ಪುಟ:ಕಥಾಸಂಗ್ರಹ ಸಂಪುಟ ೨.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 87 ಅಥವಾ ಇಂದ್ರಾದಿದೇವತೆಗಳನ್ನು ಹಿಂಗಟು ಕಟಿ ಕೆನ್ನೆಗೆ ಹೊಡೆದು ಕೇಳಿದರೆ ಅವರಾದರೂ ತೋರಿಸುವರು. ಕಡೆಗೆ ಯಾರೂ ತೋರಿಸದೆ ಹೋದಪಕ್ಷದಲ್ಲಿ ಈ ಲಂಕಾದುರ್ಗವನ್ನೆ ನನ್ನ ಬಾಲದಿಂದ ಸುತ್ತಿ ಕಿತ್ತೆತ್ತಿ ಕೊಂಡು ಹೋಗಿ ರಾಮನ ಬಳಿ ಯಲ್ಲಿರಿಸಿಬಿಡುವೆನು. ಆ ಮೇಲೆ ಆತನೇ ಸೀತೆಯನ್ನು ಹುಡುಕಿಕೊಳ್ಳಲಿ ಎಂದು ಮನಸ್ಸಿನಲ್ಲಿ ನಿರ್ಧರಿಸಿ ಲ೦ಕಾಪಟ್ಟಣಸಮೇತವಾದ ತ್ರಿಕೂಟಾಚಲವನ್ನೇ ಕಿತ್ತು ಕೊಂಡು ಹೋಗುವುದಕ್ಕೆ ಉದ್ಯುಕ್ತನಾಗಲು ಆಗ ಅಶರೀರವಾಣಿಯು-ಎಲೈ ವಾನರ ಶ್ರೇಷ್ಠ ನೇ ! ನೀನು ಈ ಪರ್ವತವನ್ನು ಕೀಳಬೇಡ. ನಿನ್ನ ಮನೋರಥವು ಸಿದ್ದಿ ಯಾಗುವುದು ಎಂದು ನುಡಿಯಲು ಆಗ ಆಂಜನೇಯನು ಸಂತುಷ್ಟನಾಗಿ ಸುತ್ತಲೂ ನೋಡುತ್ತಿರುವಷ್ಟರಲ್ಲಿ ಸೀತೆಯನ್ನು ತೋರಿಸುವದಕ್ಕಾಗಿ ಬಂದನೋ ಎಂಬಂತೆ ಥಳಥಳಾಯಮಾನವಾಗಿ ಚಂದ್ರನು ಉದಯಿಸಲು ಆಮೇಲೆ ಮಾರುತಿಯು ಸುತ್ತಲೂ ದೃಷ್ಟಿಯಿಟ್ಟು ನೋಡಲು ಆಗ ಅಶೋಕವನವು ಪುಷ್ಟ ಫಲಭರಿತಗಳಾದ ವೃಕ್ಷಗಳಿಂದಲೂ ನಾನಾ ವಿಧ ಕುಸುಮರಂಜಿತವಾದ ಲತೆಗಳಿಂದಲೂ ಕಮಲ ಪುಂಜರಂಜಿತಗ ಳಾದ ಸರಸ್ಸುಗಳಿಂದಲೂ ಅತಿ ರಮ್ಯತೆಯನ್ನು ಹೊಂದಿ ಸ್ವರ್ಗಲೋಕದ ನಂದನವನದ ಸೊಬಗಿಗೆ ಇಮ್ಮಡಿಯಾಗಿ ಶೋಭಿಸುತ್ತಿದ್ದಿತು. ಅನಂತರದಲ್ಲಿ ಆಂಜನೇಯನು ಅತ್ಯಂತ ಸಂತೋಷವನ್ನು ಹೊಂದಿ ತಾನು ಕೂತಿದ್ದ ಸ್ಥಳದಿಂದ ಅಶೋಕವನಕ್ಕೆ ಹಾರಿ ಅದರ ಮಧ್ಯಪ್ರದೇಶದಲ್ಲಿ ಸುವರ್ಣದ ವೇದಿಕೆಗಳಿಂದ ಯುಕ್ತವಾಗಿ ಮೇರುಪೆ ರ್ವತದೋಪಾದಿಯಲ್ಲಿ ದಿವಾಕರಮಾರ್ಗವನ್ನು ಆಕ್ರಮಿಸಿಕೊಂಡು ವಿಸ್ತಾರವಾದ ಶಾಖೆಗಳಿಂದ ನಿಬಿಡಛಾಯೆಯುಳ್ಳುದಾಗಿ ಒಪ್ಪುತ್ತಿರುವ ಒಂದು ಶಿಂಶುಪವೃಕ್ಷವನ್ನು ಕಂಡು ಅಲ್ಲಿ ರಾಘವನ' ಪ್ರಿಯಪತ್ನಿ ಯಾದ ಸೀತಾದೇವಿಯು ರಾಮನನ್ನು ಚಿಂತಿಸುತ್ತ ರೋದಿಸುತ್ತಿರುವ ಧ್ವನಿಯನ್ನು ಕೇಳಿ ಇದೇನಿರಬಹುದೆಂದು ಬಂದು ಆ ವೃಕ್ಷದ ಕೊಂಬೆಯನ್ನೇರಿ ಕುಳಿತುಕೊಂಡು ನೋಡಲು ಅದರ ಬುಡದಲ್ಲಿ ಮಲಿನವಸ್ತ್ರವನ್ನು ಟ್ಟು ಉಪವಾಸದಿಂದ ಕೃಶಾಂಗಿಯಾಗಿ ಹುಲಿಗಳ ಮಧ್ಯದಲ್ಲಿ ಸಿಕ್ಕಿರುವ ಹರಿಣಿಯಂತೆಯ ಓದದಲ್ಲಿ ಬಿದ್ದಿರುವ ಗಜಪೋತದಂತೆಯ ರಾಕ್ಷಸಸ್ತ್ರೀಯರ ಸೆರೆಯಲ್ಲಿ ಸಿಕ್ಕಿ ಸುವ ರ್ಣದ ವೇದಿಕೆಯ ಮೇಲಿರುವ ಸೀತಾದೇವಿಯನ್ನು ಕಂಡು ಕಣ್ಣೀರನ್ನು ತುಂಬಿ ಒಂದು ಮಹೂರ್ತಮಾತ್ರ ಧ್ಯಾನಾಸಕ್ತನಾಗಿದ್ದು ಅನಂತರದಲ್ಲಿ ಸೀತೆಯನ್ನು ಕುರಿತು-ಎಲೆ ಜಾನಕಿಯೇ ! ಕೇಳು, ಶ್ರೀರಾಮನು ಪ್ರಸ್ತವಣಗಿರಿಗೆ ಬಂದು ಸುಗ್ರೀವನೊಡನೆ ನಿನ್ನ ಚಿಂತೆಯಿಂದಲೇ ಇದ್ದಾನೆ. ಆತನು ಇಲ್ಲಿಗೆ ಬೇಗ ಬಂದು ರಾವಣನನ್ನು ಸಂಹರಿಸಿ ನಿನ್ನನ್ನು ಕರೆದುಕೊಂಡು ಹೋಗುವನು. ಈಗ ಲಂಕಾಪಟ್ಟಣವನ್ನು ನೋಡಿಬರು ವಂತೆ ನನ್ನನ್ನು ಮಾತ್ರ ಕಳುಹಿಸಿದನು ಎಂದು ಹೇಳಲು ಸೀತೆಯು ಆ ಮಾತುಗಳನ್ನು ಕೇಳಿದರೂ ಭಯದಿಂದ ಮಾತಾಡದೆ ಸುಮ್ಮನೆ ಇರಲು ಆಗ ಆಂಜನೇಯನು ರಪ್ಪೆ ಯನ್ನು ಮುಚ್ಚದೆ ಸೀತಾದೇವಿಯನ್ನೇ ನೋಡುತ್ತಿದ್ದನು. ಅಷ್ಟರಲ್ಲಿ ಬೆಳಗಿನ ಜಾವವಾಗಲು ದಶಕಂಠನು ಎಚ್ಚೆತ್ತು ತನ್ನ ಸ್ತ್ರೀಯರ ನೈಲ್ಲಾ ಜತೆಯಲ್ಲಿ ಕರೆದುಕೊಂಡು ನಿಜಾಲಯದಿಂದ ಹೊರಡಲು ಕೂಡಲೆ ಅನೇಕ