಜಟಾಯುವು ಸತ್ತನೆಂದು ಹೇಳಿ ನನ್ನ ಮನಸ್ಸಿಗೆ ಬಹಳ ದುಃಖವನ್ನು ಂಟು ಮಾಡಿದಿರಿ. ಆತನನ್ನು ಯಾರು ಕೊಂದರಪ್ಪಾ ? ಅದಕ್ಕೆ ನಿಮಿತ್ತ ವೇನು ? ಆ ವರ್ತ ಮಾನವನ್ನೆಲ್ಲಾ ನನಗೆ ವಿವರವಾಗಿ ತಿಳಿಸಿರಿ ಎನ್ನಲು ಅಂಗದನು ಆತನನ್ನು ಕುರಿತು ಅಯೋಧ್ಯಾಧಿಪತಿಯಾದ ದಶರಥರಾಜನಿಗೆ ಪುತ್ರನಾದ ರಾಮನು ತಂದೆಯ ಆಜ್ಞಾ ನುಸಾರವಾಗಿ ದಂಡಕವನದಲ್ಲಿರುತ್ತಿರಲು ರಾವಣನೆಂಬುವನು ಹಗೆತನದಿಂದ ಆತನ ಪತ್ನಿ ಯಾದ ಸೀತೆಯನ್ನು ಆತನಿಲ್ಲದ ವೇಳೆಯಲ್ಲಿ ಕಳ್ಳತನದಿಂದ ಎತ್ತಿಕೊಂಡು ಹೋಗು ತಿರುವಲ್ಲಿ ನಿನ್ನ ತಮ್ಮನಾದ ಜಟಾಯುವು ಸೀತೆಯನ್ನು ಬಿಡಿಸುವುದಕ್ಕೋಸ್ಕರ ರಾವ ಣನೊಡನೆ ಜಗಳಕ್ಕೆ ನಿಲ್ಲಲು ಅವನು ನಿನ್ನ ತಮ್ಮ ನನ್ನು ಕೊಂದು ಸೀತೆಯನ್ನು ಎತ್ತಿ ಕೊಂಡು ಹೋದನೆಂದು ತಿಳಿಸಿ ತಾವು ಆ ಸೀತಾರಾವಣರನ್ನು ಹುಡುಕುವುದಕ್ಕೆ ಬಂದ ಸುದ್ದಿಯನ್ನು ಆಮೂಲಾಗ್ರವಾಗಿ ತಿಳಿಸಿದರು. ಆಗ ಸಂಪಾತಿಯು-ಎಲೈ ಕಪಿನಾಯಕರೇ ! ಆ ರಾಮನು ನನ್ನ ಮಿತ್ರನ ಮಗನು ಅದು ಕಾರಣ ನಾನು ನಿಮಗೆ ಸಹಾಯಮಾಡುವೆನು, ಪೂರ್ವದಲ್ಲಿ ನಾನೂ ನನ್ನ ತಮ್ಮನಾದ ಜಟಾಯುವೂ ನಮ್ಮ ನಮ್ಮ ಶಕ್ತಿಗಳನ್ನು ಪರೀಕ್ಷಿಸಿಕೊಳ್ಳುವುದ ಕೋಸ್ಕರ ಹಟವನ್ನು ಮಾಡಿಕೊಂಡು ನಾವಿಬ್ಬರೂ ಸೂರ್ಯಮಂಡಲದ ವರೆಗೂ ಹಾರಿಹೋಗಲು ಆಗ ನಾನು ಸೂರ್ಯಕಿರಣಗಳ ಉಷ್ಣಾತಿಶಯದಿಂದ ಸಂಕಟಪಡುತ್ತಿ ರುವ ನನ್ನ ತಮ್ಮನಿಗೆ ನನ್ನ ಗರಿಗಳನ್ನು ಮರೆಮಾಡಲು ಆತನು ಗರಿಗಳಿಂದ ಕೂಡಿ ಜನಸ್ಥಾನದಲ್ಲಿ ಬಿದ್ದು