ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ [ಕರ್ನಾಟಕಕ್ಕೆ ಗೋಕರ್ಣ, ದೇವತೆಗಳು ಭೂಲೋಕಕ್ಕೆ ಬಂದು ಬಹಳ ದಿನಗಳಾಗಿರ ದಿದ್ದರೂ ಮಾಘಮಾಸದ ಅಸಿತಪಕ್ಷವು ಪ್ರಾರಂಭವಾಗಿ ೯-೧೦ ದಿನ ಗಳಾಗಿದ್ದವು ಅದರಿಂದ ವರುಣನು ಮನದಲ್ಲಿ ಏನೋ ಆಲೋ ಚಿಸಿ ಬ್ರಹ್ಮನನ್ನು ಕುರಿತು:- ನೀವು ಹಾಗೂ ಕರ್ಣಾಟಕಕ್ಕೆ ಬಂದಿ ರುತ್ತಿರಿ. ಈ ಕರ್ಣಾಟಕದಲ್ಲಿಲ್ಲ, ಅದೇಕೆ ಇಡಿ ಭೂಮಂಡಲದಲ್ಲಿ ಪ್ರಖ್ಯಾತವಾದ ಗೋಕರ್ಣೆಶ್ವರನ ದರ್ಶನವನ್ನು ತಕ್ಕೊಂಡು ಹೋಗುವದು ವಿಹಿತವಾಗಿರುತ್ತದೆ, ಮೇಲಾಗಿ ಗೋಕರ್ಣಕ್ಷೇತ್ರದ ಉತ್ಸವವೂ ಸಮೀಪಿಸಿದೆ, ನಾಳಿನ ಮಾಘ ಬ||$ ೧೪ ಗೇ ಅಲ್ಲಿಯ ಉತ್ಸವವಿರುತ್ತದೆ. ಆ ಸ್ಥಾನವನ್ನು ನೋಡಿಕೊಂಡು ಮಹೇಶ್ವರನ ಬೆಟ್ಟ ತಕ್ಕೊಂಡು ಮುಂದೆ ಹೋಗುವಾ, ಎಂದನು. ಬ್ರಹ್ಮನ ಹೊರತು ಮಿಕ್ಕವರಿಗೆ ಅದು ಸಮ್ಮತವಾಯಿತು, ಮನೆಯಲ್ಲಿ ತನ್ನ ತರುಣ ಹೆಂಡತಿಯೊಬ್ಬಳೇ ಇರುವಳೆಂಬ ನವವನ್ನೇ ಅವನು ಪುನಃ ಮುಂದೆ ಮಾಡಿದನು; ಆದರೆ ಉಳಿದವರು ಮುಗುಳು ನಗೆ ನಕ್ಕು ಅವನ ಆ ನೆವವನ್ನು ಅಲ್ಲಗಳೆಯಲು, ಅವನು ಮೌನ ನಾಗಿ ಅರ್ಧಸಮ್ಮತಿಯನ್ನು ತೋರಿಸಿದನು ಮರುದಿನ ಬೆಳಿಗ್ಗೆ ದೇವಗಣಗಳು ಹುಬ್ಬಳ್ಳಿಗೆ ಬಂದು, ಅಲ್ಲಿಂದ ನೆಟ್ಟಗೆ ಗೋಕರ್ಣಕ್ಕೆ ಹಿಂದು ಬಾಡಿಗ ಮೋಟಾರ ಬಂಡಿಯನ್ನು ಗೊತ್ತು ಮಾಡಿ ಕೂಂಡು ನಡೆದರು. ಕಲಘಟಗಿ, ಮೆಲ್ ಗೈ ಯಲ್ಲಾಪುರಗಳನ್ನು ದಾಟ ದೇವತ ಗಳ ಮೋಟಾರಕಾರು ಅರಬೈಲು ಘಟ್ಟದೊಳಗೆ ನಡೆಯಿತು ಅಲ್ಲಿಯ ಆ ಭಯಂಕರ ದಟ್ಟಡವಿ, ಗುಡ್ಡ-ಗಂಜ್ವರಗಳ ವಿಕರಾಳ ಸ್ವರೂಪ ಗಳನ್ನು ನೋಡಿ ಪ್ರಯಾಣಿಕರ ಹೌಹಾರುವದು; ದನ-ಕರುಗಳು ಎದೆಗುಂದುವವು; ಅಲ್ಲಿಯ ಹುಲಿ, ಚಿರ್ಚ ಮೊದಲಾದ ಹಿಂದ್ರ ಶಾಪದಗಳ ಕಾಟವಂತೂ ಹೇಳಲಾಗಲ್ಲ ಅ೦ತೇ ಆ ಘಟ್ಟದೂ ಇಗ ಪ್ರವಾಸ ಮಾಡುವ ಚಕ್ಕಡಿ-ಬಂಡಿಕಾರರು ತಮ್ಮ ವಾಹನ ಗಳನ್ನು ರಾತ್ರಿಯ ಸಮಯದಲ್ಲಿ ದೀಪದ ಬೆಳಕಿನಲ್ಲಿ ಸಾಲುಗಟ್ಟಿ ಕೊಂಡು ಸಾಗಿಸುತ್ತಾರೆ, ನಮ್ಮ ದೇವತೆಗಳ ಯಾಂತ್ರಿಕ ವಾಹ ನವು ಕ್ಷಣಕ್ಷಣಕ್ಕೆ ( ಭೋಂ ಭೂಂ ಎಂದು ಧ್ವನಿಗೆಯ್ದು ತನ್ನ