ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಜಾಳಿಸಿದ ಹದವಿಲ್ಲುಗಳ ಬಡಿ ಕೋಲುಗಳ ಸಂಕಲೆಯನಾಯ್ಸಳ ಕೊಲುವಲೆಗಳ ಕಣಿ ವಲೆದಡಿವಲೆಯ ನಿಡಿವಲೆಯ | ಕಾಲಕಣ್ಣಿಯ ಹೆಬ್ಬಲೆಯ ಬೆ ೪ಾಲಹೊಲೆಗಳ ಗಳಗಳಂಟನ ಮೇಲುಗೊಂಬಿನ ಬೇಟೆಕಾರು ಎಣಿಸಿದರು ಶಿವನ || ೩೪ ಶ್ರುತಿಗಳಆಗತರ್ಕಶಾಸ್ತ್ರ ದ ಗತಿಯ ಸೊಹಿನ ತಂತ್ರಮಯಸಂ ಗತಿಯ ಸೋಂಪಿನ ವಿವಿಧಜಪಯಜಾದಿಗಳ ಬಲೆಯು || ವ್ರತದ ಜಂತ್ರದ ಕಣ್ಣಿಗಳ ಸ ತತಿಯ ಕೊಟ್ಟುಂಡುಗಳ ಯೋಗ ಸ್ಥಿ ತಿಯ ಸರಳಿನ ಬೇಟೆಕಾರು ಬಸಿದರು ಹರನ || ೩೫ ಶ್ರವಣಮನನದ ಬೀಸುವಲೆ ಶಾಂ ಭವಸುವೇದದ ದೀಕ್ಷೆಗಳ ಬಲು ಗವಣೆಗಳ ಪಶುಪಾಶಬಂಧದ ಬೆಳಯಂಬುಗಳ | ನವವಿಧಾಮಳಭಕ್ತಿಗಳ ರಣ ದವಕದೀಹದ ಹುಲ್ಲೆಗಳ ಮೃಗ ಭವವಿದಾರಣಸುಭಟರೈದಿತು ಶಿವನ ನೇಮದಲಿ || ೩೬ ಸೋಹಿದರೆ ದೆಸೆದೆಸೆಗೆ ಹಾಯುವು ಮೋಹತಮದಂಭಾದಿಮ್ಮಗತತಿ ತೋಹಿನಲಿ ಬಿದ್ದು ವು ಮಹಾಪಾತಕಮದೇಭಚಯ | ದ್ರೋಹದೀಯದ ಮೃಗವಖಾಯವ ರಾಹ ಸಂಕೀರ್ಣೋಪಪಾತಕ ವಾಹರಿಪುಗಳನಂತವಳೆದುವು ಹರನ ಬೇಂಟೆಯಲಿ | ೩೬