164 ಕಥಾಸಂಗ್ರಹ-೪ ನೆಯ ಭಾಗ ಅಷ್ಟರಲ್ಲಿಯೇ ಧೀರನಾದ ಸುಮಿತ್ರಾತನಯನು ಜಾಗರತೆಯನ್ನು ಹೊಂದಿದವ ನಾಗಿ ಬ್ರಹ್ಮಾಂಡ ಮಂಡಲವು ಜಡೀಭಾವವನ್ನು ಹೊಂದುವ ಹಾಗೆ ತನ್ನ ಬಿಲ್ಲೆಬ್ಬಿನ ಬಲ್ಲ ನಿಯನ್ನು ಮಾಡಿದನು. ಆಗ ಅಂಜನೆಯ ಮಗನು ಬೊಬ್ಬಿರಿದನು, ನೀಲಾಂಗ ದಾದಿ ಕಪಿ ಸೇನಾನಾಯಕರು ಮಹಾ ಗಿರಿತರುಗಳನ್ನು ತೆಗೆದು ಕೊಂಡು ಬಂದು ಇಂದ್ರವಿರೋಧಿಯನ್ನು ಸಂಹರಿಸುವುದಕ್ಕೆ ನಾನು ಮುಂದು ತಾನು ಮುಂದೆಂದು ಮೊನೆಗಾರಿಕೆಯಿಂದ ನಿಂತರು, ತಿರಿಗಿ ಇಂದ್ರಜಿತ್ತೂ ಲಕ್ಷ್ಮಣನೂ ಮಹಾರಣ್ಯ ಮಧ್ಯದಲ್ಲಿ ಮುನಿದು ಮಲತು ನಿಲ್ಲುವ ಮದಗಜಗಳಂತೆ ನಿಂತು ಸುರರು ಹೊಗಳುವ ಹಾಗೆ ವಿವಿಧಾಸ್ತ್ರಗಳಿಂದೆಚ್ಚಾಡುತ್ತಿದ್ದರು. ಆಗ ಇಂದ್ರಜಿತ್ತಿನ ಧನುರ್ವಿದ್ಯಾ ಪಾಂಡಿ ತ್ಯವನ್ನು ರಾಕ್ಷಸ ಕಟಕವೂ ಸುಮಿತ್ರಾಪುತ್ರನ ಕೋದಂಡಾಗನ ಪಾರಗತೆಯನ್ನು ಕಪಿಕಟಕವೂ ಹೊಗಳುತ್ತಿದ್ದಿತು. ಸುರಪಥದಲ್ಲಿ ಶುಕ್ರಾಚಾರ್ಯನೊ೦ದುಸಾರಿಭಲರೇ ! ರಾಕ್ಷಸ ರಾಜಕುಮಾರಾ ! ಎನ್ನುತ್ತಿದ್ದನು, ಬೃಹಸ್ಪತಾಚಾರ್ಯನೊಂದು ಸಾರಿ-ಮಜಭಾಪು ! ದಶರಥನಂದನಾ ! ಜಾಗು ! ಜಾಗು ! ಎನ್ನುತ್ತಿದ್ದನು. ಆ ಕದನದ ಭಯಾದ್ಭುತಸ್ಥಿತಿಯನ್ನು ಬಣ್ಣಿಸುವವರಾರು ? ಸೋರಿ ನಿಂತಿರುವ ನೆತ್ತರಿ ನಲ್ಲಿ ಜೋಡುಗಳು ಮುಣುಗಿದುವು. ಇಬ್ಬರ ಮೈಗಳಲ್ಲೂ ಸರಳುಗಳು ನೆಟ್ಟುವು. ಒಬ್ಬರನ್ನೊಬ್ಬರು ತಿರಸ್ಕರಿಸಿ ನುಡಿಯುತ್ತಿದ್ದ ಪಂಥದ ಮೋಡಿಯು ಮುರಿದಿತು. ಭುವನದಲ್ಲಿ ರಾಕ್ಷಸರು ನಿಜವಾಗಿಯೂ ತಾಮಸರು, ಕ್ಷಾತ್ರ ತಾಮಸವು ಸಮರ ಕಾಲದಲ್ಲಲ್ಲದೆ ಇತರ ಕಾಲಗಳಲ್ಲಿ ವಿವೇಕಕ್ಕೆ ಸ್ಥಳವನ್ನು