ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ [ಕರ್ನಾಟಕಕ್ಕೆ ಜಲಮಾರ್ಗಗಳಿಂದ ವಿಲಾಯತಿಗೆ ಸಾಗಿಸಲ್ಪಟ್ಟು, ಅಲ್ಲಿ ಅವನ್ನು ಪುಡಿಮಾಡಿ ಕರಗಿಸಿ ನೀರು ಮಾಡಿ, ಅದರಿಂದ ಶುದ್ಧ ವಾದ ಬಂಗಾರ ಮಿಶ್ರಬಂಗಾರ, ಇತರ ಧಾತು ಮುಂತಾದವುಗಳನ್ನು ತೆಗೆಯು ತಾರೆ, ಇಲ್ಲಿ ಬಂಗಾರ ಕರಗಿಸಿ ಶುದ್ದಿ ಮಾಡುವದರಿಂದ ಹಿಂದೀ ಜನರು ಆ ಕಸಬನ್ನು ತಿಳಿದರೆ, ತನ್ನ ಹೊಟ್ಟೆಯ ಮೇಲೆ ಎಲ್ಲಿ ಕಲ್ಲು ಬಂದೀತೆಂಬ ಭಯದಿಂದಲೋ ಏನೋ, ಆ ಬ್ರಿಟಾನಿಯನ್ನರು ಆ ಬಂಗಾರದ ಕಲ್ಲುಗಳನ್ನು ಏಳೆಂಟು ಸಾವಿರ ಮೈಲುಗಳಾಚೆ ಯಲ್ಲಿರುವ ತಮ್ಮ ಮಾತೃಭೂಮಿಗೇ ಸಾಗಿಸುತ್ತಿರುವರು!

  • ಆ ಕೋಲಾರದ ಖಣಿಗಳಲ್ಲಿ ಹಿಂದುಸ್ತಾನದ ಎಲ್ಲ ಪ್ರಾಂತ ಗಳ ಇಷ್ಟೇ ಅಲ್ಲ, ಎಷೆ ಪರದೀಪಣ್ಣ ಕಲಸುಗಾರರೂ ದುಡಿ ಯುತ್ತಿರುವರು. ಆ ಖಣಿಗಳನ್ನು ನೋಡ ಹೋಗಲಿಕ್ಕೆ ಎಲ್ಲರಿಗೂ ಪರವಾನಿಗೆ ಇರದ್ದರಿಂದ ನಾವು ಅಲ್ಲಿಗೆ ಹೋಗದಿರುವದೊಂದು ವಿಹಿತ ಕಾರ್ಯವೇ ಆದಂತಾಯಿತು; ಅಲ್ಲಿ ಕೆಲಸ ಮಾಡುವವರು ತಮ್ಮ ಅರಿವೆ-ಅಂಚಡಿಗಳನ್ನು ಆ ಖಣಿಗಳ ಮುಖ್ಯ ದ್ವಾರಪಾಲಕನ ವಶದಲ್ಲಿರಿಸಿ, ಕೇವಲ ಕೌಪೀನವನ್ನು ಧರಿಸಿ ಖಣಿಗಳಲ್ಲಿಯ ಕೆಲಸ ಮಾಡಬೇಕೆಂದೂ, ಬರುವಾಗ ತಮ್ಮ ಅಂಗರುಡತಿಯನ್ನು ಅಲ್ಲಿಯ ಅಮಲದಾರರಿಂದ ಮಾಡಿಸಿದ ತರುವಾಯ ತಮ್ಮ ತಮ್ಮ ಪೋಷಾಕು ಗಳನ್ನು ಧರಿಸಿ ಮನೆಗೆ ಬರಬೇಕೆಂದೂ ನಿಯಮಗಳುಂ ವೆಂದು ಕೇಳಿ ದೇನೆ. ಇದರಲ್ಲಿ ಸತ್ಯವೆಷ್ಟೋ ಅಸತ್ಯವಷ್ಟೋ ಎಂಬದನ್ನು ಪ್ರತ್ಯಕ್ಷ ದರ್ಶಿಗಳೇ ಹೇಳಬಲ್ಲರು. ಇರಲಿ, ಅಲ್ಲಿ ದುಡಿಯುವ ಸಾವಿರಗಟ್ಟಿ ಕೆಲಸಗಾರರಲ್ಲಿ ಮೇಲಿಂದ ಮೇಲೆ ಒದಗಿಬರುವ ಅಪ ಘಾತಗಳ ಮೂಲಕ ಪ್ರತಿವರ್ಷ ಕನಿಷ್ಟ ಪಕ್ಷ ನೂರಾರು ಜನರಾ ದರೂ ಆ ಖಣಿಗೆ ಬಲಿಯಾಗುತ್ತಿದ್ದು, ಆ ಬಡಜನರ ಕುಟುಂಬಗಳು ಅನಾಗತಿಕಗಳಾಗುತ್ತಿರುವವಂತೆ!
  • ಹೀಗೆ ದೇವಗಣಗಳು ಕೋಲಾರ ಖಣಿಯ ವಿಷಯವನ್ನು ಕೇಳುತ್ತಿರುವಾಗ ಅವರ ರೈಲು ಬೆಂಗಳೂರ ಸಿಟಿಯಲ್ಲಿ ಬಂದು ನಿಂತಿತು. ತಮ್ಮಲ್ಲಿ ಯೋಗ ತಿಕೀಟುಗಳಿರದ್ದರಿಂದ ಅವರು ತಿಕೀಟ ಕಲೇಕ್ಟರರ ಕಣ್ಣು ತಪ್ಪಿಸಿ ಹಿಮ್ಮಗ್ಗಲಿನಿಂದ ಇಳಿದು ಊರೊ ಇಗೆ ನಡೆದರು; ಮತ್ತು ಬ್ರಹ್ಮ ಸ೦ಕಿಕ್ಕೆ ವಿರುದ್ಧವಾಗಿ ನಡೆಯ ಹೋಗಿ ಪಶ್ಚಾತಾಪಪಟ್ಟ ಅವರು ಅರಳೇಪೇಟೆಯ ಮಾರ್ಗವಾಗಿ