ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 171 , ಗಣಿಸದೆ ರಾವಣನನ್ನು ನೋಡಿ ಹಲ್ಲಿ ರಿದು ಬೋ ಎಂದು ಕೂಗಿ ಬಾಲಗಳನ್ನು ಮುದುರಿಕೊಂಡು ತೋರಿದ ಕಡೆಗೆ ಓಡಿಹೋದುವು. ಕಾಡ್ಡಿಚ್ಚು ಹೊತ್ತಿ ವ್ಯಾಪಿಸಿ ಕೊಂಡು ಉರಿಯುತ್ತಿರುವಲ್ಲಿ ಒಣಗಿದ ತೃಣಜಾಲವು ಅದನ್ನು ಅಡ್ಡಗಿಸಿ ಬಿಡಬಲ್ಲುದೇ ? ಆಗ ಕಪಿಸಮಾಜನಾದ ಸುಗ್ರೀವನು ತನ್ನ ಸಮಿಾಪದಲ್ಲಿ ರಕ್ಕಸನ ವಿಚಿತ್ರ ಯುದ್ಧವನ್ನು ನೋಡಿ ಕೋಪಾಟೋಪದ ಉಬ್ಬಿನಿಂದ ಕೂಡಿ ಅವನೆದುರಿಗೆ ಬಂದು ನಿಂತು-ಇದೇನೈ, ರಾಕ್ಷಸರಾಜೇಂದ್ರನೇ, ನೀನೇ ದಯಮಾಡಿಸೋಣವಾ ಯಿತು, ನಿನ್ನ ಪರಿವಾರದಲ್ಲಿ ಇತರ ಶೂರಗಾರೂ ಇಲ್ಲ ವೇ ? ನಿನ್ನ ಬರುವಿಕೆಯು ಧೈರ್ಯದಿಂದ ಕಾದುವದಕ್ಕೋ ? ಅಥವಾ ಭಯದಿಂದ ಮರೆಹೊಗುವುದಕ್ಕೋ ? ಈ ಸಂಗತಿಯನ್ನು ಸ್ವಲ್ಪವಾಗಿ ತಿಳಿಸು, ಚೆನ್ನಾಗಿ ತಿಳಿದು ಕೊಳ್ಳಬೇಕಾಗಿದೆ. ಏಕೆಂ ದರೆ ನೀನು ನಮ್ಮಣ್ಣನಾದ ನಾಲಿಗೆ ಪರಮಮಿತ್ರನು ಎಂದು ಹೇಳಲು ; ಆಗ ರಾವಣನು-ಎಲಾ ಮೂಢಕಪಿಯೇ, ಹೊಯ್ಲಿ ಗಲ್ಲದೆ ಮರೆಹೊಗು ವಿಕೆಯೆಂಬ ಭ್ರಮೆಯೇಕೆ ? ನಿಜಭುಜಬಲಾರ್ಜಿತವಾದ ತ್ರಿಲೋಕಾಧಿಪತ್ಯವುಳ್ಳ ನಮ್ಮೊಡನೆ ವ್ಯರ್ಥವಾದ ಕುಚೇಷ್ಟೆ ಯ ಹರಟೆಯು ಕಪಿಯಾದುದರಿಂದ ನಿನಗೆ ಸ್ವಭಾ ವವೇ, ಕೊಳುಗುಳದಲ್ಲಿ ಬ್ರಹ್ಮರುದ್ರೇ೦ದ್ರಾದಿಗಳನ್ನು ಬಡಿದಳಲಿಸಿದ ಈ ನಮ್ಮ ಭುಜವಿಕ್ರಮದೊಡನೆ ಅಲ್ಪರಾದ ನರಾಧಮರ ಬಲವು ಪಾಸಟಿಯೇ ? ನೀನು ನಮ್ಮ ಮಿತ್ರನ ತಮ್ಮ ನಾದುದರಿಂದ ದಾರಿಯನ್ನು ಬಿಟ್ಟು ಕೆಲಸಾರಿ ಬದುಕಿಕೋ ? ಹೋಗು ಎನ್ನು ತ್ತ ಸುಗ್ರೀವನನ್ನು ಬಾಣದಿಂದೆಚ್ಚನು. ಆಗ ಅರಿವೀರಭೀಕರ ಪರಾಕ್ರಮಯು ಕನಾದ ಸುಗ್ರೀವನು ಅವನೆಸೆದ ಬಾಣಗಳಿಗೆದುರಾಗಿ ತನ್ನ ಬಾಹುದಂಡವನ್ನೊಡ್ಡಿ ತಡೆದು ಕೆಡಹಿ ಬಿಡುಗಣ್ಣರು ಬೆಚ್ಚುವಂತೆ ಬೊಬ್ಬರಿದು ಒಂದು ಮಹಾ ಭೂಧರದ ಶಿಖರವನ್ನೆತ್ತಿ ರಾವಣನ ಮೇಲೆ ಹಾಕಲು ; ಅವನ ತೇರಿನಚ್ಚು ಮುರಿದು ಹೋಯಿತು. ಕೂಡಲೆ ರಾವಣನು ಮತ್ತೊಂದು ರಥಕ್ಕೆ ಹಾರಿ ಕೋಪದಿಂದ ಬೊಬ್ಬಿರಿದು ಸುಗ್ರೀ ವನ ಮೇಲೆ ವಿಷಮಬಾಣವೃಷ್ಟಿಯನ್ನು ಕರೆಯಲು, ಆಗ ಧೀರೋತ್ತಮನಾದ ಸುಗ್ರೀ ವನು ತನ್ನ ತೋಳಿನ ಬಲ್ಲಾಳಿಯಿಂದ ಆ ಬಾಣಸಮೂಹವನ್ನೆಲ್ಲಾ ಹಾರಿಸಿ ಕಡುಹಿ ನಿಂದ ಮುಂದೆ ನುಗ್ಗಿ ಬಂದು ಮೊರೆದು ಮೇಲೆ ಬಿದ್ದು ರಾವಣನ ಕಿರೀಟಗಳಿಗೆರಗಲು ಆ ಕಿರೀಟಖಚಿತದಿವ್ಯ ರತ್ನಗಳು ದೆಸೆದೆಸೆಗಳಲ್ಲಿಟ್ಟಾಡಿದುವು. ತಿರಿಗಿ ಸುಗ್ರೀವನುಎಲಾ ಖಳನೇ, ಮೊದಲು ನಾನು ನಿನಗೆ ಮಾಡಿದ ಕಿರೀಟಭಂಗವನ್ನು ಮರೆತು ಹೋದಿಯಾ ? ನೀನು ನಿರ್ಲಜ್ಞನಾದ ಮೈ ಹರುಕನು, ನಾವು ಕಾಡಿನ ಕಪಿಗಳಂತೆ ಸಾಧಾರಣ ಕಪಿಗಳೆಂದು ಬಗೆದಿಯ ? ದೈವ ಬಲಹೀನನಾದ ನಿನ್ನ ಮಢತ್ವವು ಬಲಿತು ಹೋಗಿರುವುದು, ಅವಿಚಾರದಿಂದ ಹುಚ್ಚನಂತೆ ಗಳಹುತ್ತಿರುವಿಯಲ್ಲಾ ? ಎಂದು ಮಹಾ ಕೋಪದಿಂದ ಮೈಯುಬ್ಬಿ ನೆಗೆದು ಹಲ್ಲುಗಳು ಕಳಚಿ ಬೀಳುವಂತೆ ರಾವಣನ ಕಪೋಲಗಳನ್ನು ಹೊಯ್ದ ಬ್ಬರಿಸಿದನು. ರಾವಣನು ವಜಹತಿಗೆ ಸಮಾನವಾದ ಸುಗ್ರೀವನ ಮಹಾ ಮುಷ್ಟಿಘಾತ ವನ್ನು ತಡೆಯಲಾರದೆ ಬಲಹೀನನಾಗಿ ಕಿವಿ ಮಗು ಬಾಯಿಗಳಲ್ಲಿ ಸುರಿಯುತ್ತಿರುವ