ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


202 ಕಥಾಸಂಗ್ರಹ-೪ ನೆಯ ಭಾಗ ಸಂಧ್ಯಾವಂದನ ಭಗವತ್ತೂಜಾತನ್ನಾ ಮಸಂಕೀರ್ತನಾದಿ ನಿತ್ಯ ಕರ್ಮಗಳನ್ನು ನೆರವೇ ರಿಸಿ ದುರ್ಗತರಿಗೆ ಇಷ್ಟಾರ್ಥಗಳನ್ನು ಕೊಟ್ಟು ತೃಪ್ತಿ ಪಡಿಸಿ ತಮ್ಮಂದಿರೊಡನೆ ಕೂಡಿ ಸಮಸ್ತ ಪರಿವಾರಯುಕ್ತನಾಗಿ ಅಲ್ಲಿಂದ ಹೊರಟು ಭರತನ ಓಲಗದ' ಚಾವಡಿಗೆ ಬಂದು ದಿವ್ಯಾಸನದ ಮೇಲೆ ಕುಳಿತು ಕೊಳ್ಳಲು ; ಆಗ ಸಮಸ್ತರೂ ತಮ್ಮ ತಮ್ಮ ಸ್ಥಾನಗಳಲ್ಲಿ ನಿಶ್ಯಬ್ದತೆಯಿಂದ ಕೂತುಕೊಂಡರು. ಆಗ ಅತಿ ಸಂತುಷ್ಟನಾದ ಭರತನು ಎದ್ದು ಬಂದು ಸಾಷ್ಟಾಂಗವಾಗಿ ನಮಸ್ಕರಿಸಿ ಕೈಮುಗಿದು ನಿಂತುಕೊಂಡು--ಎಲೈ ಸರ್ವಜ್ಞ ಶಿಖಾಮಣಿಯಾದ ಶ್ರೀರಾಮಚಂದ್ರನೇ, ಮೊದಲು ನೀನು ಈ ಆಯೋಧ್ಯಾ ಸಾಮ್ರಾಜ್ಯವನ್ನು ಕೃಪೆಯಿಂದ ನನಗೊಪ್ಪಿಸಿಕೊಟ್ಟು ಧರ್ಮಸಂಸ್ಥಾಪನಾರ್ಥವಾಗಿ ಅರಣ್ಯಕ್ಕೆ ತೆರಳಿದಾಗ ಇದ್ದ ಆದಾಯಕ್ಕಿಂತ ಈಗಿರುವ ಆದಾಯವು ಹತ್ತು ಮಡಿ ಹೆಚ್ಚಾಗಿದೆ ಇದೋ, ಬೊಕ್ಕಸ ಉಗ್ರಾಣ ಚತುರಂಗಬಲ ರಾಜ್ಯ ಈ ಮೊದಲಾದ ಸರ್ವಶಾಖೆಗಳ ಕರಣಿಕರುಗಳೆಲ್ಲಾ ಆದಾಯಗಳಲ್ಲಿ ವ್ಯಯಗಳನ್ನು ಕಳೆದು ನಿಲುವುಗ ಳನ್ನು ತೋರಿಸುತ್ತಿರುವ ಲೆಕ್ಕಗಳನ್ನು ತೆಗೆದು ಕೊಂಡು ಬಂದು ಅರಿಕೆ ಮಾಡಿಕೊಳ್ಳು ವುದಕ್ಕೆ ಸಿದ್ಧರಾಗಿ ಸಮಯವನ್ನು ನೋಡುತ್ತ ಕಾದಿದ್ದಾರೆ. ಪರಿಶೀಲನೆ ಮಾಡಬ ಹುದು ಎಂದು ಬಿನ್ನವಿಸಲು ; ಆಗ ಶ್ರೀರಾಮನು ಅವರೆಲ್ಲರನ್ನೂ ಕ್ರಮವಾಗಿ ಕರಿಸಿ ವಿಚಾರಿಸುವುದಕ್ಕೆ ಆರಂಭಿಸಿ ತಾನು ಮೊದಲು ವನಕ್ಕೆ ಹೋಗುವಾಗ ಇದ್ದ ನಿಲುವು ಇಷ್ಟು, ಈಚೆಗೆ ಭರತನು ಮಾಡಿಸಿದ ಆದಾಯವಿಷ್ಟು ; ಅಂತು ಮೊತ್ತದಲ್ಲಿ ಆ ದಿನದ ವರೆಗೆ ಆದ ವ್ಯಯ ವನ್ನು ಕಳೆದು ಉಳಿವನ್ನು ಚೆನ್ನಾಗಿ ಪರೀಕ್ಷಿಸಿ ನೋಡಲಾಗಿ ಭರತನು ಹೇಳಿದಂತೆ ಸಕಲಭಾಗಗಳಲ್ಲಿಯ ದಶಭಾಗಾಧಿಕ್ಯವುಂಟಾಗಿರಲು; ಆಗ ಸಂತೋಷ ಸಮುದ್ರದಲ್ಲಿ ಮುಳುಗಿದವನಾದ ಶ್ರೀರಾಮಚಂದ್ರನು ತನ್ನ ಮುದ್ದು ತಮ್ಮನಾದ ಭರತನನ್ನು ಬಾಚಿ ತಬ್ಬಿ ಕೊಂಡು ಆತನ ಅನ್ಯಾದೃಶ ರಾಜ್ಯಭಾರ ನೈಪು ಣ್ಯಕ್ಕೆ ಮೆಚ್ಚಿ ತಲೆದೂಗಿ ಬಹಳವಾಗಿ ಕೊಂಡಾಡಿದನು. ಆಗ ಸಾರಥಿಶ್ರೇಷ್ಟ ನಾದ ಸುಮಂತ್ರನು ದಿವ್ಯಾ ಶ್ವನಿಬದ್ಧ ವಾಗಿ ಸರ್ವಾಲಂಕಾರ ವಿರಾಜಮಾನವಾದ ರಾಜರಥ ವನ್ನು ಶೀಘ್ರವಾಗಿ ತಂದು ನಿಲ್ಲಿಸಲು ; ಆ ಕೂಡಲೆ ಶ್ರೀರಾಮಚಂದ್ರನು ಕಪಿಕುಲೇ ಶ್ವರನಾದ ಸುಗ್ರೀವನನ್ನು ಮಹಾ ಗಜದ ಮೇಲಣ ಅಂಬಾರಿಯಲ್ಲಿ ಕುಳ್ಳಿರಿಸಿ ಆ ಮೇಲೆ ಕಪಿಸೇನೆಗಳು ಏರುವುದಕ್ಕಾಗಿ ಅಸಂಖ್ಯಾತಗಳಾದ ಗಜಸಮಹಗಳು ಬಂದು ನಿಲ್ಲಲು ; ಆಗ ಕಪಿವೀರರೆಲ್ಲಾ ಆ ಗಜಗಳ ಕುಂಭಸ್ಥಳಗಳಲ್ಲಿಯ ಕೊಂಬುಗಳ ಮೇಲೂ ಬೆನ್ನು ಗಳ ಮೇಲೂ ಸಂತೋಷದಿಂದ ಕುಳಿತು ಕೊಂಡು ಚಪ್ಪರಿಸುತ್ತ ಹೊರ ಟವು. ಆ ಕೂಡಲೆ ಲಂಕಾರಾಜನಾದ ವಿಭೀಷಣನೊಡನೆ ಬಂದಿದ್ದ ರಾಕ್ಷಸ ಸಮೂ ಹವು ಯಥೋಚಿತವಾಹನಾರೂಢವಾಗಿ ಹೊರಟಿತು. ಶ್ರೀರಾಮಚಂದ್ರನು ಅದನ್ನು ನೋಡಿ ಪರಮೋಲ್ಲಾಸದಿಂದ ತಾನು ಸೀತಾಸಮೇತನಾಗಿ ರಥಾರೂಢನಾಗಲು ; ಭರತನು ಕುದುರೆಗಳ ಕಡಿವಾಣಗಳನ್ನು ಹಿಡಿದುಕೊಂಡು ರಥವನ್ನು ನಡೆಸುತ್ತ ಸಾರಥಿಯ ಕೆಲಸವನ್ನು ಮಾಡುತ್ತ ನಡೆದನು. ಲಕ್ಷ್ಮಣ ಶತ್ರುಘ್ನರು ಧವಳ ಚಶಮ ರಗಳನ್ನು ಬೀಸುತ್ತ ಹೊರಟರು. ಶರಣಾಗತನಾದ ವಿಭೀಷಣನು ಬೆಳ್ಕೊಡೆಯನ್ನು