ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ [ಕರ್ನಾಟಕಕ್ಕೆ ಬೆಲೆಯು ಹೆಚ್ಚು ಕಡಿಮೆಯೆಂದು ತೋರಲು, ಕಡೆಗೆ ದೇವೇಂದ್ರನು ಅದನ್ನು ೫೬ರೂಪಾಯಿಗಳಿಗೆ ಮಾರಿ, ಬೆಳ್ಳಿಯ ರೋಖ ರೂಪಾಯಿ ಗಳನ್ನು ತಂದು, ಖಾನಾವಳಿಗೆ ಕೊಡತಕ್ಕ ಷ್ಟು ಕೊಟ್ಟು, ಉಳಿದ ರೂಪಾಯಿಗಳನ್ನು ನಾರಾಯಣನ ಸ್ವಾಧೀನ ಮಾಡಿದನು. ನಂತರ ಅವರೆಲ್ಲರೂ ಪುನಃ ಗಣಪತಿಯ ಮಂದಿರಕ್ಕೆ ನಡೆದರು, ಅಲ್ಲಿ ವಿಶ್ರಮಿಸುವಾಗ ಬ್ರಹ್ಮನು ಅತ್ಯಂತ ಕ್ರೋಧದಿಂದ ನಾರಾಯಣ ನನ್ನು:-ಭ್ರಷ್ಟಾ, ಕುಲಗೋತ್ರಗಳಿಲ್ಲದ ಪಿಶಾಚಿಯೇ! ಕಂಡ ಕಂಡು ಶೂದ್ರಸ೦ಪರ್ಕವಾದ ಅನ್ನವನ್ನು ನೀನು ಸ್ವತಃ ಉಣ್ಣು ತಿರುವಿಯಲ್ಲದೆ, ಪರರಿಗೂ ಉಣಿಸುತ್ತಿರುವೆ! ಈ ಭೂಲೋಕದೊಳ ಗಿನ ನರರಿಗೆ ಹಪ ಬಿಡುವದರಲ್ಲಿ ಅರ್ಥ ವೇನಿದೆ? ನಿಮ್ಮ೦ಥ ಮಹಾ ಜ್ಞಾನಿ, ಕುಲಕ೦ಟಕ ದೇವತೆಗಳೇ ಈ ಪ್ರಕಾರದ ಅನಾಚಾರಕ್ಕೆ ಹೇಸದಿರಲು, ಪಾಪ! ಈ ಅಜ್ಞಾನಿಗಳಾದ ನರರ ತಪ್ಪೇನು? ಎಂದು ಸಿಟ್ಟು ಮಾಡಿದನು ಆಗ ನಾರಾಯಣನು ಪಿಳ್ಳೆ ನ್ನಲಿಲ್ಲ. - ವಾಮಕುಕ್ಷಿಯಾದ ಬಳಿಕ ದೇವಗಣಗಳು ಚಿಲಿಮೆಯನ್ನು ಹತ್ತಿಸಿ, ಸರತಿಯಂತೆ ಹಿಂದೊಂದು ಜುರುಕಿ ತಂಬಾಕ ಸೇದಿ, ಭಭಲಾನಾಥನ ನಮಸ್ಕರಣ ಮಾಡಿ, ಊರೊಳಗೆ ತರು ಗಾಡಲಿಕ್ಕೆ ನಡೆದು, ದಾರಿಯಲ್ಲಿ ಸಂಸ್ಥಾನಿಕರ ಭವ್ಯವಾದ ವಾಡೆಯು ಹತ್ತಿತು. ಆಗ ಬ್ರಹ್ಮನು ವರುಣನನ್ನು ಕುರಿತು:- ಇದಾರದೆಂದು ಕೇಳಲು, ವರುಣನು ಇದು ಇಲ್ಲಿಯ ಸಂಸ್ಥಾನಿಕರ ವಾಡೆಯು, ಈ ಮಿರಜಿಯ ಸಂಸ್ಥಾ ನಿಕನು ಮಹಾ ವಿದ್ಯಾಂಸನೂ, ದೇವ-ಬ್ರಾಹ್ಮಣರಲ್ಲಿ ವಿಶ್ವಾಸವುಳ್ಳವನೂ ಆಗಿರುವನಲ್ಲದೆ, ತನ್ನ ಪ್ರಜೆಗಳನ್ನು ಪುತ್ರವತಿ ಪಾಲಿಸುವ ಧರ್ಮದವನಿರ.ತಾನೆ. ಕರ್ನಾ ಟೆಕದೊಳಗಿನ ಬೇರೆ ಚಿಕ್ಕ ದೊಡ್ಡ ಸಂಸ್ಥಾ ನಿಕರಿಗಿಂತಲ ಈತನು ಅತ್ಯಂತ ಪ್ರಜಾವತ್ಸಲನು. ಈ ಧರ್ಮಾತ್ಮನು ಪಟ್ಟವೇರಿದಂದಿನಿಂದ ಇಂದಿನ ತನಕ ತನ್ನ ಪ್ರಜೆಗಳ ಮೇಲೆ ಯಾವತರದ ಹೂಸ ಕರಗ ಇನ್ನೂ ಕೂರಿಸಿರುವದಿಲ್ಲ. ಅಷ್ಟೇ ಅಲ್ಲ; ಈ ಸಂಸ್ಥಾ ನಿಕನ ಅದಾ ಯವು ಈತನ ಇತರ ಬಂಧು ಸಂಸ್ಥಾನಿಕರಿಗಿಂತಲೂ ಅತ್ಯಲ್ಪವಿ ದ್ದರೂ ಅವನು ಅದನ್ನು ಹೆಚ್ಚಿಸಿಕೊಂಡಿರುವದಿಲ್ಲ! ಈತನ ಬಂಧು ಗಳು-ಸಾಂಗಲಿ, ಜಮಖಂಡಿ, ಕುರಂದವಾಡ ಸಂಸ್ಥಾನಿಕರು-ಮದ ಲಿನ ೩-೪ ಪಟ್ಟು ಕರ ಹೆಚ್ಚಿಸಿ, ತಮ್ಮ ಆದಾಯವನ್ನು ಹೆಚ್ಚಿಸಿಕೊಂ