ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] ಯಮನೂರು, ಅದು ಇಲ್ಲಿಂದ ನಾಲ್ಕು ಹರದಾರಿಯ ಮೇಲೆ ಇದೆ. ಅಲ್ಲಿಯ ವಾರ್ಷಿಕ ಜಾತ್ರೆಯು ಇನ್ನೊಂದು ತಿಂಗಳಿಗೆ ಇದೆ ನಾನು ಈ ಸಾರೆ ಅಲ್ಲಿಯ ತಲೆಪಟ್ಟಿಯ ಕರಿದ ಗುತ್ತಿಗೆ ಹಿಡಿಯಬೇಕೆಂದು ಇಂದು ಧಾರವಾಡದ ಕಲೆಕ್ಕರರೆದುರಿಗೆ ಕಿ ಬಗ್ಗೆ ಆಗುವ ಲಿಲಾ ವಿಗೆ ನಡೆದಿರುವೆನು, ಎಂದನು. ಬ್ರಹ್ಮನು ಆಶ್ಚರ್ಯಾನ್ವಿತನಾಗಿ:-ಮನುಷ್ಯರಿಗೆ ತಲೆಪಟ್ಟಿ ಯೇ? ಇದೆಂಥ ವಿಚಿತ್ರವು! ಆ ಯಮನೂರಲ್ಲಾಗುವ ಜಾತ್ರಯು ಯಾರದು? ಅಲ್ಲಿ ಪ್ರತಿವರುಷ ಎಷ್ಟು ಜನರು ಕಲೆಯುವರು?ಎಂದು ಪ್ರಶ್ನೆ ಮಾಡಲು,

  • ಎರ:ಣನು:-ಅಜ್ಞಾ, ಅಲ್ಲಿ ಮಹಮ್ಮದೀಯ ಧರ್ಮದ ಒಬ್ಬ ಪೀರಸಾಹೇಬರ ಗೋರಿಯಿರುತ್ತದೆ. ಆ ಪೀರಸಾಹೇಬರ ಉರ್ಸು ಪ್ರತಿವರ್ಷ ಫಾಲ್ಲು ಣಮಾಸದಲ್ಲಿ ಆಗುತ್ತದೆ, ಅಲ್ಲಿಗೆ ಆಗ ಹಿಟ್ಟಿಗೆ ಸರಾಸರಿ ಹಿ೦ದು ಲಕ್ಷದವರೆಗೆ ಜನರು ಬಂದು ಹೋಗುತ್ತಾರೆ. ಅಲ್ಲಿಯ ಆ ಪೀರರ ಸಾನವು ಬಹು ಜಾಗೃತ ಸ್ಥಾನವು ಕಾಮುಕರ ಇಷ್ಟಾರ್ಥಗಳು ಬಹು ಬೇಗ ಈಡೇರುತ್ತ ವಂತೆ; ಆದರೆ ಅಜ್ಞಾ, ನಿಮ್ಮೆದುರಿಗೆ ಹೇಳಲಿಕ್ಕೆ ನಾಚಿಕೆ ಬರು ಇದೆ ಅಲ್ಲಿಗೆ ಹೋಗುವ ಯಾತ್ರಿಕರಲ್ಲಿ ೧೦೦ಕ್ಕೆ ೯೦ರಂತೆ ಆಷಕ. ಮಾಷಕ ಪಾತ್ರಗಳೇ ಆಗಿರುತ್ತವೆ; ಹಾಗು ಅಲ್ಲಿ ಅಸಂಖ್ಯ ಅಗ್ನಿ ವಾಹನ( ಕುರಿ) ಗಳ ಹನನವು ಎಗ್ಗಿಲ್ಲದೆ ಜರಗುತ್ತದೆ. ಆದರಿಂದ ಆ ಉರುಸಿನ ಕಾಲಕ್ಕೆ ಆ ಸ್ಥಾನವನ್ನು ನೋಡ ಹೋಗುವದು ಶಿಷ್ಟ ಸಮ್ಮತವಾಗಲಾರದು
  • ಅಷ್ಟರಲ್ಲಿ ಪೂರ್ವದಿಕ್ಕಿಗೆ ಒಂದೆರಡು ಎತ್ತರವಾದ ಗುಡ್ಡ ಗಳು ಕಾಣಿಸಲು, ಬ್ರಹ್ಮನು ವರುಣನನ್ನು ಕುರಿತು:-ವರುಣಾ, ಆಚ್ಛಾದನವಿಹೀನ ಕಲಶಗಳಂತೆ ತೋರುವ ಆ ಗುಡ್ಡಗಳು ಯಾವವು?” ಎಂದು ಪ್ರಶ್ನೆ ಮಾಡಿದನು.

- ಅದಕ್ಕೆ ವರುಣನು:-. ಇತ್ತ ಕಾಣುವ ಈ ಗುಡ್ಡವು ನವಲ ಗುಂದದ ಗುಡ್ಡ ವ; ಅತ್ತ ಕಾಣುವದು ನರಗುಂದದ ಗುಡ್ಡ ವು. ನರಗುಂದವು ಮೊದಲು ಸಂಸ್ಥಾನಿಕರ ವಶದಲ್ಲಿತ್ತು; ಆದರೆ ಕೈಕಳ ಗಿನವರ ದ.ರಾಲೋಚನೆಗೊಳಗಾಗಿ ಅಲ್ಲಿಯ ಸಂಸ್ಥಾನಿಕನು ಕ್ರಿ. ಶ, ೧೬೫೮ನೇ ಇಸ್ವಿಯಲ್ಲಿ ಇಂಗ್ಲಿಷಸರಕಾರದ ವಿರುದ್ಧ ಬಂಡಾಯ