ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೧೨೩ ರಲ್ಲಿ ನಿನ್ನ ಬಂಧವಿಮೋಚನೆಯು ಯಾವದೊಂದು ಸುಲಭ ಉಪಾಯ ವನು ಮಾಡಿಯೇ ಹೋಗುತ್ತೇನೆ, ಎಂದು ಹೇಳಿ, ಮೋರೆಯ ಮೇಲೆ ಕೈ ಎಳೆದು, ಆ ಕಾವಳ್ಳನನ್ನು ಕಳಿಸಿದನು. - ಬಳಿಕ ಅವರು ಪುನಃ ಆ ಹಿಡ್ಡಿನ ಮೇಲೆ ಹತ್ತಿ ಅಲ್ಲಿಯ ಅವ ರ್ಣನೀಯ ಸೊಬಗನ್ನು ನೋಡತೊಡಗಿದರು. ಅಷ್ಟರಲ್ಲಿ ಶ್ರೀ ಸೂರ್ಯನಾರಾಯಣನು ಅಸ್ತಾಚಲವನ್ನೇರಿ, ಇಡಿ ಹಗಲೆಲ್ಲ ಒಂದೇ ಸವನೆ ದಾರಿ ಕ್ರಮಿಸಿ ಬಂದುದರಿಂದ ಉಂಟಾದ ತಾಪವನ್ನು ಕಳ ಕೊಳ್ಳುವದಕ್ಕೂ ಏನೋ ಎನು ವಂತೆ, ಆಚೆ ಬದಿಗಿರುವ ವಿಶಾಲ ವಾದ ಸಾಗರದಲ್ಲಿ ದುಮುಕಿ ಕಾಣದಂತಾದನು! ಸೂರ್ಯದೇ ವನೇ ವಿಶ್ರಾಂತಿಗೆ ಮನಸು ಮಾಡಿ ಸ್ವಕಾರ್ಯ ರಹಿತನಾದ ಬಳಿಕ ಪಕ್ಷಿ ಪಾಮರರ ಪಾಡೇನು? ಅವರ ದಿನಚರ್ಯವನ್ನು ಬಿಟ್ಟು ಕಟ್ಟು, ಸಖಿಯರೊಂದಿಗೆ ನಿಶಾಚರಣೆಗೆ ಪ್ರಾರಂಭ ಮಾಡಲು ಕರಾದರು. ಇಷ್ಟರಲ್ಲಿ ಆ ಸಾಗರದ ಕಟ್ಟೆಯ ಮೇಲೆ ದೃಷ್ಟಿ ಹರಿಯುವ ವರೆಗೆ ಎಲ್ಲ ಕಡೆಯಲ್ಲಿಯೂ ನಾನಾವರ್ಣದ ವಿದ್ಯ ದ್ವೀಪಗಳು ಉರಿಯಲಾರಂಭಿಸಿದವು ಹಿಡ್ಡಿ ನ ಮೇಲಿನ ವಿಶಾಲ ವಾದ ಸ್ಥಳದಲ್ಲಿ ಪಶ್ಚಿಮದಿಕ್ಕಿನ ಮಂದಮಾರುತನು ತನ್ನ ಕರಗ ಇನ್ನು ಸಮೀಪದ ವಿಶಾಲವಾದ ಸಾಗರದ ಜಲದಲ್ಲಿ ಅದ್ದಿ ಸಿಂಪಡಿ ಸುವಂತೆ ಸುಗಂಧಯುಕ್ತ ತುಷಾರಗಳನ್ನು ಹಾರಿಸುತ್ತಿದ್ದನು ಸುತ್ತಲೂ ನಾನಾಬಣ್ಣದ ಚಿತ್ರ-ವಿಚಿತ್ರ ದೀಪಗಳಿದ್ದ ವ ಈ ಆನಂದಮಯ ಸಾಮ್ರಾಜ್ಯದಲ್ಲಿ ನಮ್ಮ ದೇವಗಣಗಳು ಕಂಕ : 2) ವನ್ನು ಕಳೆದು, ದೇಶ ಭನ ವಿರಹಿತರ ಎಗಿರಲು, ಅವರೆದ.ರಿಗೆ ೧೦೦ ಜೋತಿರ್ಮಯ ಏವಾನವು ಒಂದು ನಿಂತಿತು ಆ ವಿಮಾನದ ಸಾರಥಿಯಾದ ಮಾತಲಿಯು ಲಗುಬಗೆಯಿಂದ ಬಂದು ಇಂದ್ರನಿಗೆ ಬೋಗಿ ಸಲಾಮು ಹೊಡೆದು:- ಮಹಾಪ್ರಭೂ, ತಾವುಗಳು ಬಹಳ ದಿವಸಗಳಾದರೂ ಬಾರದ್ದರಿಂದ ಸ್ವರ್ಗರಾಜ್ಯದಲ್ಲಿ ಅರಾಜ ಕತೆಯುಂಟಾಗಿರುತ್ತದೆ. ಪರಿವಾರದವರಲ್ಲಿ ಜಗಳ- ತಂಟೆಗಳು ಉತ್ರ ನ್ಯವಾಗಿರುತ್ತವೆ. ಈ ಕಾರಣದ ಮೂಲಕ ತಮ್ಮಲ್ಲಿ ನಿಷವಂ ತರಾದ ಸಕಲ ಪ್ರಜೆಗಳೂ ಅನ್ನ ನೀರುಗಳನ್ನು ಬಿಟ್ಟು ಗಾ ವ್ಯ ರುತ್ತಾರೆ; ಹಾಗು ಅದರಿಂದ ಹಲಕೆಲವರ ಪ್ರಾಣಗಳೂ ಹಾರ ಹತ್ತಿವೆ! ಇದಕ್ಕೊಸ್ಕರ ಯುವರಾಜರಾದ ಜಯ೦ತಪ್ರಭುಗಳು