ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೧೧೫ ಭಜನೋತ್ಸರ ತುಸ ವಿಶ್ರಮಿಸಿ, ಬಳಿಕ ಅವರು ನಗರ ಪ್ರಕ್ಷಣೆಗಾಗಿ ಹೊರಟರು, ಛತ್ರಕ್ಕೆ ಸಮೀಪದಲ್ಲಿರುವ ಗೆಸ್ಟ್ ಹೌಸುಗಳು ಮೊದಲು ಅವರಿಗೆ ಸಿಕ್ಕವು ಅವನ್ನು ನೋಡಿಕೊಂಡು ಅವುಗಳ ಪ್ರಶಸ್ಥ ಪ್ರಾಕಾರ, ಸುಶೋಭಿತಗಳಾದ ಕಟ್ಟಡ, ಉಪ ವನ ಮುಂತಾದವುಗಳ ವಿಷಯವಾಗಿ ಸೋಜಿಗಪಡುತ್ತ ನಡೆದಿ ರಲು, ಹೆಂಗಸರ ಆಸ್ಪತ್ರೆಯನ್ನು ಕಂಡರು, ಲೇಡೀಮಡಿಕಲ್ ಆಫೀಸರರಿಂದ ಪರವಾನಿಗೆ ತಕೊಂಡು ಅಲ್ಲಿ ಗಂಡಸರು ನೋಡ ಬಹುದಾದ ಎಲ್ಲ ಭಾಗಗಳನ್ನೂ ನೋಡಿದರು. ಇಂಥ ಆಸ್ಪತಿ ಯನ್ನು ತನ್ನ ರಾಜ್ಯದಲ್ಲಿ ಕೂಡಲೆ ಸ್ಥಾಪಿಸುವ ಎತ್ತುಗಡೆ ಮಾಡು ವದೆಂದು ಇಂದ್ರನು ಮನಸಾ ನಿಶ್ಚಯಿಸಿಕೊಂಡನು. - ಮುಂದೆ ಹೋಗುವಷ್ಟರಲ್ಲಿ ಅವರಿಗೆ ಒಂದು ವಿಶಾಲವಾದ ಕಟ್ಟಡವು ಹತ್ತಿತು. ಅದು (ಮಹಾರಾಣಿ ಕಾಲೇಜ' ಎಂಬಭಿ ಧಾನದ ವಿದ್ಯಾಲಯವಾಗಿತ್ತು, ಅದರಲ್ಲಿ ಎಲ್ಲರಿಗೂ ಪ್ರವೇ ಶವಿರದ್ದರಿಂದ ಇಂದ್ರನು ತವರ ಮನಿಕ, ರಂಭೆ ಮೊದಲಾದ ಲಲನಾಮಣಿಗಳ ಆಪ ವ್ಯವನ್ನು ಸಿದ್ದ ಮಾಡಿಕೊಟ್ಟು, ಆ ಶಾಲೆ ಯನ್ನು ನೋಡಿ ಬರುವ ಪರವಾನಿಗೆಯನ್ನು ಪಡಕೊಂಡನು, ಒಳಗೆ ಪ್ರವೇಶಿಸಿ ನೋಡುತ್ತಾರೆ, ಅಲ್ಲಿ ೮-೧೦ ವರ್ಷಗಳ ವಯ ಸಿನ ಬಾಲಿಕೆಯರಿಂದ ೩೦- ೩೫ ವರ್ಷ ವಯಸ್ಸುಳ್ಳ ಪ್ರೌಢ ಸ್ತ್ರೀಯರ ವರೆಗೆ ನೂರುಗಟ್ಟೆ ವಿದ್ಯಾರ್ಥಿನಿಯರಿದ್ದ . ಅವರಲ್ಲಿ ಕೆಲವರು ಕೇವಲ ದೇಶೀಯ ಪೋಷಾಕನ್ನು ಧರಿಸಿದ್ದರು; ಬೇರೆ ಕೆಲವರು ದೆ: ಶೀ-ವಿದೇಶೀಯ ವಿ:ಶ್ರ ಡೆಕ್ಕನ್ನು ಹಾಕಿಕೊಂಡಿದ್ದ ರು. ಇನ್ನುಳಿದ ಕೆಲವರು ಕಾಲಿನಿಂದ ಕುತ್ತಿಗೆಯ ವರೆಗೆ ಅಪ್ ಟು ಡೆ' ಟ ಇಂಗ್ಲಿಷ್ ಡ್ರೆಸ್ಸನ್ನು ತೊಟ್ಟು ಕೊಂಡಿದ್ದ ರೂ, ತಲೆಗೆ ಮಾತ್ರ ವಿದೇಶೀಯಪದ್ದತಿಯ ಹ್ಯಾಟುಗಳನ್ನು ಹಾಕಿಕೊಂಡಿರಲಿಲ್ಲ, ನಾನಾ ತರದ ಪೂಮಾಲೆಗಳು ಅವರ ಕೇಶಭಾರವನ್ನು ಇಮ್ಮಡಿಸಿದ್ದವು. ಆ ನೋಟವನ್ನು ನೋಡುತ್ತ ನಡೆದಿದ್ದ ಬ್ರ*ನಿಗೆ ಹೇಗೆ ಹೇಗೋ ಅನಿಸಿದ್ದರಿಂದ, ತನ್ನ ತಲೆ ನೋಯುವದೆಂದು ನೆವ ಹೇಳಿ ಸಂಗಡಿಗರನ್ನು ಅಲ್ಲಿಂದ ಹೊರಡಿಸಿಕೊಂಡು ತಮ್ಮ ಬಿಡಾರದ ಕಡೆಗೆ ನಡೆದನು, ಅಷ್ಟರಲ್ಲಿ ಸಾಯಂಕಾಲವೂ ಆದ್ದರಿಂದ ಅಂದು ಅವರು ಮತ್ತಾವ ಕಡೆಗೂ ಹೋಗದೆ, ನೆಟ್ಟಗೆ ಛತ್ರಕ್ಕೆ ಬಂದು