ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ [ಕರ್ನಾಟಕಕ್ಕೆ ವರೆಗೆ ವಿಹರಿಸಿ, ಊರೋಳಗೆ ನಡೆದರು ಅಷ್ಟರಲ್ಲಿ ದಾರಿಯಲ್ಲಿ ನಾಟಕಶಾಲೆಯ ಬಳಿಯಲ್ಲಿ ಬೇಂಡಬಾಜಾದ ಸಪ್ಪಳವೂ, ಸನಾ ಯಿಯ ಇಂಪಾದ ಸುಸ್ವರವೂ ಕೇಳಹತ್ತಿತು, ಸಮೀಪಕ್ಕೆ ಹೋಗಿ. ನೋಡುತ್ತಾರೆ, ಆ ನಾಟ್ಯ ಮಂಟಪದಲ್ಲಿ ಅಂದು ಶಿರಹಟ್ಟಿಯ ಶ್ರೀಯುತ ವೆಂಕೋಬರಾಯರ ಕಂಪನಿಯ ಪದ್ಮಾವತಿ ಪರಿಣ ಯವು ಅಭಿನಯಿಸತಕ್ಕದ್ದಾಗಿತ್ತು, ಆ ನಾಟಕದ ಹಸ್ತಪತ್ರವನ್ನು ಓದಿ ನೋಡಿದ ಕೂಡಲೆ ಶ್ರೀಮನ್ನಾರಾಯಣನ ಕಾಲುಗಳು ಮುಂದ ಏಕದಾದವು. ವರುಣನ ಹೊರತು ಮಿಕ್ಕವರಿಗೆ ನಾರಾಯಣನ ಈ ಸ್ಥಿತಿಯು ಲಕ್ಷಕ್ಕೆ ಬರಲಿಲ್ಲ (ನಾರಾಯಣಾ, ಇಲ್ಲಿ ನಿಜವಾದ ಸದಾವತೀ ಪರಿಣಯವಿದೆಯೆಂದು ತಿಳಿದಿರುವೆಯೇನು? ಛೇ, ಛೇ. ಇದೊಂದು ನಕಲು, ಅನಾಯಾಸವಾಗಿ ಇಲ್ಲಿಗೆ ಬರುವ ಪದ್ದಾ ವತಿಯನ್ನು ವರಿಸಬೇಕೆಂದು ಕಲ್ಪಿಸಿಕೊಂಡಿರುವದರಿಂದಲೇ ನಿನ್ನಿಂದ ನಡೆಯುವದಾಗುವದಿಲ್ಲೆ೦ಬ೦ತೆ ಕಾಣುತ್ತದೆ' ಎಂದು ನುಡಿದು, ವರುಣನು ಖೆಳ್ಳನೆ ನಕ್ಕ ನು, ಆಗ ನಾರಾಯಣನು ನಾಚಿಕೊಂಡು ಪಿಟೊಂದು ಉತ್ತರ ಕೊಡದೆ, ಅವರೊಡನೆ ಸಾಗಿದನು | ° ಅವರು ಅಂದು ಬಳೇಪೇಟೆ, ಅಕ್ಕಿಪೇಟೆ, ಅರಳೇಪೇಟೆ, ದೊಡ್ಡ ಪೆಟೆ, ನಗರ ಪೇಟೆ, ಹಲಸೂರ ಪೇಟೆಗಳನ್ನು ಸುತ್ತಿ ಕೊಂಡು ಕೋಟೆಯ ಬದಿಯ ಮಾರ್ಕಟನೂ, ವಿಕ್ಟೋರಿಯಾ ಆಸ್ಪತ್ರೆ, ಕಣ್ಣಾಸ್ಪತ್ರೆಗಳನ್ನೂ ನೋಡಿದರು ಅಷ್ಟರಲ್ಲಿ ರಾತ್ರಿಯ ೯ ಗಂಟೆಯಾಯಿತು. ಊರಲ್ಲೆಲ್ಲ ವಿದ್ಯುದ್ದೀಪದ ಬೆಳಕು ಚಂದ್ರನ ಪ್ರಕಾಶಕ್ಕಿಂತಲೂ ಶ್ರೇಷ್ಠ ವಾಗಿ ಬಿದ್ದಿತ್ತಾದ್ದರಿಂದ ಅವರಿಗೆ ಅಲ್ಲಿ ತಿರುಗಾಡಲಿಕ್ಕೆ ಸ್ವಲ್ಪವಾದರೂ ಶ್ರವವಾಗಲಿ ತೊಂದರೆಯಾಗಲಿ ಆಗಲಿಲ್ಲ ಅವರು ಇನ್ನೂ ಕೆಲಹೊತ್ತಿನವರೆಗೆ ಅಲೆಯಬೇಕೆಂದಿದ್ದರು; ಆದರೆ ಪೂರ್ಣಯ್ಯನ ಛತ್ರದ ಬಾಗಿಲುಗಳು ರಾತ್ರಿಯ ಹೊತ್ತು ಗಂಟೆಯ ಮೇಲೆ ಮುಚ್ಚಲ್ಪಡುವವೆಂದು ವರುಣನು ಬ್ರಹ್ಮಾದಿಗಳಿಗೆ ಸೂಚಿಸಿದ್ದರಿಂದ, ಅವರು ಆಗ ಮತ್ತೆಲ್ಲಿಯೂ ಹೋಗದೆ ನೆಟ್ಟಗೆ ತಮ್ಮ ಬಿಡಾರಕ್ಕೆ ಬಂದರು; ಹಾಗು ತಮ್ಮ ಅಡಿಗೆ-ಊಟಗಳ ವ್ಯವಸ್ಥೆಯಲ್ಲಿ ಮಗ್ನರಾದರು. "ಮರುದಿನ ಬೆಳಿಗ್ಗೆ ಎದ್ದು ಪ್ರಾತರ್ವಿಧಿ, ಸ್ನಾನಾಗ್ನಿಕಗಳನ್ನು ತೀರಿಸಿಕೊಂಡು ಪುನಃ ಊರೊಳಗೆ ಹೊರಟರು, ಅಂದು ಅವರು