ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


260 ಕಥಾಸಂಗ್ರಹ-೫ ಸಯ ಭಾಗ ಅಲ್ಲಿರುವ ಆನೆ ಒಂಟೆ ಕುದುರೆ ಎತ್ತು, ದನ ಕರು ಮೊದಲಾದ ಸಮಸ್ತ ಪಶುಪ್ರಾಣಿಗ ಳಿಗೂ ವಿವಿಧ ಭೋಗ್ಯಪದಾರ್ಥಾಪೇಕ್ಷಿಗಳಾದ ರಾಜಸೇನಾಜನಗಳಿಗೂ ಅಗತ್ಯ ವಾದ ಪದಾರ್ಥಗಳನ್ನು ಯಥೇಚ್ಛವಾಗಿ ಒದಗಿಸಿಕೊಟ್ಟು ಅವರವರ ಇಷ್ಟ ದಂತೆ ಸೇವೆಮಾಡುವುದಕ್ಕೆ ಅಸಂಖ್ಯಾತ ದಾಸ ದಾಸೀಜನರನ್ನೂ ಉಂಟುಮಾಡಿ ಕಾರ್ತ ವೀರ್ಯಾರ್ಜುನನಿಗೂ ಆತನ ಸಂಗಡ ಬಂದಿದ್ದ ಸಾಮಂತರಾಜಮಂಡಿಗೂ ವಾಚಾ. ತೀತವಾದ ರಾಜೋಪಚಾರಗಳಿಂದ ತೃಪ್ತಿ ಪಡಿಸಿ ಸರ್ವರೂ ಸಂತೋಷಪಟ್ಟು ದನ್ನು ತಿಳಿದು ಅಲ್ಲಿಂದ ಮುನಿಯ ಬಳಿಗೆ ಬಂದು ತಾನು ನಡಿಸಿದ ವಿದ್ಯಮಾನವನ್ನೆಲ್ಲಾ ಯಥಾವತ್ತಾಗಿ ತಿಳಿಸಿ ಅವರ ಸನ್ನಿಧಿಯಲ್ಲಿ ಇರುತ್ತಿದ್ದಿತು. ತರುವಾಯ ಸರ್ವೋಪಚಾರಗಳಿಂದ ಸಂತೃಪ್ತನಾದ ಕಾರ್ತವೀರ್ಯಾರ್ಜು ನನು ಸಂತೋಷದಿಂದ ಕುಳಿತು ಕೊಂಡು ಅರಣ್ಯವಾಸಿಯಾದ ಒಬ್ಬ ಮುನಿಯು ನಮ. ಈ ಅಪಾರವಾದ ಸೇನೆಗೆಲ್ಲಾ ಸಂತೃಪ್ತಿ ಯುಂಟಾಗುವಂತೆ ವಿವಿಧವಾದ ರಾಜೋಪ ಚಾರಗಳನ್ನು ಮಾಡಿಸಿದನಲ್ಲಾ ! ಲೋಕದಲ್ಲಿ ಯಾವ ಸಾಮ್ರಾಜ್ಯಾಧಿಪತಿಯಾದರೂ ಮಾಡಿಸಬಲ್ಲನೇ ? ಎಂದಿಗೂ ಮಾಡಿಸಲಾರನು. ಇದೆಲ್ಲಾ ಆ ಧೇನುವಿನ ಸಾಮ ರ್ಥ್ಯವು, ನಾನು ಅದನ್ನು ತೆಗೆದು ಕೊಂಡು ಹೋದರೆ ನನ್ನ ಚಕ್ರವರ್ತಿತ್ವವು ಲೋಕ ದಲ್ಲಿ ಬಹಳ ಪ್ರಸಿದ್ಧವಾಗುವುದು ಎಂದೆಣಿಸಿ ಕೂಡಲೆ ಜಮದಗ್ನಿ ಯ ಬಳಿಗೆ ಬಂದು --ಎಲೈ ಮುನಿಯೇ, ಈಗ ನೀನು ಮಾಡಿಸಿದ ಸತ್ಕಾರದಿಂದ ನನ್ನ ಪರಿವಾರಗಳೊ ಡನೆ ನಾನೂ ಸಂತುಷ್ಟನಾದೆನು. ಇಂಥ ರಾಜೋಪಚಾರವು ನನ್ನ ಅರಮನೆಯಲ್ಲೂ ದುರ್ಲಭವೆಂದು ಯೋಚಿಸುತ್ತೇನೆ, ಮತ್ತು ಆಶ್ಚರ್ಯಪಡುತ್ತೇನೆ, ಆದರೆ ಈ ಭಾಗ ದಲ್ಲಿ ನನ್ನ ದೊಂದು ಮಾತಿರುವುದು, ಅದೇನೆಂದರೆ, ನಿರಂತರವಾಗಿ ನಿನ್ನ ಬಳಿಯಲ್ಲಿ ದ್ದು ಕೊಂಡು ನೀನು ಹೇಳಿದಂತೆ ಸಕಲಾಭೀಷ್ಟ ವಸ್ತುಗಳನ್ನೂ ಉಂಟುಮಾಡುತ್ತಿರುವ ಈ ಕಾಮಧೇನುವನ್ನು ನನಗೆ ಕೊಡಬೇಕು. ಇದಕ್ಕೆ ಬದಲಾಗಿ ನೀನು ಅಪೇಕ್ಷಿಸಿ ದಷ್ಟು ಧನಕನಕ ವಸ್ತ್ರಾಭರಣ ದೇಶಕೋಶಗಳನ್ನು ಕೊಡುವೆನು ಎನ್ನಲು ; ಆಗ ಜಮದಗ್ನಿ ಯು ಕಾರ್ತವೀರ್ಯಾರ್ಜುನನನ್ನು ಕುರಿತು-ಇದನ್ನು ಯಾರಿಗಾದರೂ ಕೊಡುವುದಕ್ಕೆ ನಾನು ಬಾಧ್ಯನಲ್ಲ. ಇದು ಮಹಾತಪಸ್ವಿಗಳಾದ ಮುನಿಗಳು ಮಾಡತಕ್ಕ ಯಣ್ಣೀಯವಾದ ಕರ್ಮಗಳಿಗೆ ಅಗತ್ಯವಾದ ಹಾಲು ಮೊಸರು ಬೆಣ್ಣೆ ತುಪ್ಪ ಮೊದಲಾದ ವಸ್ತುಗಳನ್ನು ಒದಗಿಸಿಕೊಡುವುದಕ್ಕಾಗಿ ದೇವೇಂದ್ರನ ಅಪ್ಪ ಣೆಯಿಂದ ಈ ರೀತಿಯಾಗಿದ್ದು ಕೊಂಡು ಮುನಿಜನಗಳ ಸೇವೆಯನ್ನು ಮಾಡುತ್ತಿರು ವುದು ಎನ್ನಲು ; ಆ ಮೇಲೆ ಕಾರ್ತವೀರ್ಯಾರ್ಜುನನು-ಆಗಲಿ, ಇದನ್ನು ಕೊಡುವು ದಕ್ಕೆ ನಿನಗೆ ಸಾಮರ್ಥ್ಯವಿಲ್ಲದಿದ್ದರೆ ನಾನೇ ಹಿಡಿದು ಕೊಂಡು ಹೋಗುವೆನು ಎಂದು ಹೇಳೆ ಬಲಾತ್ಕಾರದಿಂದ ಆ ಸುರಭಿಯನ್ನು ಹಿಡಿದು ಕೊಂಡು ತನ್ನ ಪಟ್ಟಣಕ್ಕೆ ತೆಗೆದು ಕೊಂಡು ಹೋದನು. ಇತ್ತ ಯಜ್ಞಕರ್ಮ ಸಾಧನವಾದ ಸಮಿದ್ದರ್ಭಗಳನ್ನು ತೆಗೆದು ಕೊಂಡು ಬರು ವುದಕ್ಕೋಸ್ಕರ ಅರಣ್ಯಕ್ಕೆ ಹೋಗಿದ್ದ ಪರಶುರಾಮನು ಸಮಿದ್ದರ್ಭಗಳನ್ನೂ ಗೋಗ್ರಾ