ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ -೦೧] ಘೋಷಯಾತ್ತಾಪರ್ವ 307 ನೋಯಿಸಲು ಶ್ರೀಗಂಧ ನಿಜಗುಣ ದಾಯತವ ಬಿಡದಂತೆ ನೀವೇ ಕಾಯಬೇಹುದು ಪತಿಯನೆಂದೊಅಲಿದಳು ಭಾನುಮತಿ | V ಧರ್ಮರಾಯನು ಭಾನುಮತಿಯನ್ನೆತ್ತಿ ಸಮಾಧಾನಪಡಿಸಿದುದು, ಚುಂಬಿಸಿತು ಕಡುಶೋಕ ಮಿಡಿದನು ಕಂಬನಿಯನುಗುರಿನಲಿ ಘನಕರು ಸಾಂಬನಿಧಿ ನೇವರಿಸಿ ಮೈಗುಡಿಯಿರಿದರೋಮದಲಿ ! ಹಂಬಲಿಸಬೇಡಕಟ ಕುರುಪತಿ ಯೆಂಬನಾರವ ಬೊಪ್ಪನವರೇ ನೆಂಟರೇಟೆ ತಾಯೆ ಯೆನುತೆತ್ತಿದನು ಭಾಮಿನಿಯ || ೯ ಗಂಧರ್ವರನ್ನು ಗೆಲ್ಲುವುದಕ್ಕಾಗಿ ಭೀಮಸೇನನಿಗೆ ಹೇಳುವಿಕೆ, ಭೀಮ ಬಾ ಕುರುರಾಜಕುಲಚೂ ಡಾಮಣಿಯ ತಾ ಹೋಗು ಕದನೋ ದ್ವಾಮದಪನ ತಾ ನಿಜಾನಯಕುಮುದಚಂದ್ರಮನ | ತಾ ಮನೋವ್ಯಥೆ ಬೇಡ ನೃಪಚಿಂ ತಾಮಣಿಯೆ ತಾ ಹೋಗೆನಲು ಕರ ತಾಮರಸವನು ಮುಗಿದು ಬಿನ್ನ ಹಮಾಡಿದನು ಭೀಮ | ೧೦ ಅದಕ್ಕೆ ಭೀಮಸೇನನ ಅಸಮ್ಮತಿ ಬೆಸಸಬೇಹುದು ನೀತಿಶಾಸ್ತ್ರದ ಬೆಸುಗೆ ತಪ್ಪದೆ ರಾಜಧರ್ಮದ ಮುಸುಡು ಕಂದದೆ ಖೋಡಿವಿಡಿಯದೆ ಕುಶರಾದವರು | ಎಸಗುವುದು ತಾವಾವ ಕಾರ್ಯದೊ ಳಸುವನಿಕ್ಕಿ ತದರ್ಥವನು ಪರ ರೆಸಗಿದರೆ ನಮಗೇನು ಬಾಧಕವೆಂದನಾಭೀಮ ||