ಪುಟ:ಕಥಾ ಸಂಗ್ರಹ - ಭಾಗ ೨.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೀವಹಾರದ ಕಥ 69 ಎಲ್ಲೋ ಅಡಗಿಕೊಂಡಿರುವನಲ್ಲಾ ! ಒಳ್ಳೆಯದು ! ಇರಲಿ ! ಬೇಗ ನನ್ನ ಬಿಲ್ಬರಳ ಳನ್ನು ಕೊಡೆಂದು ತೆಗೆದು ಕೊಂಡು-ಈ ಕ್ಷಣದಲ್ಲಿ ಹದಿನಾಲ್ಕು ಲೋಕಗಳನ್ನೂ ಸುಟ್ಟು ಬೂದಿಮಾಡಿಬಿಡುವೆನು ಎಂದು ಸಿಂಹನಾದವನ್ನು ಮಾಡಿ ಪ್ರಳಯ ಕಾಲದ ರುದ್ರನ ಬೀಕರಾಕಾರವನ್ನು ಧರಿಸಿ ನಿಲ್ಲಲು ; ಆಗ ಲಕ್ಷ್ಮಣನು ನೋಡಿ ಕೈಮುಗಿದು ಕೊಂಡು-ಸ್ವಾಮಿ, ರಾಮಚಂದ್ರನೇ, ನೀನು ಈ ವರೆಗೂ ಸಕಲ ಪ್ರಾಣಿಗಳಿಗೂ ಹಿತನಾಗಿದ್ದು ಈಗ ಅಪರಾಧಿಯಾದ ಒಬ್ಬ ಹುಲುರಕ್ಕಸನಿಗಾಗಿ ಸಕಲ ಲೋಕಗ ಳನ್ನೂ ದಹಿಸುವುದು ಸರ್ವಜ್ಞನಾದ ನಿನಗೆ ವಿಹಿತವಲ್ಲ, ಅದು ಕಾರಣ ಸಮಾಧಾನ ಚಿತ್ತನಾಗಬೇಕು, ಅಪರಾಧಿಯಾದ ರಾವಣನು ಅವನ ತಾಯ್ಯ ಸುರಿನಲ್ಲಡಗಿಕೊಂ ಡಿದ್ದಾಗ ಅವನನ್ನು ಬಿಡದೆ ಹಿಡಿದು ಕೊಂದುಹಾಕೋಣ ಎಂದು ಬಹುತರವಾಗಿ ಹೇಳಿ ಸಮಾಧಾನಪಡಿಸಲು ; ಆಗ ರಾಮನು ತಾಳ್ಮೆಯನ್ನು ಹೊಂದಿ ಆ ಜಟಾಯು ಪಕ್ಷಿಯ ದೇಹಕ್ಕೆ ದಹನಾದಿಕೃತ್ಯಗಳನ್ನು ಮಾಡಿ ಆ ಪಕ್ಷಿಗೆ ಬ್ರಹ್ಮಲೋಕದಲ್ಲಿರು ವಂತೆ ವರವನ್ನಿತ್ತು ಅಲ್ಲಿಂದ ಹೊರಟು ಸೀತೆಯನ್ನು ಹುಡುಕುತ್ತ ಕೌಂಚಾರಣ್ಯ ವನ್ನು ಪ್ರವೇಶಿಸಿ ಬರುತ್ತಿರಲು, ಅಲ್ಲಿ ಮೊದಲ್ನೋಡಿದವರಿಗೆ ಪಗಲೊಡೆಯನಿಗಂಜಿ ಸಂಕೋಚಸ್ಥಿತಿಯನ್ನು ಹೊಂದಿ ಘನೀಭೂತವಾದ ಕಾರ್ಗತ್ತಲೆಯೋ ಎಂಬ ಭ್ರಾಂತಿ ಯನ್ನು ಹುಟ್ಟಿಸುತ್ತ ಘೋರವಾದ ಮುಖವೂ ಜೋಲುತ್ತಿರುವ ಹೊಟ್ಟೆಯ ಕರವಾದ ಕೋರೆದಾಡೆಗಳೂ ಉಳ್ಳವಳಾದ ಅಯೋಮುಖಿಯೆಂಬ ನಿಶಾಚರಿಯು ಲಕ್ಷ್ಮಣನನ್ನು ಹಿಡಿದು ನುಂಗುವದಕ್ಕೆ ಬರುತ್ತಿರಲು ; ಲಕ್ಷ್ಮಣನು ಆಕೆಯನ್ನು ಹಿಡಿದು ಶೂರ್ಪನಖಿಗೆ ಎರಡನೆಯವಳನ್ನಾಗಿ ಮಾಡಿಬಿಟ್ಟನು. ಅನಂತರದಲ್ಲಿ ರಾಮಲಕ್ಷ್ಮಣರಿಬ್ಬರೂ ಅಲ್ಲಿಂದ ಹೊರಟು ಬರುತ್ಯ ದಾರಿ ಯಲ್ಲಿ ಯೋಜನಬಾಹುವಾದ ಕದಂಭನೆಂಬ ರಾಕ್ಷಸನ ಬಾಹುಗಳೊಳಗೆ ಸಿಕ್ಕಿ ತಮ್ಮ ಕರಖಡ್ಡ ಗಳಿ೦ದ ಆತನ ನಿಡುದೋಳ ಳನ್ನು ಕತ್ತರಿಸಿ ಆತನನ್ನು ಕೊಂದುದರಿಂದ ಮೊದಲು ಆತನಿಗೆ ಸ್ಕೂಲಶಿರಸ್ತ್ರನೆಂಬ ಮುನಿಯಿಂದ ಬಂದಿದ್ದ ಶಾಪವು ವಿಮೋಚನ ವಾಗಿ ತನ್ನ ಪೂರ್ವದ ಗಂಧರ್ವರೂಪವನ್ನು ಧರಿಸಿ ದಿವ್ಯವಾದ ವಿಮಾನವನ್ನು ಹತ್ತಿ ಕುಳಿತು ಕೊಂಡು ರಾಮನನ್ನು ಕುರಿತು--ಎಲೈ ರಾಮಚ೦ದ್ರನೇ, ನಾನು ಧನು ವೆಂಬ ಗಂಧರ್ವನು. ಸ್ಕೂಲಶಿರಸ್ಕನೆಂಬ ಋಷಿಯ ಶಾಪದಿಂದ ನನಗೆ ಈ ರಾಕ್ಷಸ ಚನ್ನವ್ರಂಟಾಯಿತು. ಮಹಾತ್ಮನಾದ ನಿನ್ನ ದಯೆಯಿಂದ ಅದು ಈಗ ಪರಿಹಾರವಾ ಯಿತು. ಇನ್ನು ಮೇಲೆ ನಾನು ನನ್ನ ಲೋಕಕ್ಕೆ ಹೋಗುವೆನು. ಇಲ್ಲಿಗೆ ಸ್ವಲ್ಪ ದೂರದಲ್ಲಿರುವ ಹಂಸೆಯೆಂಬ ದಿವ್ಯ ಸರಸ್ಸಿನ ಬಳಿಯಲ್ಲಿ ಋಷ್ಯಮೂಕವೆಂಬ ಗಿರಿ ಯಿರುವುದು, ಅಲ್ಲಿ ಸೂರ್ಯನ ಮಗನಾದ ಸುಗ್ರೀವನೆಂಬ ಕಪಿವೀರನು ವಾಸಿಸುತ್ತಿ ರುವನು. ನೀನು ಅಲ್ಲಿಗೆ ಹೋಗಿ ಆತನ ಸಖ್ಯವನ್ನು ಮಾಡಿಕೊಂಡರೆ ರಾವಣ ಸಂಹಾ ರದಲ್ಲೂ ಸೀತಾಪ್ರಾಪ್ತಿ ಯಲ್ಲೂ ನಿನಗೆ ಸಹಾಯ ಮಾಡುವನೆಂದು ಹೇಳಿ ಸ್ವರ್ಗಕ್ಕೆ ಸಾಗಿಹೋದನು. ತರುವಾಯ ಲಕ್ಷ್ಮಣಸಮೇತನಾದ ರಾಮನು ವಿಯೋಗಜ್ವರದಿಂದ ಸಂಜಾತವಾದ ಕಂಪವುಳ್ಳವನಾಗಿ ಸಂಸಾಮಾರ್ಗವನ್ನು ಹಿಡಿದನು.