ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oo [ಕರ್ನಾಟಕಕ್ಕೆ ವಾಗಿ ಕಟ್ಟುತ್ತಿರುವರೋ, ಅಲ್ಲಿಗೆ ಹೋಗಿ, ಆಕೆಯ ಕಷ್ಟ ನಿವಾರ ಣಕ್ಕೆ ಉಪಾಯವನ್ನು ಮಾಡಿ, ಶೀಘ್ರವಾಗಿ ನಮ್ಮ ನಮ್ಮ ಬಿಡಾ ರುಗಳ ಹಾದಿಯನ್ನು ಹಿಡಿಯೋಣ - ಹೀಗೆ ಮೂರು ತಿಂಗಳುಗಟ್ಟಿ ಮನೆ-ಮಾರು ಬಿಟ್ಟು ತಿರುಗಲಿಕ್ಕೆ ನಾವೇನು ಸಂನ್ಯಾಸಿಗಳೇ? ನಮ್ಮ ಹೆಂಡಿರು-ಮಕ್ಕಳು ನಮ್ಮ ವಿಷಯವಾಗಿ ಚಿಂತಾಮಗ್ನರಾ ಗಿರಲಿಕ್ಕಿಲ್ಲವೆ? ಎಂದು ಹೇಳಿ, ಕನ್ನಂಬಾಡಿಯ ಕಡೆಗೆ ಹೋಗ ಬೇಕೆಂದು ಹಟ ಹಿಡಿದನು. ಆದರೆ ನಾರಾಯಣ-ಇಂದ್ರಾದಿಗಳು ತಮ್ಮ ತಮ್ಮೊಳಗೆ ಸಂಕೇತ ಮಾಡಿಕೊಂಡು ಮೊದಲು ಕೋಲಾರಕ್ಕೆ ಹೋಗಿ, ಅಲ್ಲಿಂದೆ ಶಿವಸಮುದ್ರದ ಮೇಲೆ ಹಾಯು, ಕನ್ನಂಬಾಡಿಯ ಕಡೆಗೆ ಹೋಗು ವದನ್ನು ನಿರ್ಧರಿಸಿದರು; ಹಾಗು ಕನ್ನಂಬಾಡಿಗೇ ಹೋಗುವದೆಂದು ಬ್ರಕ್ಕನೆದುರಿಗೆ ಬಹಿರಂಗವಾಗಿ ನುಡಿದು, ಸ್ಟೇಶನ್ನಿಗೆ ಬಂದು ಕೋಲಾರಿನ ತಿಕೀಟುಗಳನ್ನು ತಕೊಂಡರು. ಬೆಂಗಳೂರಸಿಟಿಯಿಂದ ಕೊಲಾರಿಗೆ ಎರಡು ಮಾರ್ಗಗಳಿಂದ ಹೂಗಬಹುದಾಗಿದೆ ಮದ್ರಾಸದ ಕಡೆಗೆ ಹೋಗುವ ದೊಡ್ಡ ರೈಲಿನಲ್ಲಿ ಕುಳಿತು, ಬೌರಿಂಗಪೇಟೆ ಯ ಜಂಕ್ಷನ್ನಿನಲ್ಲಿಳಿದು ಕೋಲಾ ರಕ್ಕೆ ಹೋಗುವ ದಾರಿಯು, ಮೊದಲಿನ ದಾರಿಯು; ಬೆಂಗಳೂರ ಸಿಟಿಯಿಂದ ಚಿಂತಾಮಣಿಗಳ ಮೇಲೆ ಹಾಯ್ದು ಹೋಗುವ ಚಿಕ್ಕ ರೈಲಿನ ಮಾರ್ಗವು ಹೊಸದಾದದ್ದು, ಈ ಹೊಸ ಮಾರ್ಗದಿಂದಲೆ ಹೋದರೆ ಬ್ರಹ ಕ ಕೂ ಲಾರಿಗೆ ಹೋಗುವ ಮೊದಲಿನ ದಾರಿಯು (ದೊಡ್ಡ ರೈಲಿನಲ್ಲಿ ಸಂಶಯವು ಬರಲಿಕ್ಕಿಲ್ಲ; ಮೇಲಾಗಿ ಈ ಮಾರ್ಗವೂ ಹೊಸದಾದ್ದರಿಂದ ಇಲ್ಲಿ ಕೆಲವು ಹೊಸ ನೋಟಗಳೂ ಕಾಣಬಹು ದೆಂದು ಯೋಚಿಸಿ, ವರುಣನು ನಾರಾಯಣಾದಿಗಳ ಆಲೋಚನೆಯು ಮೇರೆಗೆ ಕೋಲಾರಿಗೆ ಹೋಗುವ ಚಿಕ್ಕ ರೈಲಿನ ತಿಕೀಟುಗಳನ್ನೇ ಕೊಂಡುಕೊಂಡು ಬಂದನು. ಗಾಡಿ ಹೊರಡಲು ಇನ್ನೂ ಕೆಲವು ಅವಕಾಶವಿದ್ದಿ ತು, ಅಷ್ಟರಲ್ಲಿ ಬೆಂಗಳೂರ ಶೀತಹವಯ ಮೂಲ ಕವೋ ಏನೋ, ಬ್ರಹ್ಮನಿಗೆ ಮತ್ತೆ ಬಹಿರ್ದೆಶೆಗೆ ಹೋಗಬೇಕು ಯಿತು. ಆಗ ವರುಣಾದಿಗಳು ಆವನಿಗೆ ನೀರು ತಂದು ಕೊಟ್ಟು ಅವನನ್ನು ಆ ಸ್ಟೇಶನ್ನಿನ ಆಚೆಬದಿಯ ಶೌಚ ಕೂಪಕ್ಕೆ ಕಳಿಸಿದರು. ಬ್ರಹ್ಮಶೌಚವು ಅತಿ ತಡವೆಂದು ಮೊದಲೇ ಪ್ರಸಿದ್ಧಿಯುಂಟು, ಇಂಥ