ಕೊಡತಕ್ಕುದು. ಆದುದ ರಿಂದ ಅದರ ಬಲವೇ ಹೆಚ್ಚು ಎಂದು ಹಿರಿಯರಾಡುವ ನುಡಿಯ ನಿಜಾಂಶವು ಸ್ಥಿರಪ ಡುವುದಕ್ಕೆ ಈ ಮಹಾ ವೀರರ ಯುದ್ಧಾ೦ತ್ಯ ಫಲವೇ ತ್ರಿಲೋಕಗಳಿಗೂ ಆಧಾರ ಭೂತವಾಗಿರುವುದು ಎಂದು ಕೊಳ್ಳುತ್ತ ಸುರರು ಓರೆಯಾಗದೆ ಈಕ್ಷಿಸುತ್ತಿದ್ದರು. ಅನಂತರದಲ್ಲಿ ಉಭಯವೀರರೂ ಮರವೆಯಿಂದ ಭೂಮಿಯಲ್ಲಿ ಮಲಗಿದರು. ಆಗ ಅವರಿಬ್ಬರ ಪಕ್ಕದ ಆಪ್ತರು ಸವಿಾಪಕ್ಕೆ ಬಂದು ಮೈ ಮರೆಯುವಿಕೆಯನ್ನು ಶೈತ್ಯ ಪಚಾರಗಳಿಂದ ತಪ್ಪಿಸಿ ರಕ್ತಗಳನ್ನು ತೊಳೆದು ಗಾಯಗಳಲ್ಲಿ ಮದ್ದುಗಳನ್ನು ಮೆತ್ತಿ ದಿವ್ಯವಸ್ಯಗಳನ್ನು ಡಿಸಿ ಕಸ್ತೂರಿ, ಕರ್ಪೂರ ಕೇಸರಿಗಳಿಂದ ಮಿಶ್ರವಾದ ಸುಗಂಧಗಳನ್ನು ಮೈಗೆ ಲೇಪಿಸಿ ಕಬಳಗಳನ್ನು ತಿನ್ನಿಸಿ ಕರ್ಪೂರ ತಾಂಬೂಲವನ್ನು ಕೊಟ್ಟು ಮತ್ತೆ ಹುರಿಗೊಳಿಸಿ ಕಲಿಮಾಡಿದರು. ಅನಂತರದಲ್ಲಿ ಅವರೀರ್ವರೂ ಬೊಬ್ಬಿರಿದೆದ್ದು ವೀರಪಳಿ ಗಳನ್ನು ಬಿಗಿದುಟ್ಟು ಬಿಲ್ಲುಗಳ ಕೊಪ್ಪುಗಳನ್ನಾ ರೈಯು ತೆಬ್ಬುಗಳನ್ನು ಕಟ್ಟಿ ಕೂರ ವಿಷಮಬಾಣಗಳನ್ನು ಸಂಧಾನಿಸಿ ಒಬ್ಬನನ್ನೊಬ್ಬನು ಹೊಡೆದನು. ಆಗ ಅವರೆಸದ ಬಾಣಗಳು ಅಂಬರತಲದಲ್ಲೆಲ್ಲಾ ತುಂಬಿಕೊಂಡು ವು. ಆಗ ಕೆಮ್ಮುಗಿಲ ತಿಂತಿಣಿಗೆ ಉಬ್ಬುವ ಮಹಾಂಬುಧಿಯಂತೆ ಕದನದ ಕೊಬ್ಬಿನಿಂದ ಕಲಿಯೇರಿದ ಇಂದ್ರಾರಿಯು ರಾಮಾನುಜನನ್ನು ಕುರಿತು-ಎಲೈ ಮಢನಾದ ಲಕ್ಷ್ಮಣನೇ, ಶೀಘ್ರವಾಗಿ ನಿಮ್ಮಣ್ಣನನ್ನು ಕರಿಸಿಕೋ, ಅವನು ಈ ಸಮಯದಲ್ಲಿ ನಿನ್ನ ಹತ್ತಿರದ ಲ್ಲಿಯೇ ಇರಲಿ, ನೀನು ಬದುಕಿರುವಾಗಲೇ ಭರತಶತ್ರುಘ್ನರಿಗೆ ಓಲೆಯನ್ನು ಬರೆಯು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೪
ಗೋಚರ