ಜೀವಿಸಿಕೊಂಡಿದ್ದನು. ನಾನು ಉರಿದುಹೋದ ಗರಿಗಳನ್ನು ಳ್ಳವನಾಗಿ ಇಲ್ಲಿ ಬಿದ್ದೆನು. ನಿಶಾಕರನೆಂಬೊಬ್ಬ ಮಹಾಮುನಿಯು ನನ್ನನ್ನು ನೋಡಿ ದಯೆಯುಳ್ಳವನಾಗಿಮು೦ದೆ ಇಲ್ಲಿಗೆ ರಾಮನ ಕಾರ್ಯಾರ್ಥವಾಗಿ ಕಪಿಸೇನಾನಾ ಯಕರು ಬರುವರು. ನೀನು ಅವರಿಗೆ ಸೀತಾರಾವಣರಿರುವ ಸ್ಥಳವನ್ನು ತಿಳಿಸಿ ಸಹಾಯ ಮಾಡಿದರೆ ನಿನ್ನ ಗರಿಗಳು ತಿರುಗಿ ಹುಟ್ಟುವುವು ಎಂದು ವರವನ್ನು ಕೊಟ್ಟಿದ್ದನು. ಅದು ಕಾರಣ ಇದೋ ನೋಡಿರಿ. ಈ ದಕ್ಷಿಣ ಸಮುದ್ರದ ಆಚೆ ಶತಯೋಜನ ದೂರ ದಲ್ಲಿ ತ್ರಿಕೂಟವೆಂಬ ಪರ್ವತದ ಶಿಖರದ ಮೇಲೆ ಲಂಕೆಯೆಂಬುದೊಂದು ಪಟ್ಟಣವಿರು ವುದು. ಅದೇ ದುಷ್ಟನಾದ ರಾವಣನ ವಾಸಸ್ಥಾನವು. ಅವನ ಅಂತಃಪುರೋದ್ಯಾನದಲ್ಲಿ ರಾಕ್ಷಸಿಯರ ಕಾವಲಿನಿಂದ ಸೀತೆ ಇರುವಳು. ನಮ್ಮ ದು ಪಕ್ಷಿ ಜಾತಿಯಾದುದರಿಂದ ನಮ್ಮ ದೃಷ್ಟಿಯು ಬಹುದೂರದ ವರೆಗೂ ಪ್ರಸರಿಸುವುದು. ಇದೋ ಸೀತೆಯು ನನಗೆ ಕಾಣುತ್ತಾಳೆ ! ನೀವು ಸಮುದ್ರವನ್ನು ದಾಟಿ ಲಂಕೆಗೆ ಹೋದರೆ ಸೀತೆಯನ್ನೂ ರಾವ ಣನನ್ನೂ ಕಾಣುವಿರಿ. ಇದೋ ನನ್ನ ರಕ್ಷೆಗಳು ಹುಟ್ಟಿ ಬೆಳೆಯುತ್ತಿವೆ ನೋಡಿರಿ ಎಂದು ತೋರಿಸಿದನು. ಕಪಿಸೇನಾಪತಿಗಳು ಆ ಮಾತನ್ನು ಕೇಳಿ ನಿಧಿಯನ್ನು ಕಂಡ ದರಿದ್ರರಂತೆಯೂ ಚಂದ್ರನನ್ನು ಕಂಡ ಚಕೋರಗಳಂತೆಯ ವರ್ಷತರ್ುವನ್ನು ಕಂಡ ನವಿಲುಗಳಂತೆಯ ಮುಂಗಾರು ಹನಿಗಳನ್ನು ಕಂಡ ಚಾತಕಪಕ್ಷಿಗಳಂತೆಯ ಸಂತೋಷಪಟ್ಟು ಎಲ್ಲರೂ ಬಂಡೆಯ ಮೇಲಣಿಂದೆದ್ದು ಹೊರಟು ಸಮುದ್ರತೀರಪ್ರದೇಶವನ್ನು ಸೇರಿದರು.

  • )