ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


160 ಕಥಾಸಂಗ್ರಹ-೪ ನೆಯ ಭಾಗ ಆಗ ಅಮಿತವಿಕ್ರಮನಾದ ಲಕ್ಷ್ಮಣನು ಬೆಂಬಲವನ್ನು ಅಪೇಕ್ಷಿಸದೆ ಹೆದೆಯಲ್ಲಿ ಅಸಂ ಖ್ಯಾತಬಾಣಗಳನ್ನು ಸಂಧಾನಿಸುತ್ತ ಆಕರ್ಣಾ೦ತವಾಗಿ ಎಳೆದು ಪ್ರಯೋಗಿಸುತ್ತ ಅಪರಿಮಿತ ರಾಕ್ಷ ಸರ ತಲೆಗಳನ್ನು ನೆಲಕ್ಕುರುಳಿಸುತ್ತ ಒತ್ತಿ ಬಂದ ನಿಶಾಚರ ಪತಾ ಕಿನಿ ಯನ್ನು ಬರಿಗೆಯುತ್ತ ವಿಭೀಷಣನ ಹಿಂದೆಯೇ ನಡೆದನು. - ಆಗ ಲೋಕಾದ್ದುತ ಬಲಗರ್ವಿತನಾದ ಆಂಜನೇಯನು ಲಕ್ಷ್ಮಣನ ಹಿಂಗಡೆ ಯಲ್ಲಿ ಹೊರಟುಬರುತ್ತ "ಆತನ ಮೇಲೆ ಬೀಳುವುದಕ್ಕೆ ಬರುತ್ತಿರುವ ರಾಕ್ಷಸರನ್ನು ಬಡಿದೆಸೆಯುತ್ತ ಬಂದನು. ಆಂಜನೇಯನು ಒಂದುಸಾರಿ ಅನೇಕ ರಾಕ್ಷಸರ ಗುಂಪನ್ನು ತನ್ನ ನಿಡುದೋಳುಗಳಿಂದ ಬಾಚಿ ತಬ್ಬಿ ಬಿಸುಡಲು ; ಅವರೆಲ್ಲರೂ ಪುಣ್ಯಕ್ಷಯವಾಗಿ ಸ್ವರ್ಗದಿಂದ ಬೀಳುತ್ತಿರುವ ಮೃತದೇಹಗಳೋ ಎಂಬಂತೆ ಆಕಾಶದಿಂದ ಸರ್ವದಿಕ್ಕು ಗಳಲ್ಲೂ ಬಿದ್ದು ಸಾಯುತ್ತಿದ್ದರು. ಈ ರೀತಿಯಾಗಿ ಮೂವರೂ ಕ್ಷಣಕಾಲದಲ್ಲಿ ಇಂದ್ರಜಿತ್ತಿನ ಬಳಿಗೆ ಬಂದು ನಿಂತರು. ಆಗ ವಿಭೀಷಣನು ಲಕ್ಷ್ಮಣನನ್ನು ಕುರಿತು ಇದೋ, ಇವನೇ ಮಾಯೂಸೀತೆಯನ್ನು ನಿರ್ಮಿಸಿ ಕಡಿದುರುಳಿಸಿ ನಮ್ಮೆಲ್ಲರನ್ನೂ ಅಂಜಿಸಿದ ಮಹಾಪಾಪಿಯು, ಇತ್ತ ನೋಡು ! ಆಕಾಶಮಾರ್ಗದಿಂದ ಅಕ್ಷಯವಾದ ಬತ್ತಳಿಕೆಯ ಅಮೋಘವಾದ ಧನು ಅತಿ ವೇಗಶಾಲಿಗಳಾದ ಅಶ್ವಗಳೂ ಅಭೇದ್ಯ ವಾದ ಮಹಾರಥವೂ ಇಳಿದುಬರುತ್ತಿವೆ. ಇವು ಇವನ ಕೈಸೇರಿದ ಕ್ಷಣದಲ್ಲೇ ನಮ್ಮೆ ಲ್ಲರಿಗೂ ಅಂತ್ಯ ಕಾಲವು ಸಂಭವಿಸಿತೆಂದು ತಿಳಿದುಕೋ ! ಅದು ಕಾರಣ ಅತಿ ಶೀಘ್ರ ವಾಗಿ ಸಾಹಸವನ್ನು ಮಾಡು ಎನ್ನ ಲು ; ಆಗ ಅಪಾರಶಕ್ತಿ ಸಂಪನ್ನನೂ ವೈರಿಗಳ ಗರ್ವವೆಂಬ ಗಿರಿಗೆ ಕುಲಿಶಸಮಾನನೂ ಆದ ಮಾರುತಿಯು ನೆಗೆದುಹೋಗಿ ಯಾಗ ದೀಕ್ಷಿತನಾಗಿದ್ದ ಇ೦ದ್ರಜಿತ್ತನ್ನು ಕಾಲಿಂದ ಒದೆದುರುಳಿಸಿ ಅವನ ಯಜ್ಞದ ಸಮಸ್ಯ ಸಾಮಗ್ರಿಗಳನ್ನೂ ತುಳಿದು ದಿಕ್ಕು ದಿಕ್ಕುಗಳಿಗೆಸೆದು ಯಾಗಾಗ್ಲಿಗೆ ನೀರುಗಳನ್ನು ಸುರಿದು ಆಸಿ ಹಾಳುಮಾಡಿದನು. - ಆ ಕ್ಷಣದಲ್ಲಿಯೇ ಸರೋಜಸಂಭವನಿಂದ ಕಳುಹಿಸಲ್ಪಟ್ಟು ಬರುತ್ತಿದ್ದ ಮಹಾ ರಥವು ಅಶ್ಯಾದಿಗಳೊಡನೆ ಮಧ್ಯಮಾರ್ಗದಿಂದ ಹಿಂದಿರುಗಿ ಹೋಯಿತು, ಆಗ ಇ೦ದ್ರ ಬೆತ್ತು ಕರೆದು ಮಹಾ ರೋಷದಿಂದ ನೋಡಲು ; ಆಗ ಧೀರನಾದ ಮಾರುತಿಯುಎಲಾ ದೇವದ್ರೋಹಿಯೇ, ನೀಚನೇ, ಸುಜನನಿಂದಕನೇ, ಸನ್ಮಾರ್ಗ ವಿರೋಧಿಯೇ, ತ್ವರಿತದಿಂದ ಯುದ್ಧ ಕೈ ಬಾರೆಲಾ ! ನಿನಗೆ ಅಂತ್ಯ ಕಾಲವು ಸವಿಾಪಿಸಿದೆ, ನಿಷ್ಪಲವಾದ ಈ ಕಾರ್ಯಕಲಾಪದಿಂದ ನಿನಗೇನಾಗುವುದು ? ವಿಸದ್ಧ ತನಾದ ನಿನಗೆ ಸತ್ಕರ್ಮವೂ ಕೂಡ ವಿಪರೀತ ಫಲವನ್ನು ಕೊಡದಿರುವುದೇ ? ವೃಥಾ ಸಾವಕಾಶವೇಕೆ ? ಕಾಳೆಗವನ್ನು ಕೊಡು ! ಎದುರಿಗೆ ನಿಲ್ಲು ಬಾ ! ನಿಜಾಯುಧವನ್ನು ಹಿಡಿ ! ನಿನ್ನ ಕಾಪಟ್ಯವನ್ನು ಗಂಟು ಕಟ್ಟಿ ಮೂಲೆಗೆ ಬಿಸುಡು ! ಇನ್ನೇಳು ! ಎನ್ನುತ್ತ ಮತ್ತೆ ಹತ್ತಿರಕ್ಕೆ ಬಂದು ಹಲ್ಲುದುರುವಂತೆ ಅವನ ಕಟವಾಯಿನ ಮೇಲೆ ಫರೀರೆಂದು ಬಡಿದನು. ಆಗ ರಾವಣಿ ಯು ನೆಲ್ಲು ಹುಲ್ಲಿನ ಬಣಬೆಗೆ ಕಾಡ್ಡಿಚ್ಚು ಹತ್ತಿದ ಹಾಗಾಗಿ ಬಾಯಣಗುಗಳಲ್ಲಿ ಕೋಪಾಗ್ನಿ ಜ್ವಾಲೆಯು ಹೊರಡುತ್ತಿರಲು ; ಕ್ಷಣಮಾತ್ರದಲ್ಲಿ ಧನುರ್ಬಾಣಗಳನ್ನು