ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನಕದಾಸರ ಸಮಗ್ರ ಜೀವನ ಚರಿತ್ರೆ ಭೋರೆಂದು ಪೊಂಗಹಳೆ ಮೊರೆಯುತ್ತಿದ್ದುವಂತೆ ! ಇವನ ಶಸ್ತ್ರ ಶಾಸ್ತಾಭ್ಯಾಸಗಳೆರಡೂ ಆನೆಗೊಂದಿಯಲ್ಲಿ ನಡೆದಿದ್ದಿರಬೇಕು. ಕ್ಷತ್ರಿಯೋಚಿತ ಶಸ್ತಾಭ್ಯಾಸದೆಡೆ ಗೊತ್ತಿಲ್ಲವಾದರೂ, ಶಾಸ್ತ್ರಾಧ್ಯಯನದ ನೆಲೆಗೊತ್ತಿದೆ. ಅದು ಶ್ರೀ ವೈಷ್ಣವ ಮಹಾಮತ ಸ್ಥಾಪನಾಚಾರ್ಯ ಶ್ರೀ ರಾಮಾನುಜರ ಶಿಷ್ಯಪರಂಪರೆಯ ಶ್ರೀ ತಾತಾಚಾರ್ಯರ ಶ್ರೀಮಠವಿದ್ದ ಆನೆಗೊಂದಿಯಲ್ಲಿ. ತಾತಾಚಾರ್ಯರು ಕನ್ನಡ ರಮಾರಮಣ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದರೆಂಬುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಆದರೆ ಕನಕದಾಸನಿಗೆ ದಾಸದೀಕ್ಷೆ ದೊರೆತದ್ದು, ಅವನ ದಾಸ ಜೀವನ ಸಾಗಿದ್ದು ಅದೇ ವಿಜಯನಗರದ ವ್ಯಾಸರಾಯರ ಶ್ರೀಮಠದಲ್ಲಿ. ದೈತಮತ ಸಂಸ್ಥಾಪಕರಾದ ಮಧ್ವಾಚಾರರ ಶಿಷ್ಯ ಪ್ರಶಿಷ್ಯ ಪರಂಪರೆಯ ನರಹರಿ ತೀರ್ಥ, ಶ್ರೀಪಾದರಾಜ ಮತ್ತೆ ಅವನ, ಶಿಷ್ಯ ವ್ಯಾಸರಾಯ. ಈ ವ್ಯಾಸರಾಯರು 'ಶೇಷಾಶೇಷ ಪ್ರಹ್ಲಾದನ ಅವತಾರವೆಂದು ಪ್ರಸಿದ್ದರಾಗಿದ್ದಾರೆ. ವಾದಿರಾಜ, ವಿಜಯೇಂದ್ರ ಪುರಂದರದಾಸ, ವೈಕುಂಠದಾಸ ಈ ಮೊದಲಾದ ಅವರ ಶಿಷ್ಯರಲ್ಲಿ ಕನಕದಾಸನೂ ಒಬ್ಬ ಆದ್ದರಿಂದಲೇ ಆತ್ಮ ಪರಮ ಪುರುಷೋತ್ತಮನ ಕೃಪಾಪಾತ್ರನಾದ ಪ್ರಹ್ಲಾದಕುಮಾರನನ್ನು ಕುರಿತ ಒಂದು ಪ್ರಶಂಸಾ ಪದ್ಯದಲ್ಲಿ- 'ಕೂಸನು ಕಂಡೀರಾ ಸುಪ್ರಹ್ಲಾದನ ಕಂಡೀರಾ ನಮ್ಮ ಕೂಸನು ಕಂಡೀರಾ' ಎಂಬ ಪಲ್ಲವಿ ಹಾಡಿ, ಎರಡು ಚರಣಗಳಲ್ಲಿ ಅವನು ಹಿರಣ್ಯಕಶಿಪುವಿನ ಮಗನಾಗಿ ಜನಿಸಿ, ನರಸಿಂಹನನ್ನು ಕಂಬದಲ್ಲಿ ತೋರಿದ ಮಹಾತ್ಯೆಯನ್ನು ಹೊಗಳಿ, ಮೂರನೆಯ ಹಾಗೂ ಕಡೆಯ ಚರಣದಲ್ಲಿ ಪ್ರಸಿದ್ಧ ವ್ಯಾಸರಾಯರೆಂಬ ಕೂಸು ಪ್ರವೀಣ ವಿದ್ಯೆಯೋಳ್ ಎನಿಸಿದ ಕೂಸು ಪ್ರಹ್ಲಾದನೆಂಬ ಆಹ್ಲಾದದ ಕೂಸು ಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು ಎಂದು ಸ್ಪಷ್ಟವಾಗಿ ತನ್ನ ಗುರು ವ್ಯಾಸರಾಯರನ್ನು ಪ್ರಹ್ಲಾದನೊಡನೆ ಸಮೀಕರಿಸಿದ್ದಾನೆ ; ತನ್ನ ಗುರುಭಕ್ತಿಯನ್ನು ಆ ಮೂಲಕ ಪ್ರಕಟಿಸಿ ಧನ್ಯನಾಗಿದ್ದಾನೆ. ವ್ಯಾಸರಾಯರದು ತುಂಬಾ ಉದಾತ್ತ ವ್ಯಕ್ತಿತ್ವ, ಅದಕ್ಕೆ ಕೀಳು ಕಿಲುಬು ತಿಳಿದಿರಲಿಲ್ಲ, ಸ್ವಾರ್ಥ-ಸಂಕುಚಿತತೆಗಳು ಗೊತ್ತಿರಲಿಲ್ಲ. ಜಾತಿಗಿಂತಲೂ ಮಿಗಿಲಾದ ಜ್ಯೋತಿ ಒಂದಿದೆ. ಆ ಜ್ಯೋತಿ ಇದ್ದೆಡೆಯಲ್ಲಿ ದೈವತ್ವವಿದೆ ಎಂದು ಎಲ್ಲರಲ್ಲೂ ದೇವನನ್ನು ಕಂಡ, ಎಲ್ಲೆಡೆಯೂ ಮಂಗಳವನ್ನೇ ಗುರುತಿಸಿದ ಋಜು ಬುದ್ದಿ ಅವರದು. ತಮ್ಮ ಶ್ರೀ ಮಠದಲ್ಲಿ ಆಗಾಗ ನಡೆಯುತ್ತಿದ್ದ ವ್ಯಾಸಕೂಟ, ದಾಸಕೂಟಗಳ