ಪುಟ:ಕಥಾಸಂಗ್ರಹ ಸಂಪುಟ ೨.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


84 ಕಥಾಸಂಗ್ರಹ-೪ ನೆಯ ಭಾಗ ಇನ್ನೂ ಇತರ ಸ್ಥಳಗಳಲ್ಲೂ ಹುಡುಕುತ್ತ ಬಂದು ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ಪ್ರಚಂಡಮಾರುತದಿಂದ ತಂದು ಹಾಕಲ್ಪಟ್ಟ ನೀಲಗಿರೀಂದ್ರನೋ ಎಂಬ ಹಾಗೆ ಬಿದ್ದಿ ರುವ ಕುಂಭಕರ್ಣನೆಂಬ ರಾಕ್ಷ ಸಾಧಮನನ್ನು ನೋಡಿ ಇವನು ಜಗತ್ತಿನ ಕೊಲೆಗೆ ಲಸವನ್ನು ಮಾಡಿ ಮುಗಿಸಿ ಬಳಲಿ ಬಿಗಿದ ಬಲು ನಿದ್ದೆಯಿಂದ ಬಿದ್ದಿರುವ ಭೈರವನೋ ? ಯಮನೋ ? ಅಥವಾ ಸಮುದಕವನ್ನೆಲ್ಲಾ ಕುಡಿದು ತೃಪ್ತನಾಗಿ ಬಿದ್ದಿರುವ ಬಡಬಾನಲನೋ ? ಎಂದು ಬೆರಗಾಗಿ-ಈ ರಾಕ್ಷ ಸಮಾರಿಯೇನಾದರೂ ಲೋಕವ ನೈಲ್ಲಾ ನುಂಗಬೇಕೆಂದು ಎದ್ದು ನಿಂತರೆ ಹರಿಹರಬ್ರಹೇಂದ್ರಾದಿ ದೇವತೆಗಳಲ್ಲೂ ನರಭು ಜಂಗಮರಲ್ಲೂ ಬೇಕು ಬೇಡೆಂಬವರನ್ನು ಕಾಣೆನು ಎಂದು ಮನಸ್ಸಿನಲ್ಲಿ ಭಯ ಪಟ್ಟು ಕೊಂಡು ಬರಬರುತ್ತ ಭೂಲೋಕವನ್ನೆಲ್ಲಾ ತೇಲಿಸಿ ಮುಳುಗಿಸುವ ಪ್ರಳಯ ಕಾ ಲಸಮುದ್ರದ ರಭಸದಂತೆಯೂ ಪಿನಾಕಿಯ ಡಮರುಗದ್ಧನಿಯಂತೆಯೂ ಕರ್ಣಕ ಠೋರವಾಗಿ ಮೊರೆಯುತ್ತಿರುವ ಆತನ ಉಸಿರನ್ನು ಆಲಿಸಿ ಕಡೆಗೆ ಆಶ್ವಾಸಮಾ ರುತಕ್ಕೆ ಸಿಕ್ಕಿಕೊಂಡು ಉಸಿರನ್ನು ಎಳೆದಾಗ ಮೂಗಿನೊಳನೆ ಹೋಗುತ್ತ ಬಿಟ್ಟಾಗ ಹೊರಗೆ ಬರುತ್ತ ಕೆಲವುಹೊತ್ತು ಉಸಿರನ್ನು ಬಿಡದಿರಲು ಹೊರಗೆ ಬರುವು ದಕ್ಕೆ ಸಾಧ್ಯವಿಲ್ಲದೆ ಆಂಜನೇಯನು ದಿಗಿಲುಬಿದ್ದು ಕಡೆಗೆ ಅವನ ಮೂಗಿನ ರಂಧ್ರ ದಲ್ಲಿ ಗಿರಿಯಂತೆ ಬೆಳೆದು ಉಸಿರನ್ನು ತಡೆದು ನಿಲ್ಲಿಸಲು ಆಗ ರಕ್ಕಸನಿಗೆ ಉಬ್ಬಸವಾ ದುದರಿಂದ ಬರಸಿಡಿಲು ಸಿಡಿದಂತೆ ಹೆದ್ದನಿಯಿ೦ದ ಸೀತನು. ಕೂಡಲೇ ಆಂಜನೇಯನು ಉಲ್ಕಾಪಾತದಂತೆ ಸಿಡಿದು ಎದುರಿಗಿದ್ದ ವಜಸ್ತಂಭಕ್ಕೆ ಬಡಿದುದರಿಂದ ಬಹುಯಾತನೆ ಯನ್ನನುಭವಿಸಿ ಕೋಪಗೊಂಡು ಹಲ್ಲು ಕಡಿಯುತ್ತ ಇವನನ್ನು ಕೊಲ್ಲಬೇಕೆಂದು ನಿಶ್ಚಯಿಸಿ ಅಲ್ಲಿ ಇಟ್ಟಿದ್ದ ಶೂಲಾಯುಧವನ್ನು ತೆಗೆದುಕೊಂಡು ಕುಂಭಕರ್ಣನ ಎದೆ ಯನ್ನು ತಿವಿಯಲು ಅದರಿಂದ ಅವನಿಗೆ ಒಂದು ನೊಣ ಕಡಿದಷ್ಟಾದರೂ ನೋವಾಗ ಲಿಲ್ಲ. ಆ ಮೇಲೆ ಆಂಜನೇಯನು ನಿದ್ರಿಸುವವರನ್ನು ಕೊಲ್ಲುವದು ಶೂರರಿಗೆ ವಿಹಿತ ವಲ್ಲ ವೆಂದು ತನ್ನೊಳಗೆ ಯೋಚಿಸಿ ತಿಳಿದು ಕೊಂಡು ಮುಂದೆ ಹೋಗಿ ಅವನ ಮನೆಯ ಲೈಲಾ ಹುಡಿಕಿ ಸೀತೆಯನ್ನು ಕಾಣದೆ ಅಲ್ಲಿಂದ ಹೊರಟು ಗರುಡಧ್ವಜದಿಂದಲೂ ರತ್ನ ಖಚಿತವಾದ ವಿಮಾನಗಳಿಂದಲೂ ಪಜೆ ಯ ಕಲಶಗಳಿಂದಲೂ ಪ್ರಕಾಶಿಸುತ್ತಿರುವ ವಿಭೀಷಣನ ಮನೆಯನ್ನು ಹೊಕ್ಕು ಸೂಕ್ಷ್ಮರೂಪವನ್ನು ಧರಿಸಿ ಹುಡುಕುತ್ತಿರಲಾಗಿ ಎಲೈ ವಾನರಾಧೀಶ್ವರನೇ ! ಸೀತೆಯನ್ನು ಹುಡುಕುವ ಸ್ಥಳವು ಇದಲ್ಲವೆಂದು ಅಶರೀರ ವಾಣಿಯುಂಟಾಗಲಿ ಆಂಜನೇಯನು ಆ ಧ್ವನಿಯನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ನವರತ್ನಗಳಿಂದ ಕೆತ್ತಲ್ಪಟ್ಟಿರುವ ಕೋಟೆಗಳ ಸಾಲುಗಳಿಂದಲೂ ಕನಕನಿ ರ್ಮಿತವಾದ ಕೊತ್ತಲುಗಳಿಂದಲೂ `ಸುವರ್ಣಕಲಶಗಳಿಂದಲೂ ಬಾಲಾರ್ಕಕೋಟಿ ತೇಜೋವಿರಾಜಮಾನಗಳಾದ ದ್ವಾರಬಂಧಗಳಿಂದಲೂ ರಂಜಿಸುತ್ತಿರುವ ರಾಕ್ಷಸರಾಜ ನಾದ ರಾವಣನ ಅರಮನೆಯನ್ನು ಹೊಕ್ಕು ಸ್ವರ್ಗದ ಅರಮನೆಯನ್ನು ತಿರಸ್ಕರಿಸು ತಿರುವ ಆತನ ಸಭಾಸ್ಥಾನಕ್ಕೆ ಬಂದನು. ಆ ಸಭಾಮಂದಿರವು ಸುವರ್ಣದಿಂದ ನಿರ್ಮಿಸಲ್ಪಟ್ಟು ನವರತ್ನಗಳ ತೋರಣಗ ಳಿಂದಲೂ ಮೇಲುಕಟ್ಟು ಗಳಿಂದಲೂ ಶೋಭಿಸುತ್ತಿದ್ದಿತು. ಒಂದು ಕಡೆಯಲ್ಲಿ ಭೇರೀ