ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಲೆ [ಕರ್ನಾಟಕಕ್ಕೆ ಸರಿ! ಈ ತಿನಸುಬಕ್ಕನಿಗೆ ಪ್ರತಿದಿನ ಬೆಳಗಾದ ಕೂಡಲೆ ಹಿಂದೂ ಕಾಲು ಮಣ ಸಿದ್ಧಿ (ಪಂಚಖಾದ್ಯವು) ಯು ಬೇಕಂತೆ! ತಮ್ಮಾ, ಜಗತ್ತಿನ ವಿಚಿತ್ರತನವನ್ನಷ್ಟೆಂದು ಹೇಳಲಿ! ಇಂಥ ಈ ತಿನಸು ಗಳಿಗೆ “ಸಿದ್ದಿ ವಿನಾಯಕ'ನೆಂಬ ಪೂಜ್ಯ ಹೆಸರುಬಂದಿದೆ ನೋಡು! ನಾರಾ:.ಅಣ್ಣಾ, ಮಾಡುವದೇನು? ಕೃತಕರ್ಮದ ಫಲವು ಯಾರಿಗೂ ಬಿಟ್ಟಿರುವದಿಲ್ಲವಲ್ಲ? ತಾರುಣ್ಯದಲ್ಲಿ ನೀವೇ ಸರಿಯಾಗಿ ಸಂಸಾರಮಾಡಿದ್ದರೆ, ವೃದ್ಧಾಪ್ಯದಲ್ಲಿ ನಿನಗೆ ಕೆ ಈ ಪರಿತಾಪವುಂಟಾ ಗುತ್ತಿತ್ತು? ಇರಲಿ, ಆಣಾಮೊದಲಿನಂತೆ ಅತ್ತಿಗೆಯು ಆಗಾಗ್ಗೆ ಸಿಟ್ಟಾಗಿ, ಮಕ್ಕಳನ್ನು ಕಟ್ಟಿಕೊಂಡು ತವರು ಮನೆಯ ಹಾದೀ ಹಿಡಿಯುವದಿಲ್ಲವಷ್ಟೇ? ಮಹಾ:- ಇಲ್ಲ; ಇಷ್ಟು ವಯಸ್ಸಾದ ಮೇಲೆ, ಮೇಲಾಗಿ ಹಿಂದಲ್ಲ- ಎರಡು ಮಕ್ಕಳು ಆದಮೇಲೆ, ತವರಮನೆಗೆ ಹೋಗುವಬಗೆ ಹೇಗೆ? ಹೋದರೂ ಅಲ್ಲಿ ಅತ್ತಿಗೆ-ನಾದಿನಿಯರ ಉಪಟಳದೆ ಮುಂದೆ ಇವಳ ಬೇಳೆ ಬೇಯುವ ಬಗೆ ಹೇಗೆ? “ಇರಲಿ ಅಣ್ಣಾ, ನಾವಿನ್ನು ಹೊರಡುವವು' ಎಂದು ಹೇಳಿ, ನಾರಾಯಣನು ಇಂದ್ರಾದಿಗಳೊಡನೆ ಮಹಾದೇವನಿಗೆ ನಮಸ್ಕರಿಸಿ ಎದ್ದು ನಿಲ್ಲಲು, ತಮ್ಮಗಳಿರಾ, ಮಧ್ಯಾಹ್ನಕ್ಕೆ ಬಂದ ತಾವು ಹಾಗೆಯೇ ಹೋಗುವದುಂಟೆ? ಇಂದು ಈ ಬಡವನಲ್ಲಿಯೇ ಮಧ್ಯಾಹ್ನವನ್ನು ತೀರಿಸಿಕೊಂಡು ಹೋಗಿರಿ” ಎಂದು ಕೈಲಾಖಾಧಿ ಪತಿಯು ನಾರಾಯಣಾದಿಗಳನ್ನು ಬಿನ್ನವಿಸಲು, ಸರ್ವಾಂತರ್ಯಾ ಮಿಯಾದ ನಾರಾಯಣನು ಅವನನ್ನು ಕುರಿತು ಮನದಲ್ಲಿ):- ಅಣ್ಣಾ, ಬರಲಿಕ್ಕೆ ನಾವೇನೂ ಅನುಮಾನ ಮಾಡುವದಿಲ್ಲ; ಆದರೆ ಒಳಗೆ ನಿನಗಾದರೂ ಹಿಟ್ಟಿನ ಹೋಳಿಗೆಗಳು ಉಳಿದಿವೆಯೋಇಲ್ಲವೋ ಯಾರು ಬಲ್ಲರು? ಎಂದು ಆ೦ದು, ಬಹಿರಂಗವಾಗಿ:- ಇಂದೇ ಸಂಜೆಯ ರೈಲಿಗೆ ಹೊರಡಬೇಕಾದುದರಿಂದ ಅವಕಾಶವಿಲ್ಲ. ಈಗಲೆ ಹೊರಡುವೆವೆಂದು ಹೇಳಿ ಹೊರಟರು (ಕರ್ನಾಟಕದೊಳಗಿನ ನನ್ನ ಸ್ಥಾನಗಳಿಗೆ ಬಂದಾಗ, ನನಗೆ ಭೆಟ್ಟಿ ಕೂಡದೆ ಹೋಗಕೂಡದು ಕಾಪಾ” ಎಂದು ಅಂದು, ಶಿವನು ಲಗು ಬಗೆಯಿಂದ ಒಳಹೊಕ್ಕನು.