ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ [ಕರ್ನಾಟಕಕ್ಕೆ ನಡುವೇ ಬಾಯಿ ಹಾಕಿ ನಾರಾಯಣನು:-ತಮ್ಯಾ ವರುಣಾ, ಈ ಕರ್ಣಾಟಕದಲ್ಲಿ ಅಲ್ಲಲ್ಲಿ ಕಾಣುವ ಸುಂದರವಾದ ದೇವಾಲಯ ಗಳು ಅ ಜಕಣಾಚಾರ್ಯನಿಂದಲೇ ನಿರ್ಮಿಸಲ್ಪಟ್ಟಿರುವವೆಂದೆನ್ನು ವರು! ಅಂಥ ಪ್ರವೀಣಶಿಲ್ಪಜ್ಞನಾದ ಆ ಜಕಣಾಚಾರ್ಯನಾರು? ಅವನು ಈ ಎಲ್ಲ ದೇವಾಲಯಗಳನ್ನು ಯಾಕೆ ನಿರ್ಮಿಸಿದನು? ವರುಣ:-ನಾರಾಯಣಾ, ನಿನಗರಿಯದ ಸಂಗತಿಯು ಆವ ದಿರುವದು? ಆದರೂ ಕೇಳುತ್ತಿರುವಿಯಾದ್ದರಿಂದ, ಆ ಬಗ್ಗೆ ನನಗೆ ಗೊತ್ತಿದ್ದುದನ್ನು ತಿಳಿಸುತ್ತೇನೆ. ಜಕಣಾಚಾರ್ಯನೆಂಬ ಶಿಲ್ಪಿಯು ಶಾಪಪೀಡಿತನಾದ ಒಬ್ಬ ದೇವತೆಯು, ಶಾಪವಚನದಿಂದ ಅವನು ಜೈನಪಂಥದಲ್ಲಿ ಜನ್ಮ ತಾಳಿದ್ದ ನೆಂದೂ, ತನ್ನ ಶಾಪ ಪರಿಹಾರಾರ್ಥ ವಾಗಿ ಅವನು ಈ ಕರ್ನಾಟಕದಲ್ಲಿ ಎಷ್ಟೋ ದೇವಾಲಯಗಳನ್ನು ಹಿಂದೇ ರಾತ್ರಿಯಲ್ಲಿ ಕಟ್ಟಿರುವನೆಂದೂ ಆಖ್ಯಾಯಿಕೆಯಿದೆ ಹಿಂದೇ ರಾತ್ರಿಯಲ್ಲಿ ಈ ನಾಡ ತುಂಬ ಗುಡಿ ಕಟ್ಟುವ ಪ್ರಸಂಗ ಬಂದದರಿಂದ ಅವನು ಕಟ್ಟಿದ ಗುಡಿಗಳಲ್ಲಿ ಕೆಲವು ಗೋಪುರವಿಹೀನವಾಗಿವೆ; ಕಲವುಗಳ ಪೌಳಿಗಳು ಅರ್ಧಮರ್ಧವಾಗಿವ; ಕೆಲವುಗಳಲ್ಲಿ ಬರೇ ಕಂಬಗಳು ನಿಂತಿವೆ. ಅದರಿಂದಲೇ ಈ ನಾಡಿನಲ್ಲಿ ಈ ವಿಷಯ ವಾಗಿ ಹಿಂದು ನಾಣ್ಣುಡಿಯು (ಜಕಣಾಚಾರ್ಯರ ಕಟ್ಟಡ, ಎಲ್ಲಿಗೆ ಆಯಿತೋ ಅಲ್ಲಿಗೇ ಸರಿ) ಪ್ರಚಾರದಲ್ಲಿರುತ್ತದೆ ಹೀಗೆಂದು ಮಾತ ನಾಡುತ್ತ ನಡೆದಿರಲು, ನಮ್ಮ ದೇವಗಣಗಳು ಶೀ ತ್ರಿಕುಟೇಶ್ವರ ದೇವಾಲಯಕ್ಕೆ ಬಂದರು. ನಂತರ ಎಲ್ಲರೂ ಶ್ರೀ ತ್ರಿಕುಟೇಶ್ವರನ ಧೂಲಿದರ್ಶನ* ತಕ್ಕೊಂಡು ಹೊರಗೆ ಬರುತ್ತಿರಲು, ಆ ದೇವಾಲ ಯದ ಅರ್ಚಕನು ಈ ಮಹಾತ್ಮರನ್ನು ತನ್ನ ಬಿಡಾರಕ್ಕೆ ಕರೆ ದೊಯ್ದು ಇವರ ಸ್ನಾನ-ಆಯ್ಕೆ ಕಗಳ ವ್ಯವಸ್ಥೆ ಮಾಡಿದನು; ಹಾಗು ಭೋಜನಕ್ಕೆ ತನ್ನಲ್ಲಿಗೆ ಆಮಂತ್ರಣವಿತ್ತನು, ಬ್ರಹ್ಮಾದಿಗಳು ಭೋಜನಾನಂತರ ಶ್ರೀ ವೀರನಾರಾಯಣನ ದರ್ಶನ ತಕ್ಕೊಂಡು, ಕೊನೇರಿ ತೀರ್ಥವನ್ನು ಸಂದರ್ಶಿಸಿ, ಶ್ರೀ ತೋಟದ ಸ್ವಾಮಿಗಳ ಮಠವನ್ನು ನೋಡಲು ನಡೆದರು. ಆಗ ವರ.ಣನು:-ಅಜ್ಜಾ, ಈ ಊರಲ್ಲಿ ವೀರಶೈವರ ಶ್ರೀತೋಟದ ಸ್ವಾಮಿಗಳವರ ಮಠವಿರುವಂತ, ಇಲ್ಲಿಂದ ನಾಲ್ಕು ಹರದಾರಿಗಳ ಮೇಲಿರುವ ಶಿರಹಟ್ಟಿ ಎಂಬ ಗ್ರಾಮದಲ್ಲಿ ಈ ನಾಡಿನಲ್ಲೆಲ್ಲ ಪ್ರಸಿದ್ಧರಾದ ಶ್ರೀ ಫಕೀರಸ್ವಾಮಿ