ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

248 ಮಹಾಭಾರತ [ಅರಣ್ಯಪರ್ವ ಬ್ರೌಪದಿ ಸತ್ಯಭಾಮೆಯರ ಸಂವಾದ ಅರಸ ಕೇಳ್ಯ ದೌಪದಿಗೆ ಹರಿ ಯರಸಿ ನುಡಿದಳು ಸತ್ಯಭಾಮಾ ಸರಸಿಜಾನನೆ ನಗೆನುಡಿಯ ಸಂಮೇಳಖೇಳದಲಿ | ಅರಸಿ ಕೌತುಕವನಗೆ ನೀನೆ ವರಿಗೆ ಸತಿ ವಲ್ಲಭರ ಚಿತ್ತಾ ಕರುಷಣವು ನಿನಗೆಂತು ಸೇರಿಹುದೇ#ಳಾವದಲಿ || ಮಂತ್ರಸಿದ್ದಿ ಯೊ ಮೇಣು ಶಾಬರ ಯಂತ್ರರಕ್ಷೆಯೊ ಬಟೆಕಲ್‌ಪಧಿ 1 ತಂತ್ರತಿಲಕವೂ ರಮಣರಿವರೈವರ ಎತೀಕರಣ : ಯಂತ್ರಮಯಹೂಹೆಗಳು ನೃಪರೀ ಯಂತ್ರಸೂತ್ರದ ಕುಣಿಕೆ ನಿನ್ನಲಿ ಯಂತ್ರಣವ ಹೇಘ ನಿಧಾನವನಂದಳಿಂದುಮುಖಿ | ದೇವಿ ಯೆಂದಳು ಸತ್ಯಭಾಮಾ ದೇವಿಯರು ಮುಗ್ಗೆಯರಲಾ ತಾ ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು | ಭಾವಶುದ್ಧಿಯಲೈವರನು ಸಂ ಭಾವಿಸುವೆನವರವರ ಚಿತ್ರದ ಭಾವವದುಪಚರಿಸುವೆನು ಚತುರತೆಯ ಚಾಳಿಯಲಿ || cತಿ ಒಲವಅಗಿದು ಹತ್ತುವುದು ಚಿತ್ರದ ನೆಲೆಯದು ಸಮ್ಮುವುದು ಮುರಿಪಿನ ಹೊಳವಣಿದು ಹಿಂಗುವುದು ಹೊಗುವದು ಮನದೊಳಳವದು ಸುಳಿವಳಿದು ಸೋಂಕುವುದು ತವಕಕೆ ಬಲಿದು ಮುನಿವುದು ಸವಿಯ ಬೇಟವ ನೆಳಸಿ ಬೆಸವುದು ಬಗೆಯಲೆಂಗಳನಳಿನಮುಖಿ ನಗುತ || ೧೪ 1 ಮೇಣ್ಯರೌಪಧ, ಚ.