ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fଟ ದೇವತೆಗಳ ಆಗಮನ ಭತ್ರದೊಳಗಿನ ಸ್ವಚ್ಛವೂ ವಿಶಾಲವೂ ಆದ ಆ ಪಡಸಾಲೆಯಲ್ಲಿ ಚೆನ್ನಾಗಿ ನಿದ್ದೆ ಹತ್ತಿತು. ಅವರು ಇನ್ನೊಂದು ದಿವಸವಿದ್ದು ಬೆಂಗಳೂರ ಉಪನಗರ ಗಳನ್ನು ನೋಡಬೇಕೆಂದಿದ್ದರು; ಆದರೆ ನಾಲ್ಕನೇ ದಿನ ಬೆಳಿಗ್ಗೆ ಆ ಛತ್ರದ ಕಾವಲುಗಾರನು ಇವರೆಡೆಗೆ ಬಂದು:-ಸ್ವಾಮಿ, ನೀವು ಇಲ್ಲಿಗೆ ಬಂದು ಮೂರು ದಿನಗಳಾದವು, ಈ ಛತ್ರದ ಪಾರು ಪತ್ಯಗಾರರು ಮೂರು ದಿನಗಳಿಗಿಂತ ಹೆಚ್ಚು ಕಾಲ ಪ್ರಯಾಣಿಕರನ್ನು ಇಲ್ಲಿ ಇರಗೊಡುವದಿಲ್ಲ ಆದುದರಿಂದ ತಾವು ಇಂದೇ-ಈಗಲೇ ಇಲ್ಲಿಂದ ದಯಮಾಡಿಸಬೇಕು, ಎಂದು ಮೈಸೂರ ದೇಶದ ಔಪಚಾ ರಿಕ ಶಬ್ದಗಳಿಂದ ನಮ್ಮ ದೇವತೆಗಳಿಗೆ ಉಚ್ಚಾಟನೆ ಕೊಟ್ಟನು. ಬ್ರಹ್ಮನಿಗಾದರೂ ದೇವಲೋಕಕ್ಕೆ ತೀವ್ರ ಹೋಗುವದಿದ್ದು ದರಿಂದ ಅವನು ಹೊರಡಿರೆಂದು ತಮ್ಮವರನ್ನು ಕಟ್ಟಿ ಕೊಂಡು ಸ್ಟೇಶನ್ನಿಗೆ ನಡೆದನು ಕೋಲಾರ. ಪರ್ಣಯ್ಯನ ಛತ್ರದಿಂದ ಹೊರಟ ಬ್ರಹ್ಮಾದಿ ದೇವಗಣ ಗಳ ಸ್ಟೇಶನ್ನಿಗೆ ಹೋಗುತ್ತಿರಲು, ತಾವು ಮುಂದೆ ಎಲ್ಲಿಗೆ ಹೋಗ ಬೇಕಂಬ ವಿಷಯವಾಗಿ ಅವರಲ್ಲಿ ವಾದವುಂಟಾಯಿತು ಆಗ ನಾಢಾಯಣ:- ನಾವು ಈಗ ಹಾಗೂ ಕರ್ಣಾಟಕಕ್ಕೆ ಬಂದು ಬಿಟ್ಟಿರುತ್ತೇವೆ. " ಪುನಃ ಇತ್ತ ಕಡೆಗೆ ಬರುವದೆಂದೂ ಏನೂ? ಆದುದರಿಂದ ನಾವು ಇಲ್ಲಿ ಇನ್ನೂ ಕೆಲವು ದಿವಸ ಸಂಚ ರಿಸಿ, ಕೋಲಾರ, ಶಿವಸಮುದ್ರ, ಹಿರೋಡೆ,(ಫ್ರೆಂಚರಾಕ್ಸ್) ೫ರಂ ಗಪಟ್ಟಣ, ಕನ್ನಂಬಾಡಿ, ಮೈಸೂರ, ನಂಜನಗೂಡು ಮುಂತಾದವು ಕಳನ್ನು ನೋಡಿಕೊಂಡು ಹೋಗೋಣ. ಬ್ರಹ್ಮ:-ಛೇ, ನಾರಾಯಣಾ, ನೀನು ಆಗಾಗ್ಗೆ ಎಷ್ಟೋ ಸಾರೆ ಅವತರಿಸುತ್ತಿದ್ದರೂ ಇಲ್ಲಿಯ ಮೋಹವು ನಿನಗೆ ಇನ್ನೂ ಬಿದೆ? ಸಾಕು, ಇಷ್ಟು ದಿನಗಳ ವರೆಗೆ ಕಂಡಕಂಡಲ್ಲಿ ಅಂಡಲೆ ದದ್ದು ಸಾಕಾ-ಸಾಕು, ನಡೆಯಿರಿನ್ನು ಬೇರೆ ಕಡೆಗೆಲ್ಲಿಗೂ ಹೋಗದೆ, ನಮ್ಮ ಭಾವಕ್ಕನನ್ನು ಯಾವ ಸ್ಥಳದಲ್ಲಿ ಒಳ್ಳೆ ಬಿಗು