ಪುಟ:ಕಬ್ಬಿಗರ ಕಾವಂ ೨.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬನಂಬರನಾಗಿರುವೆ. ನನ್ನ ಈ ಮಾತನ್ನು ಕೇಳಿದಾಗಲೇ ನಿನಗೆ ಶಾಪವಿಮೋ ಚನೆಯಾಯಿತು. ಈ ಬಾಳೆ ಮುಂತಾದವು ನಿನ್ನ ಸೈನ್ಯವು, ಎಂದು ಹೇಳಿ, ಆ ಅಪ್ಪರಸ್ತ್ರೀಯು ಹಾರಿ ಹೋದಳು (೩೧೯). ಇದನ್ನೆಲ್ಲಾ ಹೇಳುತ್ತಿದ್ದ ಒಂದು ಗಿಳಿಯು ಕಂಪುಪೊಳಲಿಗೆ ಹೋಗಿ, ಈ ಸಂಗತಿಯನ್ನು ತಿಳಿಸಿತು. (೩೧೨) ವಸಂತನು ಬಹಳ ಸಂತೋಷದಿಂದ ಪಟ್ಟಿ ಣವನ್ನು ಸಿಂಗರಿಸಿ, ಇಚ್ಛೆಗಾರ್ತಿ ಮೊದಲಾದವರೊಡನೆ ಇದಿರು ಬಂದು, ಕಾವನನ್ನು ಕರೆದುಕೊಂಡು ಹೋಗಿ ವಿಜೃಂಭಣಲೆಯಿಂದ ಪಟ್ಟಾಭಿಷೇಕವಾ ಡಿದನು. (೩೪೧-೪೨) ಆ ಮೇಲೆ ಕಾವನೂ ರತಿಯ ಸುಖದಿಂದ ಇದ್ದರು.