ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ [ಕರ್ನಾಟಕಕ್ಕೆ ಕಚೇರಿಯ, ಜಜ್ಜ ಕೊರ್ಟ, ಮುನಿಸೀಫಕೊರ್ಟ ಕಲೇಕ್ಟರರ ಕಚೇರಿ, ಶಾಲಾಖಾತೆಯ ಕಚೇರಿ, ರೇಲ್ವೆಯ ಈ ಭಾಗದ ಮುಖ್ಯ ಸ್ಥನ ಆಫೀಸು ಮೊದಲಾದ ಪ್ರಮುಖ ಕಚೇರಿಗಳಿರುವವು, ಅಲ್ಲದೆ ಊರಲ್ಲಿ ಬಹು ದೊಡ್ಡ ಪ್ರಮಾಣದಿಂದ ವ್ಯಾಪಾರವಾಗುವದರಿಂದ ನಾನಾ ಪ್ರಕಾರದ ದೊಡ್ಡ ದೊಡ್ಡ ಅಂಗಡಿಗಳೂ ಇರುತ್ತವೆ. ಇಲ್ಲಿಯ ನಿವಾಸಿಗಳಲ್ಲಿ ಬಹು ಜನರ ಮಾತೃಭಾಷೆಯು ಕನ್ನಡವಾ ಗಿದ್ದ ರೂ, ಬೆಳಗಾವಿಯನ್ನು ಸುತ್ತುಗಟ್ಟಿರುವ ದಕ್ಷಿಣ ಮಹಾ ರಾಷ್ಟ , ಸಂಸ್ಥಾ ನಗಳ ವರ್ಚಸ್ಸಿನಿಂದಲೋ, ಈ ಜಿಲ್ಲೆಯಿಂದ ಉತ್ತರಕ್ಕೆಲ್ಲ ಕೇವಲ ಮರಟಗರ ನಾಡಾದದ್ದರಿಂದ ಇಲ್ಲಿಯ ಕನ್ನಡಿಗರು ಪ್ರಯತ್ನ ಎನ, ಕ ಎಡಿಇಷ್ಟ ಭಾಷೆಯನ್ನೇ ಆಡು ತಾರೆ, ಯಾವನೂ ಕನ್ನಡ ಭಾಷೆಯ ಅಭಿಮಾನಿಯು ಇವರಿಗೆ ಗಂಟು ಬಿದ್ದು, ಹೀಗೇಕೆ ನಡೆಯುವಿರೆಂದು ಕೇಳಿದರೆ, ಇವರು ಆ ಕಟ್ಟಾ ಕನ್ನಡದಭಿಮಾನಿಗೆ.(ಆರೆ ಅರಸು, ಮುಸಲ್ಮಾನಿ ಸರಸ, ಕನ್ನಡ ಬಿರುಸು' ಎಂದು ನಾಣ್ಮಡಿಯೇ ಇರುವದರಿಂದ, ನಾವು ಆ ಮುಠಾಳ ಕನ್ನಡ ಭಾಷೆಗೆ ಅರ್ಧಚಂದ್ರ ತೋರಿರುವವೆಂದು ಸ್ಪಷ್ಟ ವಾಗಿ ಹೇಳುತ್ತಾರೆ! ಸ್ಟೇಶನ್ನಿನಿಂದ ಊರೋಳಗೆ ಹೋಗುವಾಗ ಬ್ರಹ್ಮನು:- ವರುಣಾ, ಬೆಳಗಾವಿಯಲ್ಲಿ ಸದ್ಯದ ರಾಜಕೀಯ-ಸಾಮಾಜಿಕ ಚಳ ವಳಿಗಳು ಎಷ್ಟರಮಟ್ಟಿಗೆ ಯಶಸ್ವಿಗಳಾಗಿರುವವು? ವರುಣ:-ಬೆಳಗಾವಿಯ ಭಾಗದೊಳಗೆ ಪ್ರತಿಯೊಂದು ಕಾರ್ಯದಲ್ಲಿ ಕೃತಿ ಮಾಡಿ ತೋರಿಸುವವರಿಗಿಂತ ಮಾತಾಡಿ ಮೆರೆ ಯುವವರೇ ವಿಶೇಷವೆಂದು ಜನರಾಡಿಕೊಳ್ಳುತ್ತಿರುವರು, ಈಚೆಗೆ ಇಲ್ಲಿ ಹಲಕೆಲವು ರಾಜಕೀಯ ಪುಢಾರಿಗಳು ಹೆಸರುವಾಸಿಗಳಾಗಿರು ವರು, ಇಲ್ಲಿಯ ಸಾಮಾಜಿಕ ಸುಧಾರಣೆಯು ಕೇವಲ ಪುಣೆ ಪ್ರಾಂತದ ಮರಾಟಿಗರನ್ನು ಹೆಚ್ಚಾಗಿ ಅನುಸರಿಸುವದು, ಇಲ್ಲಿಯ ಭಾಷೆಯ ಸೊಬಗಂತೂ ವಿಚಿತ್ರವಿದೆ. ಇಲ್ಲಿಯ ರಹಿವಾಸಿಗಳು ಕನ್ನಡ ಮಾತೃಭಾಷೆಯವರೇನೋ ನಿಜ, ಆದರೆ ಅವರಿಗೆ ಕನ್ನಡ ಮಾತಾಡುವದು ಕೀಳುತರವಾಗಿ ಅನಿಸುವದು; ಮರಾಠೀಭಾಷೆಯು ಸರಿಯಾಗಿ ಬರದು, ಹೀಗೆ ಗೊಂದಲವಾಗಿ ಅವರು ಹಿಂದು ಬಗೆಯ ಮಿತ್ರ ಭಾಷೆಯನ್ನು ರೂಢಿಸಿರುವದು