ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖಕಳ ಸದುದ್ದೇಶದ ಬಗ್ಗೆ ಎರಡು ಮಾತುಗಳು ಅma ೮ನ್ನಡದಲ್ಲಿ ಇಲ್ಲದ ಪುಸ್ತಕಗಳನ್ನು ಬರೆಯುವದು ಲೇಖಕಕ ಕರ್ತ ವ್ಯವಷ್ಟೇ; ಅದರಂತೆ ಕರ್ನಾಟಕಕ್ಕೆ ದೇವತೆಗಳ ಆಗಮನ'ವೆಂಬ ಕ ಹೊಸ ಮಾದರಿಯ ಪುಸ್ತಕವನ್ನು ಬರೆದು ಪ್ರಸ್ತುತ ಲೇಖಕರು ಕನ್ನಡಿ ಗರಿಗೆ ಮಹದುಪಕಾರ ಮಾಡಿರುತ್ತಾರೆ, ಈ ಪುಸ್ತಕದ ಮುಖಾಂತರ ವಾಗಿ ಕರ್ನಾಟಕದೊಳಗಿನ ಐತಿಹಾಸಿಕ-ಪೌರಾಣಿಕ-ಆಧುನಿಕ ಪ್ರಸಿದ್ಧ ಸ್ಥಳಗಳ ಪರಿಚಯ, ಕರ್ನಾಟಕದಲ್ಲಿಯ ಜನರ ನಡೆ-ನುಡಿಗಳ ದಿಗ್ಗರ್ಶನ, ಪರಪ್ರಾಂತದವರ ಆಚಾರ-ಸ್ವಭಾವಾದಿಗಳ ಯಥಾರ್ಥಜ್ಞಾನ ಇವು ತಕ್ಕ ಮಟ್ಟಿಗಾದರೂ ಆಗಬೇಕೆಂದು ಲೇಖಕರು ಇದರಲ್ಲಿ ಪ್ರಯತ್ನಿಸಿರುವರು. ಇದರಲ್ಲಿ ವರ್ಣಿತ ಸ್ಥಳ ಪಾತ್ರಗಳಿಂದ ಅದು ಸಾಧಿಸಿರುವದೆಂದು ಹೇಳ ಬಹು ದ, ಸ್ಥಳಸಂಚಕ್ಕಾಗಿ ಸೇರಿಸzಕ್ಕೆ ಅನೇಕ ವಿಷಯಗಳು ಉಳಿದಿರುವವ, ಮುಖ್ಯವಾಗಿ ಕರ್ನಾಟಕದ ಸಾಮಾಜಿಕ-ಧಾರ್ಮಿಕ ಪ್ರಾಕೃತಿಕ ನಕಾಶವನ್ನು ವಾಚಕರೆ ಕಣ್ಣ ಮುಂದಿರಿಸುವದೇ ಲೇಖಕರ ಉದ್ದೇಶವಾಗಿರುವದು. ಈ ಮಾದರಿಯ ಪುಸ್ತಕಗಳು ನಮ್ಮ ಭರತ ಖಂಡದಲ್ಲಿಯ ಅನ್ಯ ಭಾಷೆಗಳಲ್ಲಿ ಪ್ರಕಟವಾಗಿರುವವು. ಕನ್ನಡದಲ್ಲಿ ಈ ಓಗೊ ಗ್ರಂಥಗಳ ಕೊರತೆಯನ್ನು ಪೂರೈಸುವದಕ್ಕೆ ಈ ಮೇರೆಗೆ ಯತ್ನಿ ಸಿದ್ದು ಸ್ತುತ್ಯವಾಗಿರುವದು, ಪ್ರಸ್ತುತದ ಈ ಪುಸ್ತಕವು ನಮ್ಮ ಕನ್ನಡ ವಾಚಕರಿಗೆ ರುಚಿಸಿದರೆ ಮುಂದೆ ಪ್ರಸಂಗ ನೋಡಿ ಕರ್ನಾಟಕದ ಉಳಿದ ಭಾಗಗಳ ವರ್ಣನೆಯನ್ನು ಮನೋರಂಜಕವಾಗುವಂತೆ ಬರೆಯಬೇಕೆಂದು ಲೇಖಕರ ಉದ್ದೇಶವಿರುವದು, ಅವರ ಈ ಸದುದ್ದೇಶದ ಲಾಭ ಪಡೆ ಯುವದು ನಮ್ಮ ಕನ್ನಡ ವಾಚಕವೃಂದದ ಕರ್ತವ್ಯವಾಗಿರುವದು ವಿಧೇಯ, ತಾ|| ೪-೨-೨೪ ಆರ್. ಟ, ಕರ್ಪೂರ