ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ [ಕರ್ನಾಟಕಕ್ಕೆ ಬಳಿಗೆ ಬಂದಿರಬಹುದಾಗಿದೆ. ಆ ಸಂಗತಿಯನೇ ಇರಲಿ, ನಾನು ಈಗ ಬರುವನು, ತುಸ ತಡೆ ಎಲ್ಲ ಹೋಳಿಗೆಗಳನ್ನು ಈ ನಿನ್ನ ತುಂಟ ಹುಡುಗರಿಗೇ ಕೊಟ್ಟು ತೀರಿಸಬೇಡ; ಎಂದವನೇ ನಂದಿ ಹೊಡನೆ ಪಡಸಾಲೆಗೆ ಬಂದನು. ಕೂಡಲೆ ನಾರಾಯಣಾದಿ ದೇವ ತಗಳು ಒಬ್ಬೊಬ್ಬರಾಗಿ ಮುಂದೆ ಬಂದು, ಮಹಾದೇವನಿಗೆ ಪ್ರಣಿ ಪಾತವಂಗೈದರ | ಮಹಾ:-ಸ್ವರ್ಗಲೋಕದಲ್ಲಿ ಕುಶಲವಷ್ಟೆ? ನಾರಾ:-ಮಹಾದೇವರ ಕೃಪೆಯಿಂದ ಈ ವರೆಗೆ ಎಲ್ಲವೂ ಕ್ಷೇವುವು. ಮಹಾ:-ಹಾಗಾದರೆ ಈ ಅಸಮಯದಲ್ಲಿ ಇಲ್ಲಿಗೆ ಬಂದ ಕಾರಣವೇನು? ನಾರಾ:--ನಾವೆಲ್ಲರೂ ಬೆಂಗಳೂರು ನೋಡಿಕೊಂಡು ಬರುವ ದಕ್ಕಾಗಿ ಹೊರಡಬೇಕೆಂದಿದ್ದೇವೆ. ಹಿರಿಯಣ್ಣನು ನಿನ್ನನ್ನು ಕರೆತ ರಲು ಹೇಳಿದ್ದರಿಂದ ಬಂದವು. ಮಹಾ:-ತಮ್ಮಗಳಿರಾ, ನಿಮ್ಮ ಯೋಜನೆಯು ಅತ್ತು ಶೃಷ್ಟವಾದದ್ದೇನೋ ನಿಜ, ಆದರೆ ಈಚೆಗೆ ನಮ್ಮ ಹುಡುಗರ ಹಾಗು ಮನೆಯ ಹಿರಿಯಳ ಅಜಾಗರೂಕತೆಯ ಮೂಲಕ ಮನೆಗಲ ಸಗಳೆಲ್ಲ ಸರಿಯಾಗಿ ನಡೆಯದ್ದರಿಂದಲೂ, ಬೆಳಗಾದರೆ ಸುಗ್ಗಿ ಕಾಲವು ಬಂದಿತಾದ್ದರಿಂದಲೂ ಈ ಸಮಯದಲ್ಲಿ ನಾನು ಇಲ್ಲಿಂದ ಹಿಂದು ತಾಸು ಕೂಡ ಅಗಲಲಾರೆನು; ಹಾಗೆ ಬಿಟ್ಟು ಹೋದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಾರದು, ನನ್ನ ಮನೆಯಲ್ಲಿ ನನ್ನ ಹಿಂದೆ ಕಾಳಜಿಯಿಂದ ನೋಡಿಕೊಳ್ಳುವವರು ಯಾರೂ ಇರುವದಿಲ್ಲ. - ನಾರಾ:-ಅದೇಕೆ? ಷಣ್ಮುಖ ಹಾಗು ಗಜಾನನರಿರುವರಲ್ಲ? ಅವರು ಕೆಲದಿನಗಳ ವರೆಗೆ ಗೃಹಕೃತ್ಯಗಳನ್ನು ಸಾಗಿಸಲಿಕ್ಕಿಲ್ಲವೇ? ಆವರು ಈಗ ಹಾಗೂ ವಯಸಿ.ಕ ಬಂದಿರುವರು. ಈಗ ಕಲಿಯ ದಿದ್ದರೆ, ಮತ್ಯಾವಾಗ ಅವರು ಇದನ್ನು ಕಲಿಯಬೇಕು?

  • ಮಹಾ:-ಮಹಾಭಾರತಾ, ನಾರಾಯಣಾ! ಈ........ ಮಕ್ಕಳಲ್ಲಿ ಸ್ವಲ್ಪಾದರೂ ವಿವೇಕವಿದ್ದರೆ ನನ್ನ ಗತಿಯು ಹೀಗೇಕಾ ಗುತ್ತಿತ್ತು? ಇವರಿಬ್ಬರಲ್ಲಿ ಒಬ್ಬ ನೂ ಯೋಗ್ಯನಿರುವದಿಲ್ಲ ಕಾರ್ತಿಕ